ಕರ್ನಾಟಕ

karnataka

ರೈಲ್ವೆ ಟಿಕೆಟ್ ಕಲೆಕ್ಟರ್​ ಪ್ರಾಮಾಣಿಕತೆಗೆ ಸಾರ್ವಜನಿಕರಿಂದ ಮೆಚ್ಚುಗೆ..

By

Published : Jan 20, 2020, 9:40 PM IST

ಹಣ ಕಂಡರೆ ಹೆಣ ಕೂಡ ಬಾಯಿ ಬಿಡುತ್ತೆ ಅನ್ನೋ ಸಮಾಜದಲ್ಲಿ‌ ನಾವಿದ್ದೇವೆ. ಆದರೆ, ಪ್ರಯಾಣಿಕರೊಬ್ಬರು ಮರೆತು ಹೋಗಿದ್ದ ಚಿನ್ನದ ಸರ ಹಾಗೂ ಸಾವಿರಾರು ರೂ. ಹಣವನ್ನು ಪುನಃ ಅವರಿಗೆ ಹಿಂದಿರುಗಿಸಿ ರೈಲ್ವೆ ಟಿಕೆಟ್ ಕಲೆಕ್ಟರ್​ವೊಬ್ಬರು ಪ್ರಾಮಾಣಿಕತೆ ಮೆರೆದ ಘಟನೆ ನಡೆದಿದೆ.

Railway Ticket Collector honesty appreciated by the public
ರೈಲ್ವೆ ಟಿಕೆಟ್ ಕಲೆಕ್ಟರ್​ ಪ್ರಾಮಾಣಿಕತೆ ಸಾರ್ವಜಕರಿಂದ ಮೆಚ್ಚುಗೆ

ಬೆಂಗಳೂರು: ಪ್ರಯಾಣಿಕರೊಬ್ಬರು ಮರೆತು ಹೋಗಿದ್ದ ಚಿನ್ನದ ಸರ ಹಾಗೂ ಸಾವಿರಾರು ರೂ. ಹಣವನ್ನು ಪುನಃ ಅವರಿಗೆ ಹಿಂದಿರುಗಿಸಿ ರೈಲ್ವೆ ಟಿಕೆಟ್ ಕಲೆಕ್ಟರ್​ವೊಬ್ಬರು ಪ್ರಾಮಾಣಿಕತೆ ಮೆರೆದ ಘಟನೆ ನಡೆದಿದೆ.

ಟಿಕೆಟ್ ಕೌಂಟರ್ ಚೀಫ್ ನಾಗರಾಜ್ ಪ್ರಾಮಾಣಿಕತೆ ಮೆರೆದ ಅಧಿಕಾರಿ. ಮೈಲಾಡುತುರೈ-ಮೈಸೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಹೇಮಲತಾ ಎಂಬುವರು ಪ್ರಯಾಣಿಸುತ್ತಿದ್ದರು.‌ ರೈಲು ಇಳಿಯುವ ಅವಸರದಲ್ಲಿ ಚಿನ್ನದ‌‌ ಸರ ಹಾಗೂ 13,400 ರೂ. ನಗದು ಇರುವ ಪರ್ಸ್‌ನ ರೈಲಿನಲ್ಲಿಯೇ ಮರೆತು ಹೋಗಿದ್ದಾರೆ.

ಈ ವೇಳೆ ಕಾರ್ಯನಿರ್ವಹಿಸುತ್ತಿದ್ದ ಟಿಕೆಟ್ ಕಲೆಕ್ಟರ್‌ ನಾಗರಾಜ್, ಮಹಿಳೆ ಉಳಿದುಕೊಂಡಿದ್ದ ಸೀಟಿನ ಬಳಿ‌ ಬಂದಾಗ ಪರ್ಸ್ ಇರುವುದು ಗೊತ್ತಾಗಿದೆ.‌ ತಕ್ಷಣ ಪ್ಯಾಸೆಂಜರ್ ಲಿಸ್ಟ್​ನಲ್ಲಿ ಹೇಮಲತಾ ಅವರು ಮಾಹಿತಿ ತಿಳಿದುಕೊಂಡು ಅವರಿಗೆ ಕಳೆದುಹೋಗಿದ್ದ ಸರ ಹಾಗೂ‌ ಹಣ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಇವರ ಈ ಕಾರ್ಯಕ್ಕೆ ಸಾರ್ವಜಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ABOUT THE AUTHOR

...view details