ಬೆಂಗಳೂರು: ಕೋವಿಡ್ -19 ರೋಗಿಗಳಿಗೆ ಹಾಸಿಗೆ ನಿರಾಕರಿಸಬಾರದು, ಒಂದು ವೇಳೆ ನಿರಾಕರಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳ ಮುಖ್ಯಸ್ಥರ ಜೊತೆ ಸಿಎಂ ಸಭೆ ಬಳಿಕ ಮಾತನಾಡಿದ ಅವರು, 50% ಹಾಸಿಗೆಯನ್ನು ಬಿಟ್ಟುಕೊಡಬೇಕು ಎಂದು ಹೇಳಿದ್ದಾರೆ.
ಸಭೆಗೆ 10 ಮೆಡಿಕಲ್ ಕಾಲೇಜುಗಳ ಮುಖ್ತಸ್ಥರು ಬಂದಿದ್ರು. ವೈದೇಹಿ ಕಾಲೇಜು ಮುಖ್ಯಸ್ಥರು ಬಂದಿರಲಿಲ್ಲ. ಅವರಿಗೆ ನೊಟೀಸ್ ಕೊಡಲಾಗ್ತಿದೆ. ಆಕಾಶ್ ಮತ್ತು ಅಂಬೇಡ್ಕರ್ ಮೆಡಿಕಲ್ ಕಾಲೇಜುಗಳು ಕೊರೊನಾ ರೋಗಿಗಳಿಗೆ ಪೂರ್ತಿ ಆಸ್ಪತ್ರೆಗಳನ್ನು ಬಿಟ್ಟು ಕೊಡಲು ಮುಂದಾಗಿವೆ. ಉಳಿದ ಮೆಡಿಕಲ್ ಕಾಲೇಜುಗಳು ಹತ್ತು ದಿನಗಳೊಳಗೆ ಶೇ.50 ರಷ್ಟು ಬೆಡ್ ಗಳನ್ನು ಕೊಡಲು ಒಪ್ಪಿವೆ ಎಂದು ತಿಳಿಸಿದರು.
ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳಿಂದ ಸುಮಾರು 6,000 ಬೆಡ್ ಸಿಗಲಿದೆ. ಬೆಡ್ ನೀಡಲು ನಿರಾಕರಿಸುವ ಆಸ್ಪತ್ರೆಗಳಿಗೆ ಇನ್ನು ಮುಂದೆ ನೋಟೀಸ್ ಸರ್ವ್ ಮಾಡಲ್ಲ. ಎಸ್ ಡಿಆರ್ ಎಫ್ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗುತ್ತದೆ ಎಂದರು. ಸಿಎಂ ಪ್ರತಿದಿನ ನಿದ್ದೆ ಬಿಟ್ಟು ಪ್ರಯತ್ನ ಮಾಡುತ್ತಿದ್ದಾರೆ. ಮಾಧ್ಯಮದಲ್ಲಿ ಏನು ಬರುತ್ತೆ ಅದರ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸಿಎಂ ನನಗೆ ಸೂಚನೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಮಂಜುನಾಥ್ ಪ್ರಸಾದ್ ಫುಲ್ ಟೈಂ ಆಯುಕ್ತರು:
ಬಿಬಿಎಂಪಿ ಆಯುಕ್ತರ ವರ್ಗ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೊನ್ನೆ ಹೈಕೋರ್ಟ್ ಬಿಬಿಎಂಪಿ ಕಾರ್ಯ ವೈಖರಿಗೆ ಅಸಮಧಾನ ವ್ಯಕ್ತಪಡಿಸಿತ್ತು. ಅಧಿಕಾರಿಗಳ ವರ್ಗ ಆಗೋದು ಸಹಜ. ಇನ್ನು ಮುಂದೆ ಮಂಜುನಾಥ್ ಪ್ರಸಾದ್ ಫುಲ್ ಟೈಂ ಬಿಬಿಎಂಪಿ ಆಯುಕ್ತರಾಗಿದ್ದಾರೆ ಎಂದರು.