ಕರ್ನಾಟಕ

karnataka

ETV Bharat / city

ಸಿಲಿಕಾನ್​ ಸಿಟಿಯಲ್ಲಿ ಕೋವಿಡ್​ ಅಬ್ಬರ: ಅಪಾರ್ಟ್ಮೆಂಟ್, ಕಂಪನಿಗಳಲ್ಲಿ ಸಿಸಿಸಿ ಕೇಂದ್ರ ತೆರೆಯಲು ಸಿದ್ಧತೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಲವಾರು ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಟನೆಗಳು, ಅಪಾರ್ಟ್ಮೆಂಟ್ ಮಾಲೀಕರ ಸಂಘ, ಕಂಪನಿಗಳು ಹಾಗೂ ಎನ್ ಜಿಒ ಗಳು ಅವರದೇ ಆವರಣದಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಿ ನಿರ್ವಹಿಸಲು ಆಸಕ್ತಿ ವಹಿಸುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆ ಈ ನಿರ್ಧಾರ ಕೈಗೊಂಡಿದೆ.

By

Published : Apr 30, 2021, 10:17 PM IST

Updated : Apr 30, 2021, 10:50 PM IST

CCC centre
ಸಂಗ್ರಹ ಚಿತ್ರ

ಬೆಂಗಳೂರು:ಬಿಬಿಎಂಪಿ ವಲಯ ಆಯುಕ್ತರ ಅನುಮೋದನೆ ಪಡೆದು ಅಪಾರ್ಟ್ಮೆಂಟ್, ಕಂಪನಿಗಳಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಬಹುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ್ ಗುಪ್ತಾ ಆದೇಶ ಹೊರಡಿಸಿದ್ದಾರೆ.

ಆದೇಶ ಪ್ರತಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಲವಾರು ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಟನೆಗಳು, ಅಪಾರ್ಟ್ಮೆಂಟ್ ಮಾಲೀಕರ ಸಂಘ, ಕಂಪನಿಗಳು ಹಾಗೂ ಎನ್ ಜಿಒ ಗಳು ಅವರದೇ ಆವರಣದಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಿ ನಿರ್ವಹಿಸಲು ಆಸಕ್ತಿ ವಹಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ವಲಯ ಆರೋಗ್ಯಾಧಿಕಾರಿಗಳು ತಮ್ಮ ವಲಯ ವ್ಯಾಪ್ತಿಯಲ್ಲಿ ಒಳಪಡುವ ಈ ಕೇಂದ್ರಗಳಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಿ ನಿರ್ವಹಿಸಲು ಇಚ್ಛಿಸಿದಲ್ಲಿ, ಸಂಬಂಧಪಟ್ಟ ವಲಯ ಆಯುಕ್ತರುಗಳ ಅನುಮೋದನೆ ಪಡೆದು ಮಾರ್ಗಸೂಚಿಗಳನ್ನು ಪಾಲಿಸಿ ಸಿಸಿಸಿ ಕೇಂದ್ರ ತೆರೆಯಬಹುದು ಎಂದು ಆದೇಶಿಸಿದ್ದಾರೆ.

ಅಗತ್ಯ ಸೌಲಭ್ಯಗಳು ಇಂತಿವೆ
೧) ಖಾಲಿ ಮನೆಗಳು, ಫ್ಲಾಟ್ ಗಳು, ಕಮ್ಯುನಿಟಿ ಹಾಲ್​ಗಳು
೨) ಮಕ್ಕಳು ಮಹಿಳೆಯರಿಗೆ ಪ್ರತ್ಯೇಕ ಸೌಲಭ್ಯ
೩) ಅಟ್ಯಾಚ್ ಬಾತ್ ರೂಂ, ಶೌಚಾಲಯ ಇರುವ ಕೋಣೆಗಳು
೪) ಒಂದು ಹಾಲ್ ನಲ್ಲಿ ನಾಲ್ಕರಿಂದ ಆರು ಮಂದಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಬಹುದಾಗಿದೆ.

Last Updated : Apr 30, 2021, 10:50 PM IST

ABOUT THE AUTHOR

...view details