ಬೆಂಗಳೂರು:ಪೂರ್ವಾನುಮತಿ ಪಡೆದರೆ ಮಾತ್ರ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ಕೊಡಲು ಬಿಬಿಎಂಪಿ ಮೈದಾನಗಳ ಪಟ್ಟಿ ಸಿದ್ಧ ಮಾಡಿದೆ.
ತಾತ್ಕಾಲಿಕ ಪಟಾಕಿ ಮಾರಾಟ ಮಳಿಗೆಗಳ ವಿವರ ಹಸಿರು ಪಟಾಕಿ ಮಾರಾಟಕ್ಕೆ ಸ್ಥಳದ ವಿವರ ಚಿಲ್ಲರೆ ವ್ಯಾಪಾರಿಗಳಿಗೆ ಪಟಾಕಿ ಮಾರಾಟ ಮಾಡಲು ಬಿಬಿಎಂಪಿ ಮೈದಾನಗಳಲ್ಲಿ ಅವಕಾಶ ನೀಡಲಾಗುತ್ತದೆ. ವಿವಿಧ ಎಂಟು ವಲಯಗಳಲ್ಲಿ ಲಭ್ಯವಿರುವ ಮೈದಾನಗಳಲ್ಲಿ 458 ಮಳಿಗೆಗಳಿಗೆ ಪಟಾಕಿ ಮಾರಾಟ ಮಾಡಲು ಬಿಬಿಎಂಪಿ ಅನುಮತಿ ನೀಡಿದೆ.
ಮಳಿಗೆಗಳ ವಿವರ
1. ದಕ್ಷಿಣ ವಲಯ - 7 ಗ್ರೌಂಡ್ಗಳಲ್ಲಿ 68 ಮಳಿಗೆ ತೆರೆಯಲು ಅವಕಾಶ
2. ಯಲಹಂಕ ವಲಯ - 9 ಗ್ರೌಂಡ್ , ಖಾಲಿ ಜಾಗ, 28 ಮಳಿಗೆ
3. ಮಹದೇವಪುರ ವಲಯ - 12 ಗ್ರೌಂಡ್ , 42 ಮಳಿಗೆ
4. ಬೊಮ್ಮನಹಳ್ಳಿ ವಲಯ - 1 ಖಾಲಿ ಜಾಗ, 1 ಮಳಿಗೆ
5. ಪಶ್ಚಿಮ ವಲಯ - 4 ಗ್ರೌಂಡ್, 67 ಮಳಿಗೆ
6. ಪೂರ್ವ ವಲಯ - 23 ಮೈದಾನ, 208 ಮಳಿಗೆ
7. ದಾಸರಹಳ್ಳಿ - 1 ಮೈದಾನ, 20 ಮಳಿಗೆ
8. ಆರ್ಆರ್ನಗರ - 4 ವಲಯ, 24 ಮಳಿಗೆ
ಇನ್ನು ಪೊಲೀಸ್ ಇಲಾಖೆ ಸುರಕ್ಷತೆಗೆ ಕ್ರಮ ಕೈಗೊಳ್ಳಲು ಮಳಿಗೆಗಳ ವಿವರವನ್ನು ಕೇಳಿದ್ದು, ಬಿಬಿಎಂಪಿ ಇದಕ್ಕೆ ಪ್ರತಿಕ್ರಿಯಿಸಿ ವಿವರ ನೀಡಿದೆ.