ಕರ್ನಾಟಕ

karnataka

ETV Bharat / city

ಪುನೀತ್ ಸಾವು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ: ದುಃಖಿತರಾದ ನಂದಮೂರಿ ಬಾಲಕೃಷ್ಣ - ರಾಜ್ ಕುಮಾರ್ ಕುಟುಂಬ

ನಮ್ಮ ತಂದೆಯ ಕಾಲದಿಂದಲೂ ರಾಜ್ ಕುಮಾರ್ ಕುಟುಂಬದೊಂದಿಗೆ ಉತ್ತಮ ಸಂಬಂಧವಿದೆ. ಪುನೀತ್ ಸಾವನ್ನು ಈಗಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹಿರಿಯ ನಟ ನಂದಮೂರಿ ಬಾಲಕೃಷ್ಣ ಭಾವುಕರಾದರು.

balakrishna
ಪುನೀತ್​ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ನಂದಮೂರಿ ಬಾಲಕೃಷ್ಣ

By

Published : Oct 30, 2021, 12:54 PM IST

Updated : Oct 30, 2021, 1:39 PM IST

ಬೆಂಗಳೂರು: ತಮ್ಮನಂತಿದ್ದ ಪುನೀತ್ ರಾಜ್​ ಕುಮಾರ್​ನನ್ನು ಕಳೆದುಕೊಂಡಿರುವುದು ತೀವ್ರ ದುಃಖ ತಂದಿದೆ ಎಂದು ಹಿರಿಯ ನಟ ನಂದಮೂರಿ ಬಾಲಕೃಷ್ಣ ಭಾವುಕರಾದರು. ಪುನೀತ್​ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ನಮ್ಮ ತಂದೆಯ ಕಾಲದಿಂದಲೂ ರಾಜ್ ಕುಮಾರ್ ಕುಟುಂಬದೊಂದಿಗೆ ಉತ್ತಮ ಸಂಬಂಧವಿದೆ.

ಪುನೀತ್ ಸಾವನ್ನು ಈಗಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದೇವರು ಇಷ್ಟು ಬೇಗ ಅವರನ್ನು ಕರೆಯಿಸಿಕೊಂಡಿರುವುದು ನಿಜಕ್ಕೂ ನಂಬಲು ಸಾಧ್ಯವಾಗುತ್ತಿಲ್ಲ. ಪುನೀತ್ ಅಗಲಿಕೆ ಇಡೀ ಭಾರತ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದರು.

ಪುನೀತ್​ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ನಂದಮೂರಿ ಬಾಲಕೃಷ್ಣ

ಪ್ರತಿ ವರ್ಷ ಲೇಪಾಕ್ಷಿ ಉತ್ಸವ ನಡೆದಾಗಲೆಲ್ಲ ಅಪ್ಪುನನ್ನು ಕರೆಯುತ್ತಿದ್ದೆ‌. ಅವರು ಸಹ ಸಂತೋಷದಿಂದ ಬರುತ್ತಿದ್ದರು. ಅವರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲೆಂದು ಕೋರುತ್ತೇನೆ ಎಂದು ಭಾವುಕರಾಗಿ ಮಾತನಾಡಿದರು.

ಇನ್ನು ಖ್ಯಾತ ಡ್ಯಾನ್ಸ್ ಮಾಸ್ಟರ್ ಹಾಗೂ ಬಹುಭಾಷಾ ನಟ ಪ್ರಭುದೇವ, ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ, ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸೇರಿದಂತೆ ಅನೇಕ ನಟ-ನಟಿಯರು ಅಂತಿಮ ದರ್ಶನ ಪಡೆದುಕೊಂಡರು.

Last Updated : Oct 30, 2021, 1:39 PM IST

ABOUT THE AUTHOR

...view details