ಕರ್ನಾಟಕ

karnataka

ಮುಸ್ಲಿಂ ಯುವಕರಿಂದ ಹಿಂದೂ ಸಂಪ್ರದಾಯದಂತೆ ಮೃತ ಸೋಂಕಿತನ ಅಂತ್ಯಕ್ರಿಯೆ..

ಗೋವಿಂದ ಗೋವಿಂದಾ ಎಂದು ಕೂಗುತ್ತಾ ಮೃತದೇಹವನ್ನ ಹೊತ್ತೊಯ್ದು ಮೈಸೂರು ರಸ್ತೆಯ ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಿದೆ. ಪ್ರಾಣಭಯ ತೊರೆದು ಅಂತ್ಯಸಂಸ್ಕಾರ ನೆರವೇರಿಸಿ‌ ಮಾನವೀಯತೆ ಮೆರೆದ ಯುವಕರ ತಂಡಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ..

By

Published : May 11, 2021, 6:45 PM IST

Published : May 11, 2021, 6:45 PM IST

muslim-youths-did-funeral-of-hindu-covid-patient
ಅಂತ್ಯಸಂಸ್ಕಾರ ಮಾಡಿದ ಮುಸ್ಲಿಂ ಯುವಕರು

ಬೆಂಗಳೂರು :ಕೋವಿಡ್ ಸೋಂಕಿನಿಂದ ಮೃತಪಟ್ಟ ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ವಿಧಿ ವಿಧಾನದಿಂದಲೇ ನೆರವೇರಿಸಿ ಮುಸ್ಲಿಂ ಯುವಕರು ಮಾನವೀಯತೆ ಮೆರೆದಿದ್ದಾರೆ.

ಹಿಂದೂ ಸಂಪ್ರದಾಯದಂತೆ ಮೃತ ಸೋಂಕಿತನ ಅಂತ್ಯಸಂಸ್ಕಾರ ಮಾಡಿದ ಮುಸ್ಲಿಂ ಯುವಕರು..

ನಗರದ ಗಂಗೊಂಡಹಳ್ಳಿಯಲ್ಲಿ 71 ವರ್ಷದ ಮಾರಂರೆಡ್ಡಿ‌ ನರಸಯ್ಯ ಕೋವಿಡ್‌ನಿಂದ ಮೃತಪಟ್ಟಿದ್ರು. ಆ ಸಂದರ್ಭದಲ್ಲಿ ಮೃತ ಈ ವ್ಯಕ್ತಿಯ ಬಳಿ ಕುಟುಂಬಸ್ಥರಾಗಿ, ಸಂಬಂಧಿಕರಾಗಲಿ ಸುಳಿದಿರಲಿಲ್ಲ. ಅಲ್ಲದೆ ಅಂತ್ಯಸಂಸ್ಕಾರ ಇರಲಿ‌ ಮುಟ್ಟೋಕು ಹೆದರಿದ್ದರು.

ಆಗ ಅದೇ ಏರಿಯಾದ ಸೈಯದ್ ಜಬಿವುಲ್ಲಾ ಯುವಕರ ತಂಡ ಮೃತದೇಹಕ್ಕೆ ಸ್ನಾನ ಮಾಡಿಸಿ,‌ ಗೋವಿಂದ ಗೋವಿಂದಾ ಎಂದು ಕೂಗುತ್ತಾ ಮೃತದೇಹವನ್ನ ಹೊತ್ತೊಯ್ದು ಮೈಸೂರು ರಸ್ತೆಯ ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಿದೆ. ಪ್ರಾಣಭಯ ತೊರೆದು ಅಂತ್ಯಸಂಸ್ಕಾರ ನೆರವೇರಿಸಿ‌ ಮಾನವೀಯತೆ ಮೆರೆದ ಯುವಕರ ತಂಡಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ABOUT THE AUTHOR

...view details