ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಸೋಂಕಿನ ಏರಿಕೆಯಾಗುತ್ತಿದ್ದರೆ ಮತ್ತೊಂದು ಕಡೆ ಒಮಿಕ್ರಾನ್ ಭೀತಿಯೂ ಹೆಚ್ಚಾಗಿದೆ. ಈಗಾಗಲೇ ಜನರಿಗೆ ಎಚ್ಚರಿಕೆಯ ಗಂಟೆ ಎಂಬಂತೆ 10 ದಿನಗಳ ನೈಟ್ ಕರ್ಫ್ಯೂವವನ್ನು ಸರ್ಕಾರಿ ಜಾರಿ ಮಾಡಿದೆ. ಇದರ ಬೆನ್ನಲ್ಲೇ ನಿನ್ನೆ ಒಂದೇ ದಿನ 1 ಸಾವಿರ ಕೊರೊನಾ ಕೇಸ್ ಪತ್ತೆಯಾಗಿದ್ದವು. ಹೀಗಾಗಿ ಕೊರೊನಾ ಸೋಂಕು ಹೀಗೇ ಏರಿದ್ರೆ ಕಠಿಣ ನಿರ್ಬಂಧಗಳ ಭಾಗವಾಗಿ ಮತ್ತೊಮ್ಮೆ ಕರ್ನಾಟಕ ಲಾಕ್ಡೌನ್ಗೆ ಒಳಗಾಗುತ್ತಾ ಎಂಬ ಆತಂಕ ಎದುರಾಗಿದೆ.
Experts committee report on COVID pandemic: ಕರ್ನಾಟದಲ್ಲಿ ಲಾಕ್ಡೌನ್ ಯಾವಾಗ ಮಾಡಬೇಕು? ಪಾಸಿಟಿವಿಟಿ ದರ ಎಷ್ಟು ಹೆಚ್ಚಳ ಆದ್ರೆ ಲಾಕ್ಡೌನ್ ಮಾಡಬೇಕೆಂಬ ಬಗ್ಗೆ ತಜ್ಞರು ನೀಡಿದ ವರದಿಯಲ್ಲಿ ಹೇಳಲಾಗಿದೆ. ಲಾಕ್ ಡೌನ್ ಬಗ್ಗೆಯೂ ಪ್ರಸ್ತಾಪಿಸಿರುವ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ವಿಸ್ತೃತ ವರದಿಯೊಂದನ್ನು ನೀಡಿದೆ.
ಯಾವಾಗ ಲಾಕ್ಡೌನ್ ಸೂಕ್ತ?
ಎರಡು ಪ್ರಮುಖ ಅಂಶಗಳನ್ನ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ವಿವರಿಸಿದ್ದು ಅದರಲ್ಲಿ ಒಂದು ರಾಜ್ಯದ ವಾರದ ಪಾಸಿಟಿವಿಟಿ ದರ ಶೇ.5ಕ್ಕಿಂತ ಜಾಸ್ತಿ ಆದಾಗ ಲಾಕ್ ಡೌನ್ ಅನಿವಾರ್ಯ ಆಗಬಹುದು ಅಂದಿದ್ದಾರೆ. ಎರಡನೇಯದಾಗಿ ರಾಜ್ಯದ ಒಟ್ಟಾರೆ ICU ಹಾಗೂ ಆಕ್ಸಿಜನ್ ಬೆಡ್ಗಳಲ್ಲಿ ಶೇ.40 ಬೆಡ್ ರೋಗಿಗಳಿಂದ ತುಂಬಿದರೆ ಲಾಕ್ಡೌನ್ ಮಾಡಿ ಎಂದು ಸರ್ಕಾರಕ್ಕೆ ಸಮಿತಿ ಸಲಹೆ ನೀಡಿದೆ.
ಇನ್ನು ಈ ಹಂತಕ್ಕೆ ಹೋಗಬಾರದು ಅಂದರೆ ಜನ ನಿರ್ಬಂಧಗಳಿಗೆ ರೆಡಿ ಆಗಬೇಕಿದೆ. ಕಲರ್ ಕೋಡ್ ಆಧಾರದ ನಿರ್ಬಂಧಗಳಿಗೆ ರಾಜ್ಯ ರೆಡಿಯಾಗಲಿದೆ
ಯಲ್ಲೋ, ಆರೆಂಜ್, ರೆಡ್ ಅಲರ್ಟ್ ಘೋಷಣೆ ಆದರೆ ನಿರ್ಬಂಧಗಳು ಜಾರಿಯಾಗಲಿವೆ. ಯೆಲ್ಲೋ, ಆರೆಂಜ್, ರೆಡ್ ಕಲರ್ ಕೋಡ್ ಹೇಗೆ ಇರುತ್ತೆ ಅಂತ ನೋಡೋದಾದರೆ ಸೋಂಕು ಶೇ. 1 ಕಡಿಮೆ ಇದ್ದರೆ ಯೆಲ್ಲೋ ಅಲರ್ಟ್, 1ರಿಂದ 2% ಇದ್ದರೆ ಆರೆಂಜ್ ಹಾಗೂ 2ಕ್ಕಿಂತ ಹೆಚ್ಚು ಇದ್ದರೆ ರೆಡ್ ಅಲರ್ಟ್ ಎಂದು ಚಟುವಟಿಕೆಗಳ ಮೇಲೆ ನಿರ್ಬಂಧಗಳನ್ನು ಹೇರಲು ಸೂಚಿಸಲಾಗಿದೆ.
Yellow alert..