ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿ ಲಾಕ್‌ಡೌನ್ ಮತ್ತಷ್ಟು ಸಡಿಲಿಕೆ: ಯಾವುದಕ್ಕೆಲ್ಲಾ ವಿನಾಯಿತಿ?

ರಾಜ್ಯ ಸರ್ಕಾರ ಲಾಕ್‌ಡೌನ್ ಅನ್ನು ಮತ್ತಷ್ಟು ಸಡಿಲಿಕೆ ಮಾಡಿ ಆದೇಶ ಹೊರಡಿಸಿದೆ. ಯಾವ ಯಾವ ವ್ಯಾಪಾರ ವಹಿವಾಟುಗಳ ಮೇಲೆ ನಿಯಮ ಸಡಿಲಿಕೆ ಮಾಡಿದೆ ಎನ್ನುವುದರ ಕುರಿತ ಮಾಹಿತಿ ಇಲ್ಲಿದೆ ನೋಡಿ.

By

Published : Apr 23, 2020, 7:11 PM IST

ಲಾಕ್‌ಡೌನ್ ಸಡಿಲಿಕೆ ಆದೇಶ ಪ್ರತಿ
ಲಾಕ್‌ಡೌನ್ ಸಡಿಲಿಕೆ ಆದೇಶ ಪ್ರತಿ

ಬೆಂಗಳೂರು: ರಾಜ್ಯ ಸರ್ಕಾರ ಮತ್ತೊಂದಿಷ್ಟು ವ್ಯಾಪಾರ ವಹಿವಾಟುಗಳಿಗೆ ಲಾಕ್ ಡೌನ್​ನಿಂದ ಸಡಿಲಿಕೆ ಮಾಡಿ ಆದೇಶ ಹೊರಡಿಸಿದೆ.

ಲಾಕ್‌ಡೌನ್ ಸಡಿಲಿಕೆ ಆದೇಶ ಪ್ರತಿ

ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಆದೇಶ ಹೊರಡಿಸಿದ್ದಾರೆ. ನಗರ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಸರ್ಕಾರ ಅನುಮತಿ ನೀಡಿದೆ. ಅದರ ಜೊತೆಗೆ ಬ್ಯಾಂಕೇತರ ಹಣಕಾಸು ಸಂಸ್ಥೆಗಳಾದ ಸಹಕಾರಿ ಬ್ಯಾಂಕ್, ಹೌಸಿಂಗ್ ಹಣಕಾಸು ಸಂಸ್ಥೆಗಳಿಗೆ ಅವಕಾಶ ನೀಡಲಾಗಿದೆ. ಜೊತೆಗೆ ಮೊಬೈಲ್ ರಿಚಾರ್ಜ್ ಮಳಿಗೆಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

ಉಳಿದಂತೆ ಶಾಲಾ ಪುಸ್ತಕ‌ ಮಾರಾಟ ಮಳಿಗೆ, ಫ್ಯಾನ್ ಮಾರಾಟ ಅಂಗಡಿಗಳು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ನಗರ ಪ್ರದೇಶಗಳಲ್ಲಿ ಬ್ರೆಡ್ ಕಾರ್ಖಾನೆಗಳು, ಹಿಟ್ಟಿನ ಗಿರಣಿ, ಬೇಳೆ ಕಾಳುಗಳ ಮಿಲ್​ಗಳ ವಹಿವಾಟಿಗೆ ಅವಕಾಶ ನೀಡಲಾಗಿದೆ. ಜೊತೆಗೆ ಡ್ರೈ ಫ್ರೂಟ್ಸ್, ಐಸ್ ಕ್ರೀಂಗಳನ್ನು ಪಾರ್ಸೆಲ್ ಮಾಡಲು ಅನುಮತಿ ನೀಡಲಾಗಿದೆ.

ABOUT THE AUTHOR

...view details