ಕರ್ನಾಟಕ

karnataka

ETV Bharat / city

ಬಸ್ ಸ್ಯಾನಿಟೈಸೇಷನ್​ ಘಟಕಕ್ಕೆ ಭೇಟಿ ನೀಡಿದ ಕೆಎಸ್​​​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ

ಬೆಂಗಳೂರಿನ ಕೇಂದ್ರೀಯ ವಿಭಾಗದ ಬಸ್​​ ಘಟಕಕ್ಕೆ ಭೇಟಿ ನೀಡಿದ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು ಬಸ್​​​​​​​​​​​​​ಗಳ ಸ್ಯಾನಿಟೈಸೇಷನ್​​ ಕೆಲಸವನ್ನು ಪರಿಶೀಲಿಸಿದರು. ಅಲ್ಲದೆ ಕೆಲಸ ನಿರ್ವಹಿಸುವಾಗ ತಪ್ಪದೆ ಮಾಸ್ಕ್ ಧರಿಸಿ ಎಂದು ಸಿಬ್ಬಂದಿಗಳಿಗೆ ಸೂಚಿಸಿದರು.

By

Published : Apr 9, 2020, 6:00 PM IST

KSRTC
ಕೆಎಸ್​​​ಆರ್​ಟಿಸಿ ಕೇಂದ್ರೀಯ ಘಟಕ

ಬೆಂಗಳೂರು:ಕೇಂದ್ರೀಯ ವಿಭಾಗದ ಘಟಕ ಹಾಗೂ ಕಾರ್ಯಾಗಾರಾಕ್ಕೆ ಕೆಎಸ್​​​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಭೇಟಿ ನೀಡಿ ಬಸ್ಸುಗಳಿಗೆ ಸ್ಯಾನಿಟೈಸೇಷನ್ ಕಾರ್ಯವನ್ನು ಪರಿಶೀಲಿಸಿ‌ ಮತ್ತಷ್ಟು ಸಲಹೆ ನೀಡಿದರು. ಇದೇ ರೀತಿ ಎಲ್ಲಾ ವಿಭಾಗಗಳಲ್ಲೂ ನಿರ್ಮಿಸಲು ಸೂಚಿಸಿದರು.

ಕೆಎಸ್​​​ಆರ್​ಟಿಸಿ ಕೇಂದ್ರೀಯ ಘಟಕ

ನಂತರ ಮಾಸ್ಕ್ ತಯಾರಿಕೆ‌ ಹಾಗೂ ವಿತರಣೆ‌ ಬಗ್ಗೆ ಮಾಹಿತಿ‌ ಪಡೆದರು. ಸೂಕ್ತ ಮುಂಜಾಗ್ರತೆ ವಹಿಸುವಂತೆ ಸಿಬ್ಬಂದಿಗಳಿಗೆ ಸೂಚಿಸಿದರು. ಲಾಕ್​​ಡೌನ್​​​ ತೆರವುಗೊಳಿಸುವ ಜಿಲ್ಲೆಗಳಲ್ಲಿ ಬಸ್ ಚಲಾಯಿಸುವಾಗ ಎಲ್ಲಾ ಸಿಬ್ಬಂದಿಗಳು ತಪ್ಪದೆ ಮಾಸ್ಕ್​ ಧರಿಸಿ ಕರ್ತವ್ಯ ನಿರ್ವಹಿಸಬೇಕು. ಆದ್ದರಿಂದ ಈಗಿನಿಂದಲೇ ಎಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳು ಅಗತ್ಯವಿರುವಷ್ಟು ಮಾಸ್ಕ್​​ ತಯಾರಿಸಿ ಇಟ್ಟುಕೊಳ್ಳುವಂತೆ ಸೂಚಿಸಿದರು. ಅಲ್ಲದೆ ಈ ಮಾರಕ ವೈರಸ್​​​​​​​​​​​ನಿಂದ ನಾವೆಲ್ಲರೂ ಹೊರ ಬರೋಣ, ಆರೋಗ್ಯವಂತ ಬದುಕು ನಮ್ಮದಾಗಲಿ ಎಂದು ಹಾರೈಸುವ ಮೂಲಕ ಘಟಕದ ಆವರಣದಲ್ಲಿ ಸಸಿ ನೆಟ್ಟರು.

ಕೆಎಸ್​​​ಆರ್​ಟಿಸಿ ಕೇಂದ್ರೀಯ ಘಟಕ

For All Latest Updates

TAGGED:

ABOUT THE AUTHOR

...view details