ಬೆಂಗಳೂರು: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ಇಂದು ಕೆಎಸ್ಆರ್ಟಿಸಿ ನೌಕರರು ಕುಟುಂಬದ ಜೊತೆ ಸೇರಿ ಸತ್ಯಾಗ್ರಹ ಮಾಡಲು ಮುಂದಾಗಿದ್ದಾರೆ.
ಸಾರಿಗೆ ಇಲಾಖೆಯ ನಾಲ್ಕು ಪ್ರಮುಖ ನಿಗಮಗಳಾದ BMTC, KSRTC, NEKRTC ಹಾಗೂ NWKRTC ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗಿ ಬೆಳಗ್ಗೆ ಹತ್ತು ಗಂಟೆಯಿಂದ ಸಂಜೆ ಮೂರು ಗಂಟೆಯವರೆಗೆ ಬೃಹತ್ ಪ್ರತಿಭಟನೆ ಮೂಲಕ ಹೆಂಡತಿ ಮಕ್ಕಳೊಂದಿಗೆ ಉಪವಾಸ ಸತ್ಯಾಗ್ರಹ ಮಾಡಲಿದ್ದಾರೆ.
ಕುಟುಂಬದೊಂದಿದೆ ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಕೆಎಸ್ಆರ್ಟಿಸಿ ನೌಕರರು ನಿನ್ನೆ ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿಯವರಿಗೆ ಮನವಿ ಮಾಡಿದ್ದರು ಆದರೆ ಸರಿಯಾಗಿ ಸ್ಪಂಧಿಸದ ಕಾರಣ ಇಂದು ಸಚಿವರು ಸ್ಥಳಕ್ಕೆ ಬಾರದಿದ್ರೆ ಅಹೋರಾತ್ರಿ ಧರಣಿ ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆಗೆ ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ನಾಡೋಜ ಪಾಟೀಲ್ ಪುಟ್ಟಪ್ಪ , ಸೇರಿ ಹಲವಾರು ಸಂಘ ಸಂಸ್ಥೆಗಳು ಬೆಂಬಲ ನೀಡಿವೆ.
ಇನ್ನು ಸತ್ಯಾಗ್ರಹ ಹತ್ತಿಕ್ಕಲು ಮುಂದಾಗಿರುವ ಬಿಎಂಟಿಸಿ, ತನ್ನ ಎಲ್ಲಾ ನೌಕರರ ದೀರ್ಘಾವಧಿ ರಜೆ ಹಾಗೂ ವಾರದ ರಜೆ ಹೊರತು ಪಡಿಸಿ ಉಳಿದ ರಜೆ ರದ್ದು ಮಾಡಿದ್ದಾರೆ. ಹಾಗೆ ಗೈರಾಗುವ ನೌಕರರ ವೇತನ ಕಡಿತ ಮಾಡುವ ಎಚ್ಚರಿಕೆ ಕೂಡ ನೀಡಿದ್ದಾರೆ.