ಕರ್ನಾಟಕ

karnataka

By

Published : Dec 9, 2021, 6:42 PM IST

ETV Bharat / city

ಮಳೆಯಿಂದ 1,281 ಕೋಟಿ ರೂ.‌ ಹಾನಿ: ಕೇಂದ್ರಕ್ಕೆ ವರದಿ ನೀಡಿದ ರಾಜ್ಯ ಸರ್ಕಾರ

ಮಳೆ ಹಾನಿಯಿಂದಾದ ಹಾನಿಯ ಕುರಿತ ವರದಿಯನ್ನು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಸಲ್ಲಿಸಿದೆ.

Karnataka Rain Loss Report,ಕೇಂದ್ರಕ್ಕೆ ಮಳೆ ಹಾನಿ ವರದಿ ಸಲ್ಲಿಸಿದ ಕರ್ನಾಟಕ
Karnataka Rain Loss Report,ಕೇಂದ್ರಕ್ಕೆ ಮಳೆ ಹಾನಿ ವರದಿ ಸಲ್ಲಿಸಿದ ಕರ್ನಾಟಕ

ಬೆಂಗಳೂರು:ಕಳೆದ ತಿಂಗಳು ಸುರಿದ ಅಕಾಲಿಕ ಮಳೆ ಹಾನಿ ಸಂಬಂಧ ನಷ್ಟ ಪರಿಹಾರ ಕೋರಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಎನ್​ಡಿಆರ್​ಎಫ್ ಅಡಿ ರಾಜ್ಯ ಸರ್ಕಾರ 1,281 ಕೋಟಿ ರೂ. ಮಳೆ ಹಾನಿಯ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಮಳೆ ಹಾನಿ ನಷ್ಟ ವರದಿಯಲ್ಲಿ ಕೃಷಿ ಬೆಳೆ ಹಾನಿ 619 ಕೋಟಿ ರೂ., ತೋಟಗಾರಿಕೆ ಬೆಳೆ ಹಾನಿ 143 ಕೋಟಿ ರೂ., ಬಹು ವಾರ್ಷಿಕ ಬೆಳೆ 81 ಕೋಟಿ ರೂ. ನಷ್ಟ ಆಗಿದೆ ಎಂದು ತಿಳಿಸಿದರು.

ಮಳೆಗೆ ಒಟ್ಟು 20,083 ಮನೆಗಳು ಹಾನಿಗೊಳಗಾಗಿದ್ದು, 71 ಕೋಟಿ ರೂ. ನಷ್ಟವಾಗಿದೆ. ಉಳಿದಂತೆ ರಸ್ತೆ ಹಾನಿ (147 ಕೋಟಿ ರೂ.), ಸರ್ಕಾರಿ ಕಟ್ಟಡಗಳ ಹಾನಿ (154 ಕೋಟಿ ರೂ.), ಗ್ರಾಮೀಣ ರಸ್ತೆ (58 ಕೋಟಿ ರೂ.) ಹಾಗೂ ಇತರೆ 10 ಕೋಟಿ ರೂ. ಹಾನಿಯಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರವು ನಷ್ಟ ಪರಿಹಾರದ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿದೆ.

(ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್‌ ದುರಂತ: ಮೃತ ಲೆ.ಕ.ಹರ್ಜಿಂದರ್ ಸಿಂಗ್ ಕಾರ್ಕಳದ ಅಳಿಯ..ಪತ್ನಿಯ ಊರಿನಲ್ಲಿ ಮಡುಗಟ್ಟಿದ ಶೋಕ)

ABOUT THE AUTHOR

...view details