ಬೆಂಗಳೂರು: ಪತ್ನಿಗೆ ಅಶ್ಲೀಲ ವಿಡಿಯೋ ತೋರಿಸಿ ಹಿಂಸೆ ನೀಡುತ್ತಿದ್ದ ಆರೋಪದಡಿ ಪತಿಯನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಪ್ರದೀಪ್ ಬಂಧಿತ ಆರೋಪಿಯಾಗಿದ್ದು, ಪತ್ನಿಗೆ ಪೋರ್ನ್ ವಿಡಿಯೋ ತೋರಿಸಿ ಮದ್ಯ ಕುಡಿಸಿ ದೈಹಿಕ ಹಿಂಸೆ ಕೊಡುತ್ತಿದ್ದರಂತೆ. ಜೊತೆಗೆ ಸಿಗರೇಟ್ನಿಂದ ಸುಟ್ಟು ಚಿತ್ರಹಿಂಸೆ ನೀಡುತ್ತಿದ್ದರು ಎಂಬ ದೂರಿನ ಮೇರೆಗೆ ಪೊಲೀಸರು ಬಂಧಿಸಿದ್ದಾರೆ.
ಪ್ರದೀಪ್ ಮತ್ತು ಗೃಹಿಣಿ ಇಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ. ಆದರೆ ಮದುವೆಯಾದ ಐದು ತಿಂಗಳಿಗೇ ಹೆಂಡತಿಗೆ ಪತಿಯ ಅಸಲಿ ಮುಖದ ಬಗ್ಗೆ ತಿಳಿದಿತ್ತು. ಇಷ್ಟು ಹಿಂಸೆ ಕೊಟ್ಟಿದ್ದಲ್ಲದೇ ಐದು ಬಾರಿ ಗರ್ಭಪಾತ ಮಾಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆದರೆ ಪತ್ನಿ ಕಾಡಿ-ಬೇಡಿ ಎರಡು ಮಕ್ಕಳನ್ನು ಉಳಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.