ಬೆಂಗಳೂರು:ದೇಶಾದ್ಯಂತ ಲಾಕ್ ಡೌನ್ ಇರುವ ಹಿನ್ನೆಲೆ ಅಗತ್ಯ ವಸ್ತುಗಳು ಖರೀದಿಗೆ ಕಷ್ಟವಾಗುತ್ತಿದೆ. ಇನ್ನು ಹೊರಗೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಜರ್ ಬಳಸಿದರೆ ಎಲ್ಲರಿಗೂ ಒಳ್ಳೆಯದು. ಆದರೆ ಈ ಸಮಯದಲ್ಲಿ ಮಾಸ್ಕ್ ಕೂಡಾ ದೊರೆಯುತ್ತಿಲ್ಲ.
ಮನೆಯಲ್ಲೇ ಸುಲಭವಾಗಿ ಮಾಸ್ಕ್ ತಯಾರಿಸಿ ಹಣ ಉಳಿಸಿ..ವಿಡಿಯೋ
ನೀವು ಮನೆಯಲ್ಲೇ ಸುಲಭವಾಗಿ ಮಾಸ್ಕ್ ತಯಾರಿಸಬಹುದು. ಇದರಿಂದ ನಿಮ್ಮ ಹಣ ಕೂಡಾ ಉಳಿಯಲಿದೆ. ಇದಕ್ಕೆ ಬೇಕಾಗಿರುವುದು ಕಾಟನ್ ಬಟ್ಟೆ, ಕತ್ತರಿ, ಎಲಾಸ್ಟಿಕ್ ಅಥವಾ ರಬ್ಬರ್ ಬ್ಯಾಂಡ್. ಹೊಲಿಗೆ ಮಿಷನ್ ಇಲ್ಲದೆ ಕೂಡಾ ನೀವು ಸುಲಭವಾಗಿ ಮಾಸ್ಕ್ ತಯಾರಿಸಬಹುದು.. ಜನರಿಗೆ ಅನುಕೂಲವಾಗಲೆಂದು ಇಲ್ಲಿ ಮೂರು ವಿಧಾನದ ಮಾಸ್ಕ್ ತಯಾರಿಕಾ ವಿಧಾನವನ್ನು ತಿಳಿಸಲಾಗಿದೆ.
Published : Apr 7, 2020, 5:16 PM IST
Published : Apr 7, 2020, 5:16 PM IST
|Updated : Apr 7, 2020, 6:14 PM IST
ಆದರೆ ನೀವು ಮನೆಯಲ್ಲೇ ಸುಲಭವಾಗಿ ಮಾಸ್ಕ್ ತಯಾರಿಸಬಹುದು. ಇದರಿಂದ ನಿಮ್ಮ ಹಣ ಕೂಡಾ ಉಳಿಯಲಿದೆ. ಇದಕ್ಕೆ ಬೇಕಾಗಿರುವುದು ಕಾಟನ್ ಬಟ್ಟೆ, ಕತ್ತರಿ, ಎಲಾಸ್ಟಿಕ್ ಅಥವಾ ರಬ್ಬರ್ ಬ್ಯಾಂಡ್. ಹೊಲಿಗೆ ಮಿಷನ್ ಇಲ್ಲದೆ ಕೂಡಾ ನೀವು ಸುಲಭವಾಗಿ ಮಾಸ್ಕ್ ತಯಾರಿಸಬಹುದು. ಜನರಿಗೆ ಅನುಕೂಲವಾಗಲೆಂದು ಇಲ್ಲಿ ಮೂರು ವಿಧಾನದ ಮಾಸ್ಕ್ ತಯಾರಿಕಾ ವಿಧಾನವನ್ನು ತಿಳಿಸಲಾಗಿದೆ.
ಕಾಟನ್ ಬಟ್ಟೆಯನ್ನು ಚೆನ್ನಾಗಿ ಉಪ್ಪು ಮಿಶ್ರಿತ ಬಿಸಿ ನೀರಿನಲ್ಲಿ ಕಡ್ಡಾಯವಾಗಿ 5 ನಿಮಿಷಗಳ ಕಾಲ ನೆನೆಸಬೇಕು. ನಂತರ ನೆರಳಿನಲ್ಲಿ ಒಣಗಿಸಿ ಐರನ್ ಮಾಡಿದರೆ ಉತ್ತಮ. ಮಧ್ಯಮ ವಯಸ್ಕರಿಗೆ ಮಾಸ್ಕ್ ತಯಾರಿಸಲು 9 ಇಂಚು ಉದ್ದ ಹಾಗೂ 7 ಇಂಚು ಅಗಲದ ಬಟ್ಟೆ ಬೇಕು. ಮಕ್ಕಳಿಗಾದರೆ 7 ಇಂಚು ಉದ್ದ ಹಾಗೂ 5 ಇಂಚು ಅಗಲದ ಬಟ್ಟೆ ಬೇಕಾಗುತ್ತದೆ. ಪ್ರತಿ ಬಾರಿ ಮಾಸ್ಕ್ ಧರಿಸುವ ಮುನ್ನ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಮಾಸ್ಕನ್ನು ಬಳಸಿದ ನಂತರ ಮತ್ತೆ ಉಪ್ಪು ಮಿಶ್ರಿತ ಬಿಸಿ ನೀರಿನಲ್ಲಿ ತೊಳೆದು ಒಣಗಿಸಿ ಐರನ್ ಮಾಡಿಕೊಳ್ಳಿ.