ಕರ್ನಾಟಕ

karnataka

ETV Bharat / city

ಹೋಟೆಲ್​ಗಳನ್ನು ಅಗತ್ಯ ಸೇವೆಗಳಡಿ ಪರಿಗಣಿಸಿ: ಹೋಟೆಲ್ ಮಾಲೀಕರ ಮನವಿ

ಹಿರಿಯ ನಾಗರಿಕರಿಗೆ, ಕಟ್ಟಡ ಕಾರ್ಮಿಕರಿಗೆ, ಅವಿದ್ಯಾವಂತರಿಗೆ ಫುಡ್ ಡೆಲಿವರಿ ಸಂಸ್ಥೆಗಳ ಮೂಲಕ ಆಹಾರ ತೆಗೆದುಕೊಳ್ಳಲು ಅನುಭವವಿರುವುದಿಲ್ಲ. ಹೀಗಾಗಿ, ಹೋಟೆಲ್​ಗಳನ್ನು ಅಗತ್ಯ ಸೇವೆಗಳಡಿ ಪರಿಗಣಿಸಿ ದಿನಪೂರ್ತಿ ಪಾರ್ಸೆಲ್ ನೀಡಲು ಅವಕಾಶ ಮಾಡಿಕೊಡಬೇಕೆಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

By

Published : Apr 27, 2021, 8:29 AM IST

Bangalore
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್

ಬೆಂಗಳೂರು: ಹೋಟೆಲ್​ಗಳನ್ನು ಅಗತ್ಯ ಸೇವೆಗಳಡಿ ಪರಿಗಣಿಸಿ ದಿನಪೂರ್ತಿ ಪಾರ್ಸೆಲ್ ನೀಡಲು ಅವಕಾಶ ಮಾಡಿಕೊಡಬೇಕೆಂದು ಬಿಬಿಎಂಪಿ ವ್ಯಾಪ್ತಿಯ ಹೋಟೆಲ್ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಸರ್ಕಾರಕ್ಕೆ ಮನವಿ ಮಾಡಿದರು.

ಹೋಟೆಲ್​ಗಳನ್ನು ಅಗತ್ಯ ಸೇವೆಗಳಡಿ ಪರಿಗಣಿಸುವಂತೆ ಮನವಿ

ಕರ್ನಾಟಕದಲ್ಲಿ ಕಳೆದ ಕೆಲ ದಿನಗಳಿಂದ ಕೋವಿಡ್ ಸೋಂಕಿತ ಪ್ರಕರಣ ಹೆಚ್ಚಾಗುತ್ತಿರುವ ಕಾರಣ 14 ದಿನಗಳ ಕಾಲ ಕೋವಿಡ್ ಕರ್ಫ್ಯೂ ವಿಧಿಸಿ ಘೋಷಣೆ ಮಾಡಲಾಗಿದೆ. ಸರ್ಕಾರದ ಮಾರ್ಗಸೂಚಿಯಲ್ಲಿ ಹೋಟೆಲ್​ಗಳಲ್ಲಿ ಪಾರ್ಸೆಲ್​ಗೆ ಬೆಳಿಗ್ಗೆ 10ವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. 10 ಗಂಟೆಯ ನಂತರ ಸ್ವಿಗ್ಗಿ, ಜೊಮ್ಯಾಟೋ ಸೇರಿದಂತೆ ವಿವಿಧ ಫುಡ್ ಡೆಲಿವರಿ ಸಂಸ್ಥೆಗಳ ಮೂಲಕ ಆಹಾರ ಡೆಲಿವರಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಆದರೆ, ಹಿರಿಯ ನಾಗರಿಕರಿಗೆ, ಕಟ್ಟಡ ಕಾರ್ಮಿಕರಿಗೆ, ಅವಿದ್ಯಾವಂತರಿಗೆ ಈ ಆ್ಯಪ್​​ಗಳ ಮೂಲಕ ಆಹಾರ ತೆಗೆದುಕೊಳ್ಳಲು ಅನುಭವವಿರುವುದಿಲ್ಲ ಮತ್ತು ಬೆಲೆಯಲ್ಲಿಯೂ ಹೆಚ್ಚಳವಾಗಬಹುದು. ಈ ಹೋಟೆಲ್​ಗಳನ್ನು ಅಗತ್ಯ ಸೇವೆಗಳಡಿ ಪರಿಗಣಿಸಿ ದಿನಪೂರ್ತಿ ಪಾರ್ಸೆಲ್ ನೀಡಲು ಅವಕಾಶ ಮಾಡಿಕೊಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.

ಇದನ್ನೂ ಓದಿ:ವರನಿಗೆ ಕೊರೊನಾ, ಪಿಪಿಇ ಕಿಟ್​ ಧರಿಸಿ ಹಸೆಮಣೆ ಏರಿದ ಜೋಡಿ

ABOUT THE AUTHOR

...view details