ಕರ್ನಾಟಕ

karnataka

ETV Bharat / city

ಕೋವಿಡ್ ಸಂದರ್ಭದಲ್ಲಿ ಎಕ್ಸಾಂ ಇಲ್ಲವೇ ಇಲ್ಲ.. ಸಿಪಿವೈ ಪರೀಕ್ಷೆಗೆ ಬೊಮ್ಮಾಯಿ ಗೃಹಭಂಗ.. - Tourism Minister C.P. Yogeshwar

ನಾವು ಕಳೆದ 12 ತಿಂಗಳಲ್ಲಿ ಸೀಜ್ ಮಾಡಿದ ಡ್ರಗ್​​ಗಳನ್ನು ನಾಶ ಮಾಡುವ ಕೆಲಸ ಮಾಡುತ್ತೇವೆ. ಕೋರ್ಟ್ ಪರ್ಮಿಷನ್ ತೆಗೆದುಕೊಂಡು ಅಧಿಕಾರಿಗಳ ಉಪಸ್ಥಿತಿಯಲ್ಲಿ ನಾಳೆ ನಾಶ ಮಾಡುತ್ತಿದ್ದೇವೆ. 50.23 ಕೋಟಿ ಮೌಲ್ಯದ ಡ್ರಗ್ ಇದ್ದು, ಇದರಲ್ಲಿ ಗಾಂಜಾ, ಅಫೀಮ್, ಬ್ರೌನ್ ಶುಗರ್, ಹೆರಾಯಿನ್, ಚರಸ್ ಸೇರಿ ಎಲ್ಲವನ್ನು ನಾಶ ಮಾಡುತ್ತೇವೆ. ರಾಜ್ಯಗಳ ಪಟ್ಟಿಯಲ್ಲಿ ನಮ್ಮ ರಾಜ್ಯ ಅತಿ ಹೆಚ್ಚು ಡ್ರಗ್ ಸೀಜ್ ಮಾಡಿದ ಪಟ್ಟಿಯಲ್ಲಿದೆ..

home-minister-bommayi-talk
ಸಿಪಿವೈಗೆ ಬೊಮ್ಮಾಯಿ ಟಾಂಗ್

By

Published : Jun 25, 2021, 4:37 PM IST

ಬೆಂಗಳೂರು :ಪ್ರವಾಸೋದ್ಯಮ ಸಚಿವ ಸಿ ಪಿ ಯೋಗೇಶ್ವರ್ ಎಕ್ಸಾಂ ಬರೆದಿರುವ ಹೇಳಿಕೆಗೆ ನಾನು ಅರ್ಜಿಯೇ ಹಾಕಿಲ್ಲ. ಎಕ್ಸಾಂ ಬರೆಯುವುದು ಬಿಡಿ, ಕೋವಿಡ್ ಟೈಂನಲ್ಲಿ ಎಕ್ಸಾಂ ಕೂಡ ಇಲ್ಲ. ಎಕ್ಸಾಂ ಇರುವುದೇ ನನಗೆ ಗೊತ್ತಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಟಾಂಗ್ ನೀಡಿದರು.

ಓದಿ: ಪರೀಕ್ಷೆ ಬರೆದಿದ್ದೇವೆ, ಫಲಿತಾಂಶಕೋಸ್ಕರ ಕಾಯ್ತಿದ್ದೇವೆ ಎಂದ ಸಿಪಿ ಯೋಗೇಶ್ವರ್​.. ಈ ಮಾತಿನಲ್ಲೇನಿದೆಯೋ ಒಳಾರ್ಥ!

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಅಧಿವೇಶನ ಕರೆಯುವ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಇದರ ಜೊತೆಗೆ ಮೂರನೇ ಅಲೆಯ ಭೀತಿ ಇರುವ ಹಿನ್ನೆಲೆ, ಅಧಿವೇಶನ ನಡೆಸುವುದು ಸೂಕ್ತವಲ್ಲ. ಈ ಬಗ್ಗೆ ಸಂಪುಟ ಹಾಗೂ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಲಾಗುವುದು ಎಂದು ಕುಮಾರಸ್ವಾಮಿ ಮುಖ್ಯಮಂತ್ರಿಗೆ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.

ಅಂತಾ​ರಾಷ್ಟ್ರೀಯ ಆ್ಯಂಟಿ ಡ್ರಗ್ ಡೇ :

ನಾಳೆ ಇಂಟರ್ನ್ಯಾಷನಲ್ ಆ್ಯಂಟಿ ಡ್ರಗ್ ಡೇ ಇದೆ. ನಾವು ಕಳೆದ 12 ತಿಂಗಳಲ್ಲಿ ಸೀಜ್ ಮಾಡಿದ ಡ್ರಗ್​​ಗಳನ್ನು ನಾಶ ಮಾಡುವ ಕೆಲಸ ಮಾಡುತ್ತೇವೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಿಂದೆ ಡ್ರಗ್ ಸೀಜ್ ಆಗಿರಲಿಲ್ಲ. ಕೋರ್ಟ್ ಪರ್ಮಿಷನ್ ತೆಗೆದುಕೊಂಡು ಅಧಿಕಾರಿಗಳ ಉಪಸ್ಥಿತಿಯಲ್ಲಿ ನಾಳೆ ನಾಶ ಮಾಡುತ್ತಿದ್ದೇವೆ.

50.23 ಕೋಟಿ ಮೌಲ್ಯದ ಡ್ರಗ್ ಇದೆ. ಗಾಂಜಾ, ಅಫೀಮ್, ಬ್ರೌನ್ ಶುಗರ್, ಹೆರಾಯಿನ್, ಚರಸ್ ಸೇರಿ ಎಲ್ಲವನ್ನು ನಾಶ ಮಾಡುತ್ತೇವೆ. 5221 ಜನರನ್ನು ಎನ್​​ಡಿಪಿಎಸ್ ಆ್ಯಕ್ಟ್ ಅಡಿಯಲ್ಲಿ ಬುಕ್ ಮಾಡಿದ್ದೇವೆ. ರಾಜ್ಯಗಳ ಪಟ್ಟಿಯಲ್ಲಿ ನಮ್ಮ ರಾಜ್ಯ ಅತಿ ಹೆಚ್ಚು ಡ್ರಗ್ ಸೀಜ್ ಮಾಡಿದ ಪಟ್ಟಿಯಲ್ಲಿ ಇದೆ ಎಂದರು.

ವಾರ್ ಅಗೇನಸ್ಟ್ ಡ್ರಗ್ ಮತ್ತಷ್ಟು ತೀವ್ರ ಸ್ವರೂಪದಲ್ಲಿ ನಡೆಯಲಿದೆ. ಎಲ್ಲ ಜಿಲ್ಲೆಗಳಲ್ಲೂ ಕೂಡ ಡ್ರಗ್ ನಾಶ ಪಡಿಸುವ ಕೆಲಸ ನಡೆಯಲಿದೆ. ಎಲ್ಲ ಸೀಜ್ ಮಾಡಿದ ಡ್ರಗ್‌ಗಳನ್ನು ನಾಳೆ ಕಮಿಷನರ್ ಕಚೇರಿಯಲ್ಲಿ ಇಟ್ಟು ಅಲ್ಲಿಂದ ಕೊಂಡೊಯ್ಯುತ್ತೇವೆ. ದಾಬಸ್ ಪೇಟೆ ಹತ್ತಿರ ಫರ್ನೆಸ್ ಒಂದರಲ್ಲಿ ಎಲ್ಲವನ್ನೂ ನಾಶ ಪಡಿಸುತ್ತೇವೆ ಎಂದು ತಿಳಿಸಿದರು.

ABOUT THE AUTHOR

...view details