ಕರ್ನಾಟಕ

karnataka

ETV Bharat / city

ಎಸಿಬಿಯ ಸಂವಿಧಾನದ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ

ಎಸಿಬಿ( ಭ್ರಷ್ಟಾಚಾರ ನಿಗ್ರಹ ದಳ)ದ ಸಂವಿಧಾನದ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಪಟ್ಟಂತೆ ಲೋಕಾಯುಕ್ತ ದುರ್ಬಲವಾಗಿಲ್ಲ ಎಂಬ ಹೇಳಿಕೆ ಒಪ್ಪಲು ಸಾಧ್ಯವಿಲ್ಲ ಎಂದು ಲೋಕಾಯುಕ್ತ ಪರ ಹಿರಿಯ ವಕೀಲ ಹೈಕೋರ್ಟ್​ಗೆ ತಿಳಿಸಿದ್ದಾರೆ.

By

Published : Jan 10, 2020, 9:48 PM IST

High court
High court

ಬೆಂಗಳೂರು: ಎಸಿಬಿಯ ಸಂವಿಧಾನದ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಪಟ್ಟಂತೆ ಲೋಕಾಯುಕ್ತ ದುರ್ಬಲವಾಗಿಲ್ಲ ಎಂಬ ಹೇಳಿಕೆ ಒಪ್ಪಲು ಸಾಧ್ಯವಿಲ್ಲ ಎಂದು ಲೋಕಾಯುಕ್ತ ಪರ ಹಿರಿಯ ವಕೀಲ ಹೈಕೋರ್ಟ್​ಗೆ ತಿಳಿಸಿದ್ದಾರೆ.

ಎಸಿಬಿಯ ಸಂವಿಧಾನದ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಅರವಿಂದ್‌ ಕುಮಾರ್ ನೇತತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಲೋಕಾಯುಕ್ತದ ತನಿಖಾಧಿಕಾರವನ್ನು ಹಿಂದಿನ ಸರ್ಕಾರ ಕಿತ್ತುಕೊಂಡ ಕಾರಣ, ಲೋಕಾಯುಕ್ತ ಹಲ್ಲಿಲ್ಲದ ಹಾವಿನಂತಾಗಿದೆ. ಇದರಿಂದ ಭಷ್ಟಾಚಾರ ತಡೆ ಅಸಾಧ್ಯವಾಗಿದೆ ಎಂದು ಲೋಕಾಯುಕ್ತ ವಕೀಲರು ವಾದ ಮಂಡಿಸಿದರು.

ಇನ್ನು ವಕೀಲರ ವಾದ ಆಲಿಸಿದ ನ್ಯಾಯಾಲಯ ಮುಂದಿನ ವಿಚಾರಣೆಗೆ ಸಮಯ ನೀಡಿ, ಅರ್ಜಿ‌ ವಿಚಾರಣೆ ಮುಂದೂಡಿದೆ.

ABOUT THE AUTHOR

...view details