ಕರ್ನಾಟಕ

karnataka

ಕೊರೊನಾ ಲಸಿಕೆ ಮೊದಲ ಡೋಸ್.. ಶೇ.100 ರಷ್ಟು ಸಾಧನೆ: ಸಚಿವ ಡಾ.ಕೆ.ಸುಧಾಕರ್

By

Published : Jan 24, 2022, 2:21 PM IST

ಜನವರಿ 24 ರೊಳಗೆ 32 ಲಕ್ಷ ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಯಾವ ರಾಜ್ಯವೂ ಇಷ್ಟು ಸಂಖ್ಯೆಯಲ್ಲಿ ಪರೀಕ್ಷೆ ಮಾಡಿಲ್ಲ. ಒಟ್ಟು 6 ಕೋಟಿ ಪರೀಕ್ಷೆಗಳನ್ನು ಮಾಡಿದ್ದು, ಇದು ಬೇರೆ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.

karnataka
ಸುಧಾಕರ್

ಬೆಂಗಳೂರು:ರಾಜ್ಯದಲ್ಲಿ ಕೋವಿಡ್ ಲಸಿಕೆಯ ಮೊದಲ ಡೋಸ್​ ನೀಡಿಕೆಯಲ್ಲಿ ಶೇ.100 ರಷ್ಟು ಹಾಗೂ 2ನೇ ಡೋಸ್​ನಲ್ಲಿ ಶೇ.85 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಸಚಿವರು, 15 ರಿಂದ 18 ವರ್ಷದ ಶೇ.67.5 ರಷ್ಟು ಮಕ್ಕಳಿಗೆ ಮೊದಲ ಡೋಸ್ ನೀಡಲಾಗಿದೆ. ಆರೋಗ್ಯ ಸಿಬ್ಬಂದಿ, ವೈದ್ಯರಿಗೆ 4,85,818 ಬೂಸ್ಟರ್ ಡೋಸ್ ನೀಡಲಾಗಿದೆ. ಒಟ್ಟು 9,33,92,626 ಡೋಸ್​ಗಳನ್ನು ಈವರೆಗೆ ನೀಡಲಾಗಿದೆ. ಲಸಿಕಾಕರಣದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ ಎಂದು ಹೇಳಿದರು.

ಕೆಲ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣ ಏರುತ್ತಿದೆ. 2-3 ವಾರಗಳಲ್ಲಿ ಕಡಿಮೆಯಾಗಲಿದೆ. ಆಸ್ಪತ್ರೆಗೆ ಹೆಚ್ಚು ದಾಖಲು ಕಂಡು ಬರುವಲ್ಲಿ ಕ್ರಮ ವಹಿಸಲಾಗುತ್ತದೆ. ಆದರೆ, ಅಂತಹ ಪರಿಸ್ಥಿತಿ ಇನ್ನೂ ಬಂದಿಲ್ಲ. ಕಳೆದ ಮೂರು ದಿನದಲ್ಲಿ ರೋಗ ಲಕ್ಷಣ ಇಲ್ಲದವರಿಗೆ ಪರೀಕ್ಷೆ ಮಾಡುವ ಅವಶ್ಯಕತೆಯೂ ಇಲ್ಲ ಎಂದು ಐಸಿಎಂಆರ್ ಹೇಳಿದೆ. ಅದರನ್ವಯ ಕ್ರಮ ವಹಿಸಲಾಗುತ್ತಿದೆ ಎಂದರು.

24 ದಿನದಲ್ಲಿ 32 ಲಕ್ಷ ಕೋವಿಡ್ ಪರೀಕ್ಷೆ:ಜನವರಿ 24 ರೊಳಗೆ 32 ಲಕ್ಷ ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಯಾವ ರಾಜ್ಯವೂ ಇಷ್ಟು ಸಂಖ್ಯೆಯಲ್ಲಿ ಪರೀಕ್ಷೆ ಮಾಡಿಲ್ಲ. ಒಟ್ಟು 6 ಕೋಟಿ ಪರೀಕ್ಷೆಗಳನ್ನು ಮಾಡಿದ್ದು, ಇದು ಬೇರೆ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.

ಮಹಿಳಾ ಸಮಾನತೆ ಪ್ರಜಾಪ್ರಭುತ್ವದ ಆಶಯ:ರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಹಿನ್ನೆಲೆಯಲ್ಲಿ ಮಾತನಾಡಿದ ಸಚಿವರು, ಮಹಿಳೆಯರಿಗೆ ಸಮಾನತೆ ನೀಡುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯವಾಗಿದೆ. ಭ್ರೂಣ ಹತ್ಯೆ ವಿರುದ್ಧ ಜಾಗೃತಿ ಹಾಗೂ ಲಿಂಗ ಸಮಾನತೆ ತರಲು ಪ್ರಯತ್ನಿಸಬೇಕಿದೆ ಎಂದರು.

ಕೆಲ ವರ್ಷಗಳಿಂದ ಲಿಂಗಾನುಪಾತವೂ ಹೆಚ್ಚಾಗಿದೆ. 2001 ರಲ್ಲಿ 946 ಇದ್ದ ಲಿಂಗಾನುಪಾತ, 2018 ರಲ್ಲಿ 957ಕ್ಕೇರಿದೆ. ಅಂದರೆ, ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಾಗಿರುವುದು ಆಶಾದಾಯಕವಾಗಿದೆ. ಮಹಿಳಾ ಸಬಲೀಕರಣಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದರು.

ಭ್ರೂಣ ಪತ್ತೆಗೆ ರಾಜ್ಯದಲ್ಲಿ ಅವಕಾಶವಿಲ್ಲ. ಭ್ರೂಣ ಪತ್ತೆ ಮಾಡುವ ತಜ್ಞರು, ತಾಂತ್ರಿಕ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪರವಾನಗಿ ರದ್ದು ಮಾಡಲಾಗುವುದು. ಭ್ರೂಣ ಪತ್ತೆಗೆ ಅವಕಾಶ ನೀಡುವುದಿಲ್ಲ ಎಂದರು.

ಇದನ್ನೂ ಓದಿ:ಕುಡುಕರಿಗೆ ಗುಡ್​ ನ್ಯೂಸ್ ​: ರೆಡ್ ವೈನ್ ಕುಡಿಯೋದ್ರಿಂದ ಕೋವಿಡ್‌ಗೆ ತುತ್ತಾಗುವ ಸಾಧ್ಯತೆ ಕಡಿಮೆ

ABOUT THE AUTHOR

...view details