ಬೆಂಗಳೂರು: ಲಾಕ್ಡೌನ್ ಆದೇಶದ ನಡುವೆಯೂ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದವರಿಗೆ ಅಬಕಾರಿ ಇಲಾಖೆ ಬಿಸಿ ಮುಟ್ಟಿಸಿದೆ.
ರಾಜ್ಯದ ವಿವಿಧೆಡೆ ಅಬಕಾರಿ ಅಧಿಕಾರಿಗಳ ದಾಳಿ: 5 ಸಾವಿರ ಲೀಟರ್ಗೂ ಅಧಿಕ ಮದ್ಯ ವಶ
ರಾಜ್ಯ ಅಬಕಾರಿ ಇಲಾಖೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ದಾಳಿ ನಡೆಸಿ 5,021 ಲೀಟರ್ ಮದ್ಯ ಹಾಗೂ 123 ಮಂದಿಯನ್ನು ವಶಕ್ಕೆ ಪಡೆದುಕೊಂಡಿದೆ.
ರಾಜ್ಯದ 6,915 ಸ್ಥಳದಲ್ಲಿ ಅಬಕಾರಿ ದಾಳಿ..5 ಸಾವಿರ ಲೀಟರ್ಗೂ ಹೆಚ್ಚು ಮದ್ಯ ವಶ
ರಾಜ್ಯ ಅಬಕಾರಿ ಇಲಾಖೆ ಮಾರ್ಚ್ 27ರಿಂದ ಏಪ್ರಿಲ್ 7ರವರೆಗೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮದ್ಯ ಸೀಜ್ ಮಾಡಿರುವ ದಾಖಲೆ ನೀಡಿದೆ. ಬೆಂಗಳೂರಿನಲ್ಲಿಯೇ 1,841 ಕಡೆ ದಾಳಿ ನಡೆಸಿ 3,587 ಐಎಂಎಲ್ ಮದ್ಯ ಸೀಜ್ ಮಾಡಿದೆ. ರಾಜ್ಯದಲ್ಲಿ ಒಟ್ಟು 6915 ಕಡೆ ದಾಳಿ ನಡೆಸಿ 1465 ಲೀಟರ್ ಬಿಯರ್ ಸೇರಿ 5021 ಲೀಟರ್ ಮದ್ಯ ವಶಪಡಿಸಿಕೊಂಡಿದೆ.
ಅಲ್ಲದೇ, ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ 123 ಮಂದಿಯನ್ನ ವಶಕ್ಕೆ ಪಡೆದುಕೊಂಡಿದೆ.