ಕರ್ನಾಟಕ

karnataka

'ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು' : ಕೋವಿಡ್​ ವಾರ್ಡ್​​ನಲ್ಲಿ ಪಿಪಿಇ ಕಿಟ್​ ಧರಿಸಿ ವೈದ್ಯರ ಡ್ಯಾನ್ಸ್​

ಬೆಂಗಳೂರಿನ ದಯಾನಂದ ಸಾಗರ್ ಆಸ್ಪತ್ರೆಯ ವೈದ್ಯರು ಕೋವಿಡ್​ ವಾರ್ಡ್​ನಲ್ಲಿ ಪಿಪಿಇ ಕಿಟ್​ ಧರಿಸಿ, ಡ್ಯಾನ್ಸ್​ ಮಾಡಿ ಸೋಂಕಿತರನ್ನು ಮನರಂಜಿಸಿದ್ದಾರೆ.

By

Published : May 23, 2021, 1:56 AM IST

Published : May 23, 2021, 1:56 AM IST

doctors-dance-for-covid-patients-with-ppe-kit
ಕೋವಿಡ್​ ವಾರ್ಡ್​​ನಲ್ಲಿ ಪಿಪಿಇ ಕಿಟ್​ ಧರಿಸಿ ವೈದ್ಯರ ಡ್ಯಾನ್ಸ್​

ಬೆಂಗಳೂರು : ದೇಶದಲ್ಲಿ‌ ಕೊರೊನಾ ಅಲೆ ಆರಂಭವಾದಾಗಿನಿಂದ‌ ಎಲ್ಲಾ‌ ವೈದ್ಯರು ಕೊರೊನಾ‌ ರೋಗಿಗಳನ್ನ ಅದಷ್ಟು ಬೇಗ ಗುಣಮುಖರಾಗಲೆಂದು ಹಗಲು ರಾತ್ರಿ ದುಡಿಯುತ್ತಿದ್ದಾರೆ. ಜೊತೆಗೆ ಕೊರೊನಾ‌ ಸೋಂಕಿತರಿಗೆ ಎಲ್ಲಾ‌ ರೀತಿಯಲ್ಲಿ ಆತ್ಮಸ್ಥೈರ್ಯ, ಧೈರ್ಯ ತುಂಬುತ್ತಿದ್ದಾರೆ.‌

ಕೋವಿಡ್​ ವಾರ್ಡ್​​ನಲ್ಲಿ ಪಿಪಿಇ ಕಿಟ್​ ಧರಿಸಿ ವೈದ್ಯರ ಡ್ಯಾನ್ಸ್​

ಆದರೂ ಅದೆಷ್ಟೋ ರೋಗಿಗಳು ಕೊರೊನಾ‌ ಬಂತು ಅನ್ನೊ‌ ಭಯಕ್ಕೆ ಸಾವನ್ನಪ್ಪುತ್ತಿದ್ದಾರೆ ಅಥವಾ ಬೇಗ ಗುಣಮುಖರಾಗುತ್ತಿಲ್ಲ.‌ ಹೀಗಾಗಿ ಕೊರೊನಾ ರೋಗಿಗಳಲ್ಲಿ ಧೈರ್ಯ ತುಂಬಲು ವೈದ್ಯರು ಹೊಸ ಪ್ಲಾನ್‌ ಮಾಡಿದ್ದಾರೆ.

ಇದನ್ನೂ ಓದಿ:ಸಂಕಷ್ಟದಲ್ಲಿದ್ದ ಕರ್ನಾಟಕ ಕಬ್ಬಡ್ಡಿ ಆಟಗಾರ್ತಿ ತೇಜಸ್ವಿನಿಗೆ 2 ಲಕ್ಷ ಪರಿಹಾರ ಘೋಷಿಸಿದ ಸಿಎಂ

ಕೊರೊನಾ ರೋಗಿಗಳೇ ತುಂಬಿರುವ ಕೋವಿಡ್ ವಾರ್ಡ್​​ನಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕುಣಿದ್ದಿದ್ದಾರೆ. ಡಾ.ಚಂದ್ರಮ್ಮ‌ ಎಂಬುವವರು ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ಈ ರೀತಿಯ ವಿನೂತನ ಪ್ರಯತ್ನ‌ ಮಾಡಿದ್ದಾರೆ. ರೋಗಿಗಳಲ್ಲಿ ಭಯ ಓಡಿಸಿ ಜೀವನೋತ್ಸಾಹ ಹೆಚ್ಚಿಸಲು ಪಿಪಿಇ ಕಿಟ್​​ನಲ್ಲೇ ಕನ್ನಡದ ಹಾಡಿಗೆ ವೈದ್ಯರು ಕುಣಿದು‌ ಸೋಂಕಿತರನ್ನು ಮನರಂಜಿಸಿದ್ದಾರೆ.

ABOUT THE AUTHOR

...view details