ಕರ್ನಾಟಕ

karnataka

ETV Bharat / city

ಹೈಕಮಾಂಡ್ ಜೊತೆ ಡಿಕೆಶಿ ವಿಡಿಯೋ ಸಂವಾದ..ರಾಜ್ಯದ ಬೆಳವಣಿಗೆ ಬಗ್ಗೆ ವಿವರಣೆ - Bangalore News

ಕೆಪಿಸಿಸಿ‌ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೈಕಮಾಂಡ್ ಜೊತೆ ವಿಡಿಯೋ ಸಂವಾದ‌ ನಡೆಸಿ, ವಲಸೆ ಕಾರ್ಮಿಕರ ಸ್ಥಳಾಂತರ,ರೈತರ ಸಮಸ್ಯೆಗಳು ಸೇರಿದಂತೆ ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ವಿವರಣೆ ನೀಡಿದರು.

DK Shivakumar Video Conversation With High Command
ಹೈಕಮಾಂಡ್ ಜೊತೆ ಡಿಕೆಶಿ ವಿಡಿಯೋ ಸಂವಾದ..ರಾಜ್ಯದ ಬೆಳವಣಿಗೆ ಬಗ್ಗೆ ವಿವರಣೆ

By

Published : May 9, 2020, 7:24 AM IST

ಬೆಂಗಳೂರು:ಕೆಪಿಸಿಸಿ‌ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶುಕ್ರವಾರ ಹೈಕಮಾಂಡ್ ಜೊತೆ ವಿಡಿಯೋ ಸಂವಾದ‌ ನಡೆಸಿ, ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ವಿವರಣೆ ನೀಡಿದರು.

ನಾನು ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆಗೂಡಿ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಅವರನ್ನ ಭೇಟಿಯಾಗಿ ಕಾರ್ಮಿಕರ ಸ್ಥಳಾಂತರಕ್ಕೆ ಉಚಿತ ರೈಲು ವ್ಯವಸ್ಥೆ ಕಲ್ಪಿಸುವಂತೆ ಮನವಿ ನೀಡಿದ್ದೇವೆ. ಅದರಂತೆ ರಾಜ್ಯದ ಕಾರ್ಮಿಕರ ಪ್ರಯಾಣ ಶುಲ್ಕ ಭರಿಸಲು ಕೆಪಿಸಿಸಿ ಎರಡು ಕೋಟಿ ರೂ. ಚೆಕ್ ನೀಡಿತ್ತು. ನಮ್ಮ ಹೋರಾಟದ ಬಳಿಕ ಸರ್ಕಾರ ಕಾರ್ಮಿಕರಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಿದೆ ಎಂದು ಹೈಕಮಾಂಡ್​ಗೆ ವಿವರಿಸಿದರು.

ಇತ್ತ ರೈತರ ಸಮಸ್ಯೆಗಳ ಬಗ್ಗೆಯೂ ಕಾಂಗ್ರೆಸ್ ನಾಯಕರು ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಂಕಷ್ಟದಲ್ಲಿರುವ ರೈತರಿಗೂ ಕಾಂಗ್ರೆಸ್ ತಮ್ಮ ಕೈಲಾಗುವ ಸಹಾಯವನ್ನು ಮಾಡುತ್ತಿದೆ. ಕಾಂಗ್ರೆಸ್ ನಾಯಕರು ಸುಮಾರು 100 ಕೋಟಿ ರೂ. ಮೊತ್ತದ ಹಣ್ಣು ತರಕಾರಿಗಳನ್ನು ಖರೀದಿಸಿದ್ದಾರೆ ಎಂದು ಹೈಕಮಾಂಡ್​ಗೆ ತಿಳಿಸಿದರು.

ಕಾರ್ಮಿಕರ ಸ್ಥಳಾಂತರಕ್ಕೆ ಕಾಂಗ್ರೆಸ್​ ಸಾಧ್ಯವಾದಷ್ಟು ಪ್ರಯತ್ನಿಸಿದೆ. ಈ ಸಂಬಂಧ ಸಿಎಂ ಅವರನ್ನೂ ಭೇಟಿಯಾಗಿ ಸಲಹೆ-ಸೂಚನೆ ನೀಡಿದ್ದೇವೆ. ಸಿಎಂ ಬಳಿ ಕಾರ್ಮಿಕರನ್ನ ನಡೆಸಿಕೊಳ್ಳುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದೇವೆ ಎಂದು ವಿವರಿಸಿದರು.

ಇನ್ನು,ಇತರ ರಾಜ್ಯಗಳಿಗೆ ತೆರಳುವ ಕಾರ್ಮಿಕರಿಗೆ ಎಲ್ಲಾ ಸಹಕಾರ ನೀಡಲು ನಮ್ಮ ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇನೆ. ಅವರ ಎಲ್ಲಾ ಕೊಂದು-ಕೊರತೆಗಳನ್ನ ನೀಗಿಸಲು ನೆರವಾಗುವಂತೆ ನಿರ್ದೇಶನ ನೀಡಿದ್ದೇನೆ ಎಂದು ತಿಳಿಸಿದರು.

ABOUT THE AUTHOR

...view details