ಕರ್ನಾಟಕ

karnataka

ಟೋಪಿ ಹಾಕುವ ಸ್ಕೀಂಗಳಿಗೂ, ಪಿಎಂ-ಕೇರ್ಸ್‌ಗೂ ವ್ಯತ್ಯಾಸವಿದೆಯೇ; ದಿನೇಶ್ ಗುಂಡೂರಾವ್

ರೈತರ ಪ್ರತಿಭಟನೆ ವಿಚಾರದಲ್ಲಿ ಕೇಂದ್ರ ಸರ್ಕಾರ ಲಜ್ಜೆಗೇಡಿತನ ಪ್ರದರ್ಶಿಸುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಹರಾಜಾಗುತ್ತಿದ್ದರೂ ಮೋದಿ ಸರ್ಕಾರದ ನಿರ್ಲಿಪ್ತತೆ ಖಂಡನೀಯ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

By

Published : Dec 26, 2020, 5:01 PM IST

Published : Dec 26, 2020, 5:01 PM IST

Dinesh gundurao
ದಿನೇಶ್ ಗುಂಡೂರಾವ್

ಬೆಂಗಳೂರು:ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಟ್ವೀಟ್ ಮೂಲಕ ತಮ್ಮ ಆಕ್ರೋಶ ಹೊರ ಹಾಕಿರುವ ಅವರು, ಪಿಎಂ-ಕೇರ್ಸ್ ಎಂಬ ನಿಧಿ ಸ್ಥಾಪಿಸಿ ಸ್ವತಃ ಕೇಂದ್ರ ಸರ್ಕಾರವೇ ಆರ್ಥಿಕ ಅಪರಾಧದಲ್ಲಿ ತೊಡಗಿದೆ. ದೇಶದಲ್ಲಿ ನಡೆಯುವ ಅನೇಕ ಟೋಪಿ ಹಾಕುವ ಸ್ಕೀಂಗಳಿಗೂ ಈ ಪಿಎಂ-ಕೇರ್ಸ್‌ಗೂ ಏನಾದರೂ ವ್ಯತ್ಯಾಸವಿದೆಯೆ.? ಕೋವಿಡ್ ಸಂಕಷ್ಟ ಕಾಲದಲ್ಲಿ ಜನರಿಗೆ ನೆರವಾಗಬೇಕಾದ ಸರ್ಕಾರ, ಜನರಿಂದಲೇ ದೇಣಿಗೆ ಪಡೆದು, ಬಿಡಿಗಾಸು ಖರ್ಚು ಮಾಡದೆ ಮಾಹಿತಿ ಮುಚ್ಚಿಟ್ಟರೆ ಏನರ್ಥ.? ಎಂದಿದ್ದಾರೆ.

ರೈತರ ಪ್ರತಿಭಟನೆ ವಿಚಾರದಲ್ಲಿ ಕೇಂದ್ರ ಸರ್ಕಾರ ಲಜ್ಜೆಗೇಡಿತನ ಪ್ರದರ್ಶಿಸುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಹರಾಜಾಗುತ್ತಿದ್ದರೂ ಮೋದಿ ಸರ್ಕಾರದ ನಿರ್ಲಿಪ್ತತೆ ಖಂಡನೀಯ. ಒಂದು ತಿಂಗಳಿನಿಂದ ಪ್ರತಿಭಟನೆ ನಡೆಯುತ್ತಿದ್ದರೂ ಕೇಂದ್ರ ಸ್ಪಂದಿಸದೆ ಹೋದರೆ, ಇದು ದಪ್ಪ ಚರ್ಮದ ಸರ್ಕಾರವಲ್ಲದೆ ಮತ್ತೇನು.? ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ಕೇಂದ್ರದ ಮೂರು ಕೃಷಿ ಕಾಯ್ದೆಗಳ ಕುರಿತು ಕುಮಾರಸ್ವಾಮಿ ಹೇಳಿದ್ದೇನು?

ABOUT THE AUTHOR

...view details