ಕರ್ನಾಟಕ

karnataka

ETV Bharat / city

ಡಿಕೆಶಿ ರಾಜಕೀಯವಾಗಿ ನೇಪಥ್ಯಕ್ಕೆ ಸರಿಯುತ್ತಿದ್ದಾರೆ: ಸಿ.ಪಿ ಯೋಗೇಶ್ವರ್ ಭವಿಷ್ಯ - political development news

ಕಾಂಗ್ರೆಸ್ ಪಕ್ಷಕ್ಕೆ ಇಷ್ಟೊಂದು ಹಾನಿ ಆಗಿರುವುದಕ್ಕೆ ಡಿ.ಕೆ ಶಿವಕುಮಾರ್ ಕಾರಣ. ಡಿಕೆಶಿ ಅಹಂಕಾರ, ದರ್ಪ ಎಲ್ಲವನ್ನೂ ಸಾರ್ವಜನಿಕರು ಗಮನಿಸುತ್ತಿದ್ದಾರೆ. ಅದು ಕೊನೆಗೊಳ್ಳುವ ಕಾಲ ಬಂದಂತಿದೆ. ಅವರ ರಾಜಕೀಯ ದಿನಗಳು ಕೊನೆಯಾಗುತ್ತಿದೆ. ಪಾಪ ಅವರೇ ಮರುಕ ಪಟ್ಟುಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಸಿ.ಪಿ ಯೋಗೇಶ್ವರ್ ವ್ಯಂಗ್ಯವಾಡಿದ್ದಾರೆ.

ಸಿ.ಪಿ ಯೋಗೇಶ್ವರ್

By

Published : Aug 3, 2019, 7:41 PM IST

ಬೆಂಗಳೂರು: ಡಿ.ಕೆ ಶಿವಕುಮಾರ್ ರಾಜಕೀಯವಾಗಿ ನೇಪಥ್ಯಕ್ಕೆ ಸರಿಯುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಸಿ.ಪಿ ಯೋಗೇಶ್ವರ್ ಭವಿಷ್ಯ ನುಡಿದರು.

ಡಿಕೆಶಿ ರಾಜಕೀಯ ಕುರಿತು ಸಿ.ಪಿ ಯೋಗೇಶ್ವರ್ ಭವಿಷ್ಯ

ರಮೇಶ್ ಜಾರಕಿಹೊಳಿ ನಿವಾಸದಿಂದ ತೆರಳುವ ವೇಳೆ ಮಾತನಾಡಿದ ಅವರು, ಡಿಕೆಶಿ ಭವಿಷ್ಯ ಅಂತ್ಯವಾಗುತ್ತಿದೆ. ಅವರು ಪ್ರಬುದ್ಧ ರಾಜಕಾರಣಿಯಾಗಿ ನಡೆದುಕೊಳ್ಳುತ್ತಿಲ್ಲ. ಇತ್ತೀಚಿನ ಹಲವು ಘಟನೆಗಳಿಂದ ಅವರಿಗೆ ಹಿನ್ನೆಡೆಯಾಗುತ್ತಿದ್ದು, ಸಾರ್ವಜನಿಕ ನಡವಳಿಕೆ ಒಪ್ಪುವಂತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇಂದು ಕಾಂಗ್ರೆಸ್ ಪಕ್ಷಕ್ಕೆ ಇಷ್ಟೊಂದು ಹಾನಿ ಆಗಿರುವುದಕ್ಕೆ ಡಿ.ಕೆ ಶಿವಕುಮಾರ್ ಅವರೇ ಕಾರಣ. ಡಿ.ಕೆ ಶಿವಕುಮಾರ್ ಅಹಂಕಾರ, ದರ್ಪ ಎಲ್ಲವನ್ನೂ ಸಾರ್ವಜನಿಕರು ಗಮನಿಸುತ್ತಿದ್ದಾರೆ. ಅದು ಕೊನೆಗೊಳ್ಳುವ ಕಾಲ ಬಂದಂತಿದೆ. ಅವರ ರಾಜಕೀಯ ದಿನಗಳು ಕೊನೆಯಾಗುತ್ತಿದೆ. ಪಾಪ ಅವರೇ ಮರುಕ ಪಟ್ಟುಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಡಿ.ಕೆ ಶಿವಕುಮರ್ ಕಾಂಗ್ರೆಸ್​ಗೆ ಟ್ರಬಲ್ ಶೂಟರ್ ಅಲ್ಲ‌, ರಾಜಕಾರಣಕ್ಕೆ ಟ್ರಬಲ್ ಆದವರು. ಅವರಿಂದ ಕಾಂಗ್ರೆಸ್​ಗೆ ಯಾವುದೇ ಲಾಭ ಆಗಿಲ್ಲ, ಡಿಕೆಶಿ ಸವಾಲುಗಳಿಗೆ ಅವರ ಸ್ನೇಹಿತರೇ ಪ್ರತಿಸವಾಲ್ ಹಾಕಿದ್ದಾರೆ. ಇದನ್ನು ಅರ್ಥಮಾಡಿಕೊಂಡು ತಮ್ಮ ನಡವಳಿಕೆಯಲ್ಲಿ ಬದಲಾವಣೆ ಮಾಡಿಕೊಳ್ಳಲಿ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ ಎಂಬ ಗಾದೆ ಇದೆ. ಯಶಸ್ಸು ಕಾಣದೇ ರಾಜಕೀಯ ಅಂತ್ಯ ಕಾಣುವ ರಾಜಕಾರಣಿಗಳಲ್ಲಿ ಡಿ.ಕೆ ಶಿವಕುಮಾರ್ ಒಬ್ಬರಾಗಬಹುದು ಎಂದು ಟಾಂಗ್ ನೀಡಿದರು.

ಅನರ್ಹ ಶಾಸಕರ ಬೆಂಬಲಕ್ಕೆ ನಾವಿದ್ದೇವೆ‌:

ಅನರ್ಹ ಶಾಸಕರ ಬೆಂಬಲಕ್ಕೆ ನಾವಿದ್ದೇವೆ‌. ಅವರು ನಮಗೆ ಸಹಕಾರ ಮಾಡಿದ್ದಾರೆ. ಮುಂದಿನ ರಾಜಕೀಯ ನಡೆ ಬಗ್ಗೆ ಇಂದು ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಚರ್ಚೆ ಮಾಡಿದ್ದೇವೆ. ಎಸ್.ಟಿ ಸೋಮಶೇಖರ್, ಗೋಪಾಲಯ್ಯ, ಎಂ.ಟಿ.ಬಿ ನಾಗರಾಜ್ ಜೊತೆ ಸೇರಿ ಚರ್ಚಿಸಿದ್ದೇವೆ. ಅವರ ನೋವು, ಅನುಭವಗಳನ್ನು ತೋಡಿಕೊಂಡಿದ್ದಾರೆ. ನ್ಯಾಯಾಲಯದಲ್ಲಿ ಯಾವ ತೀರ್ಪು ಬರಲಿದೆ ಅನ್ನೋದನ್ನು ಕಾದು ನೋಡುತ್ತಿದ್ದೇವೆ ಎಂದು ತಿಳಿಸಿದ್ರು.

ABOUT THE AUTHOR

...view details