ಕರ್ನಾಟಕ

karnataka

ಕೊರೊನಾ ವಾರಿಯರ್ಸ್​​​ಗೆ ನಿಲ್ಲದ ವೈರಸ್ ಕಾಟ

ನಿಮ್ಹಾನ್ಸ್​ ಆಸ್ಪತ್ರೆಯ ವೈದ್ಯರಿಗೆ ಕೊರೊನಾ ವೈರಾಣು ತಗುಲಿದ್ದು, ಈ ಮೂಲಕ ಆಸ್ಪತ್ರೆಯಲ್ಲಿ ಸೋಂಕಿತರ ಸಂಖ್ಯೆ 8ಕ್ಕೆ ಏರಿದೆ. ಸೋಂಕಿತರ ಸಂಪರ್ಕದಲ್ಲಿದ್ದವರು ಕ್ವಾರಂಟೈನ್​​ನಲ್ಲಿ ಇದ್ದಾರೆ.

By

Published : Jun 22, 2020, 12:22 PM IST

Published : Jun 22, 2020, 12:22 PM IST

NIMHAS
ನಿಮ್ಹಾನ್ಸ್​​

ಬೆಂಗಳೂರು:ಉದ್ಯಾನ ನಗರಿಯಲ್ಲಿ ಕೊರೊನಾ‌ ಆರ್ಭಟ ಮುಂದುವರೆದಿದ್ದು, ಈಗ ಚಿಕಿತ್ಸೆ ನೀಡುವ ವೈದ್ಯರಿಗೂ ಸೋಂಕು ತಗುಲಿದೆ. ಕಿಮ್ಸ್​​​ನ ಇಬ್ಬರು ವೈದ್ಯರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಅವರನ್ನು‌ ವಿಕ್ಟೋರಿಯಾಕ್ಕೆ ದಾಖಲಿಸಲಾಗಿದೆ.

‌ಹಾಗೆಯೇ ಹೃದಯ ಸರ್ಜರಿ ಮಾಡುತ್ತಿದ್ದ ವೈದ್ಯರಿಗೂ ಕೊರೊನಾ ತಗುಲಿದೆ. ಜಯದೇವ ಆಸ್ಪತ್ರೆಯ ವೈದ್ಯರಿಗೆ ಸೋಂಕು ದೃಢಪಟ್ಟಿದ್ದು, ಇದೀಗ ಚಿಕಿತ್ಸೆಗಾಗಿ ವಿಕ್ಟೋರಿಯಾಗೆ ಅವರನ್ನು ಸ್ಥಳಾಂತರಿಸಲಾಗಿದೆ.

ಎರಡು ದಿನ ನಿಮ್ಹಾನ್ಸ್ ಐಸಿಯು ಬಂದ್

ವೈದ್ಯರಿಗೆ ಸೋಂಕು ತಗುಲಿದ ಪರಿಣಾಮ ನಿಮ್ಹಾನ್ಸ್​​​​ ಐಸಿಯು ವಾರ್ಡ್ ಸಂಪೂರ್ಣ ಬಂದ್ ಆಗಿದೆ. ಐಸಿಯುನಲ್ಲಿದ್ದ 20 ರೋಗಿಗಳನ್ನು ಪರ್ಯಾಯ ವಾರ್ಡ್​​​​ಗೆ ಶಿಫ್ಟ್ ಮಾಡಲಾಗಿದೆ.

ಈವರೆಗೂ ಆಸ್ಪತ್ರೆಯ 8 ಮಂದಿಗೆ ಸೋಂಕು‌ ತಗುಲಿದ್ದು, ಅವರ ಸಂಪರ್ಕದಲ್ಲಿದ್ದವರನ್ನ ಕ್ವಾರಂಟೈನ್ ಮಾಡಲಾಗಿದೆ. ನ್ಯೂರೋ ಸರ್ಜರಿ, ಸೈಕಿಯಾಟ್ರಿಕ್, ಒಬ್ಬ ರೋಗಿ ಹಾಗೂ 6 ಸ್ವಚ್ಛತಾ ಸಿಬ್ಬಂದಿಗೆ ಸೋಂಕು ಹರಡಿದೆ. ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗೂ ಸೋಂಕು ತಗುಲಿದ್ದು, ಈತನ ಸಂರ್ಪಕದಲ್ಲಿದ್ದ ನಾಲ್ವರನ್ನು ನಿಗಾದಲ್ಲಿ ಇಡಲಾಗಿದೆ.

ABOUT THE AUTHOR

...view details