ಕರ್ನಾಟಕ

karnataka

ETV Bharat / city

ವಿಧಾನಸಭೆ ಕಲಾಪ: ಅಗಲಿದ ಗಣ್ಯರಿಗೆ ಸಂತಾಪ ಸೂಚನೆ - ಜಂಟಿ ಅಧಿವೇಶನ

ವಂದೇ ಮಾತರಂ ಗೀತೆಯೊಂದಿಗೆ ವಿಧಾನಸಭೆ ಕಲಾಪವನ್ನು ಆರಂಭಿಸಿ ನಂತರ ಸಂತಾಪ ಸೂಚನೆ ನಿರ್ಣಯವನ್ನು ಕೈಗೆತ್ತಿಕೊಂಡ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದರು.

Assembly
Assembly

By

Published : Jan 28, 2021, 7:27 PM IST

ಬೆಂಗಳೂರು: ಜಂಟಿ ಅಧಿವೇಶನದಲ್ಲಿ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಬೀಳ್ಕೊಟ್ಟ ನಂತರ ವಂದೇ ಮಾತರಂ ಗೀತೆಯೊಂದಿಗೆ ವಿಧಾನಸಭೆ ಕಲಾಪ ಆರಂಭಿಸಲಾಯಿತು.

ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂತಾಪ ಸೂಚನೆ ನಿರ್ಣಯವನ್ನು ಕೈಗೆತ್ತಿಕೊಂಡು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದರು. ಸಂತಾಪ ಸೂಚಕ ನಿರ್ಣಯವನ್ನು ಸಿಎಂ ಯಡಿಯೂರಪ್ಪ, ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಉಪನಾಯಕ ಬಂಡೆಪ್ಪ ಕಾಶಂಪೂರ ಸೇರಿದಂತೆ ಹಲವರು ಬೆಂಬಲಿಸಿ ಮಾತನಾಡಿದರು.

ಕಲಾಪ ವೇಳೆ ವಿಧಾನ ಪರಿಷತ್ತಿನ ಉಪ ಸಭಾಪತಿಯಾಗಿದ್ದ ಎಸ್.ಎಲ್. ಧರ್ಮೇಗೌಡ, ಹಾಲಿ ವಿಧಾನಸಭೆ ಸದಸ್ಯ ಹಾಗೂ ಮಾಜಿ ಸಚಿವ ಮಲ್ಲಪ್ಪ ಚನ್ನವೀರಪ್ಪ ಮನಗೂಳಿ, ಮಾಜಿ ವಿಧಾನಸಭೆ ಸದಸ್ಯರುಗಳಾದ ರೇಣುಕಾ ರಾಜೇಂದ್ರನ್, ಪ್ರೇಮಾನಂದ ಜೈವಂತ ಸುಬ್ರಾಯ, ಬಸವಂತರೆಡ್ಡಿ ಪಾಟೀಲ ಮೋತಕಪಲ್ಲಿ, ಕೇಂದ್ರದ ಮಾಜಿ ಸಚಿವರಾಗಿದ್ದ ಬೂಟಾ ಸಿಂಗ್, ಉದ್ಯಮ ಸಮೂಹಗಳ ಸ್ಥಾಪಕರಾಗಿದ್ದ ಡಾ.ಆರ್.ಎನ್. ಶೆಟ್ಟಿ, ಹಿರಿಯ ತತ್ವಶಾಸ್ತ್ರ ವಿದ್ವಾಂಸರಾಗಿದ್ದ ಡಾ. ಬನ್ನಂಜೆ ಗೋವಿಂದಾಚಾರ್ಯ, ರಾಮಕೃಷ್ಣ ಆಶ್ರಮದ ಅಧ್ಯಕ್ಷರಾಗಿದ್ದ ಹರ್ಷಾನಂದ ಸ್ವಾಮೀಜಿ ಹಾಗೂ ಖ್ಯಾತ ವಿಜ್ಞಾನಿ ಡಾ. ರೊದ್ದಂ ನರಸಿಂಹ ಸೇರಿದಂತೆ ಇತ್ತೀಚೆಗೆ ಅಗಲಿದ ಗಣ್ಯರಿಗೆ ಉಭಯ ಸದನಗಳಲ್ಲಿ ಭಾವಪೂರ್ಣ ಸಂತಾಪ ಸಲ್ಲಿಸಲಾಯಿತು.

ABOUT THE AUTHOR

...view details