ಕರ್ನಾಟಕ

karnataka

ETV Bharat / city

ಉಮೇಶ್ ಕತ್ತಿ, ಲಿಂಬಾವಳಿ ಕ್ಯಾಬಿನೆಟ್ ಸೇರ್ಪಡೆಗೆ ಸಿಎಂ ಕಸರತ್ತು

ಸಚಿವ ಸ್ಥಾನ ಸಿಗದೇ ಅಸಮಾಧಾನಗೊಂಡಿರುವ ಹಿರಿಯ ಶಾಸಕರಾದ ಉಮೇಶ ಕತ್ತಿ, ಅರವಿಂದ ಲಿಂಬಾವಳಿ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲು ಸಿಎಂ ಯಡಿಯೂರಪ್ಪ ತೀವ್ರ ಕಸರತ್ತು ನಡೆಸಿದ್ದಾರೆ ಎನ್ನಲಾಗ್ತಿದೆ.

By

Published : Aug 26, 2019, 12:56 PM IST

Updated : Aug 26, 2019, 1:01 PM IST

ಉಮೇಶ್ ಕತ್ತಿ, ಲಿಂಬಾವಳಿ, ಯಡಿಯೂರಪ್ಪ

ಬೆಂಗಳೂರು: ಸಚಿವ ಸ್ಥಾನ ಸಿಗದೇ ಅಸಮಾಧಾನಗೊಂಡಿರುವ ಹಿರಿಯ ಶಾಸಕರಾದ ಉಮೇಶ್​ ಕತ್ತಿ, ಅರವಿಂದ ಲಿಂಬಾವಳಿ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ತೀವ್ರ ಕಸರತ್ತು ನಡೆಸಿದ್ದಾರೆ.

ಬಿಜೆಪಿ ಹೈಕಮಾಂಡ್, ಸಂಘ ಪರಿವಾರದ ಮುಖಂಡರ ಬಳಿ ಸಿಎಂ ಸುದೀರ್ಘವಾಗಿ ಸಮಾಲೋಚನೆ ನಡೆಸಿ, ಇಬ್ಬರನ್ನೂ ಕ್ಯಾಬಿನೆಟ್​ಗೆ ಸೇರಿಸಿಕೊಳ್ಳಲು ಒಪ್ಪಿಗೆ ಪಡೆದಿದ್ದಾರೆಂದು ಹೇಳಲಾಗ್ತಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿದ್ದ ಅರವಿಂದ ಲಿಂಬಾವಳಿ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಕೈ ತಪ್ಪಿದ್ದರಿಂದ ಸಚಿವ ಸ್ಥಾನ ನೀಡಲು ಸಿಎಂ ನಿರ್ಧರಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿಯೂ ಸಹ ಲಕ್ಷ್ಮಣ್​ ಸವದಿ, ಶಶಿಕಲಾ ಜೊಲ್ಲೆ ಅವರ ಜತೆ ಉಮೇಶ್​ ಕತ್ತಿ ಅವರಿಗೆ ಸಚಿವ ಸ್ಥಾನ ನೀಡಲು ಇರುವ ಅಡೆತಡೆಗಳನ್ನು ಯಡಿಯೂರಪ್ಪ ನಿವಾರಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

ಇನ್ನು ಸುಪ್ರೀಂ ಕೋರ್ಟ್​ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ಗಮನಿಸಿ ಸಂಪುಟ ವಿಸ್ತರಣೆ ಮಾಡಲು ಮುಖ್ಯಮಂತ್ರಿ ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ನ್ಯಾಯಾಲಯದಲ್ಲಿ ಶಾಸಕರ ಅನರ್ಹತೆಗೆ ತಡೆಯಾಜ್ಞೆ ದೊರೆತರೆ ಕಾನೂನು ತೊಡಕುಗಳನ್ನು ನಿವಾರಿಸಿ, ಅನರ್ಹ ಶಾಸಕರನ್ನು ಮೊದಲು ಬಿಜೆಪಿಗೆ ಸೇರಿಸಿಕೊಂಡು ನಂತರ ಸಂಪುಟ ವಿಸ್ತರಣೆ ಮಾಡುವ ಆಲೋಚನೆ ಇದೆ ಎನ್ನಲಾಗಿದೆ.

Last Updated : Aug 26, 2019, 1:01 PM IST

ABOUT THE AUTHOR

...view details