ಬೆಂಗಳೂರು:ಬಿಎಸ್-4 ವಾಹನಗಳ ನೋಂದಣಿಗೆ ಜನವರಿ 1ರಿಂದ ಜನವರಿ 16ವರೆಗೆ ಅವಕಾಶ ನೀಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಅಗತ್ಯ ದಾಖಲೆಗಳೊಂದಿಗೆ ನೋಂದಣಿ ಮಾಡಲು ಆರ್ಟಿಓ ಇಲಾಖೆ ಅವಕಾಶ ಕಲ್ಪಿಸಿದೆ.
ಇದನ್ನೂ ಓದಿ:ಹಿಂಬದಿ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯದಂತೆ ಮುಂಬದಿ ಕಾರು ಸವಾರರಿಗೂ ಬರಲಿದೆ ಹೊಸ ರೂಲ್ಸ್!
31.03.2020ಕ್ಕಿಂತ ಮೊದಲು ಮಾರಾಟವಾಗಿ, ಇ-ವಾಹನ್ ಪೋರ್ಟಲ್‌ನಲ್ಲಿ ವಿವರಗಳನ್ನು ದಾಖಲಿಸಿ, ತಾತ್ಕಾಲಿಕ ನೋಂದಣಿ ಹೊಂದಿರುವ ಮತ್ತು ಆನ್ಲೈನ್/ ಆಫ್ಲೈನ್ ಮೂಲಕ ತೆರಿಗೆ ಹಾಗೂ ಶುಲ್ಕ ಪಾವತಿಸಿರುವ, ನೋಂದಣಿಗೆ ಬಾಕಿ ಇರುವ ಭಾರತ್ ಸ್ಟೇಜ್-4 ವಾಹನಗಳಿಗೆ ಕೊನೆಯ ಅವಕಾಶ ನೀಡಲಾಗಿದೆ.
ಇನ್ನು ಈ ವಾಹನಗಳಿಗೆ ಕರ್ನಾಟಕ ರಾಜ್ಯದಲ್ಲಿ ಮಾತ್ರ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಲಾಗಿದೆ.