ಕರ್ನಾಟಕ

karnataka

ETV Bharat / city

ಬಂದವನೇ ಬೈಕ್ ತಳ್ಕೊಂಡು ಹೋಗೇಬಿಟ್ಟ: ಕಳ್ಳನ ಕರಾಮತ್ತು ಸಿಸಿಟಿವಿಯಲ್ಲಿ ಸೆರೆ

ಸಿಲಿಕಾನ್ ಸಿಟಿಯಲ್ಲಿ ಬೈಕ್​ ಕಳ್ಳರ ಹಾವಳಿ ಮತ್ತೆ ಶುರುವಾಗಿದೆ. ಕೋರಮಂಗಲದ ಮನೆಯೊಂದರ ಎದುರು ನಿಲ್ಲಿಸಿದ್ದ ಬೈಕ್​ನ್ನ ಕ್ಷಣಾರ್ಧದಲ್ಲಿ ಕದ್ದು ಪರಾರಿಯಾದ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿದೆ.

By

Published : Jan 28, 2020, 11:51 AM IST

bike-stolen-in-bangalore-koramangala-city
ಬೈಕ್​​ ಕಳ್ಳತನ

ಬೆಂಗಳೂರು: ನಗರದಲ್ಲಿ ಬೈಕ್ ಕಳ್ಳರ ಹಾವಳಿ ಮತ್ತೆ ಶುರುವಾಗಿದ್ದು, ಮನೆ ಮುಂಭಾಗ ನಿಲ್ಲಿಸಿದ್ದ ಬೈಕ್​ನ್ನು ಕ್ಷಣಾರ್ಧದಲ್ಲಿ ಕದ್ದು ಪರಾರಿಯಾಗಿರುವ ಘಟನೆ ಆಗ್ನೇಯ ವಿಭಾಗದ ಕೋರಮಂಗಲ ಬಳಿ ನಡೆದಿದೆ.

ನವೀನ್ ಎಂಬುವವರು ಮನೆಯ ಮುಂದೆ ಬೈಕ್ ನಿಲ್ಲಿಸಿದ್ದರು. ರಾತ್ರಿ ವೇಳೆ ಬಂದ ಕಳ್ಳ ಯಾರಿಗೂ ಗೊತ್ತಾಗದ ಹಾಗೆ‌ ಬೈಕ್ ಲಾಕ್ ಮುರಿದು ಕದ್ದು ಪರಾರಿಯಾಗಿದ್ದಾನೆ.

ಬೈಕ್​​ ಕಳ್ಳತನ

ಇನ್ನು ಕಳ್ಳನ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆಗ್ನೇಯ ವಿಭಾಗದ ಪೊಲೀಸರು ಆರೋಪಿಗಾಗಿ ಶೋಧ ಮುಂದುವರೆಸಿದ್ದಾರೆ.

ABOUT THE AUTHOR

...view details