ಬೆಂಗಳೂರು: ಫ್ಲೈಓವರ್ ಮೇಲಿಂದ ಲಾರಿಯಲ್ಲಿದ್ದ ಮರದ ದಿಮ್ಮಿಗಳು ಬೈಕ್ ಮೇಲೆ ಬಿದ್ದು ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. ತಮಿಳುನಾಡು ಮೂಲದ ಮುಖೇಶ್ ಮೃತ ದುರ್ದೈವಿ. ಈತನ ಜೊತೆಗಿದ್ದ ಡೇವಿಡ್ ಹಾಗೂ ಮತ್ತೊಂದು ಬೈಕ್ನಲ್ಲಿ ತೆರಳುತ್ತಿದ್ದ ಶಿವು ಎಂಬಾತನಿಗೂ ಗಂಭೀರ ಗಾಯಗಳಾಗಿವೆ.
ನಾಗರಬಾವಿ ರಿಂಗ್ ರಸ್ತೆಯ ಫ್ಲೈ ಓವರ್ ಬಳಿ ದುರ್ಘಟನೆ ನಡೆದಿದೆ. ಸುಂಕದಕಟ್ಟೆಯಿಂದ ನಾಗರಬಾವಿ ಕಡೆ ಬರುತ್ತಿದ್ದ ಆಂಧ್ರದ ಲಾರಿ, ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಲಾರಿ ಸ್ಕಿಡ್ ಆಗುತ್ತಿದ್ದಂತೆ ಲಾರಿಯಲ್ಲಿದ್ದ ಮರದ ದಿಮ್ಮಿಗಳು ಫ್ಲೈಓವರ್ ಕೆಳ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಮೇಲೆ ಬಿದ್ದಿವೆ ಎನ್ನಲಾಗ್ತಿದೆ.