ಬೆಂಗಳೂರು:ಆಟ, ಪಾಠ ಅಂತಿರಬೇಕಿದ್ದ ವಿದ್ಯಾರ್ಥಿನಿಯರು ರೋಡಿಗಿಳಿದು ಒಬ್ಬರ ಮೇಲೊಬ್ಬರು ಮುಗಿಬಿದ್ದು ಹೊಡೆದಾಡಿಕೊಂಡಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ನಗರದ ಎರಡು ಪ್ರತಿಷ್ಠಿತ ಶಾಲಾ ವಿದ್ಯಾರ್ಥಿನಿಯರು ಕ್ರೀಡೆಯಲ್ಲಿ ಬಳಸುವ ಸ್ಟಿಕ್ ಹಿಡಿದು ಬಡಿದಾಡಿಕೊಂಡಿದ್ದಾರೆ. ಈ ವಿಡಿಯೋ ನೋಡಿ.
ಬೆಂಗಳೂರಿನ ಪ್ರತಿಷ್ಠಿತ ಶಾಲಾ ವಿದ್ಯಾರ್ಥಿನಿಯರ ಹೊಡೆದಾಟ! ವಿಡಿಯೋ ವೈರಲ್ - ಬೆಂಗಳೂರು ಎರಡು ಶಾಲೆಯ ವಿದ್ಯಾರ್ಥಿನಿಗಳ ನಡುವೆ ಸ್ಟಿಕ್ ಹಿಡಿದು ಫೈಟಿಂಗ್
ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಎರಡು ಶಾಲೆಯ ವಿದ್ಯಾರ್ಥಿನಿಯರು ರಸ್ತೆಗಿಳಿದು ಸ್ಟಿಕ್ ಹಿಡಿದು ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದಂತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ರಾಜ್ಯದ ರಾಜಧಾನಿಯಲ್ಲಿ ಜಡೆ ಜಗಳ
ವಿದ್ಯಾರ್ಥಿನಿಯರ ನಡುವಿನ ಗಲಾಟೆಗೆ ಕಾರಣ ತಿಳಿದುಬಂದಿಲ್ಲ. ಶಾಲಾ ಸಮವಸ್ತ್ರದಲ್ಲಿರುವ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಮಧ್ಯೆ ಘರ್ಷಣೆ ನಡೆದಿದೆ. ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ಇದಾಗಿದ್ದು, ಯಾವುದೇ ದೂರು ದಾಖಲಾಗಿಲ್ಲ.
ಇದನ್ನೂ ಓದಿ:Viral Video - ರಸ್ತೆಯಲ್ಲೇ 'ಜಡೆ' ಜಗಳ: ಕೋಚಿಂಗ್ ಸೆಂಟರ್ ಮುಂದೆ ವಿದ್ಯಾರ್ಥಿನಿಯರ ಮಾರಾಮಾರಿ!