ಕರ್ನಾಟಕ

karnataka

ETV Bharat / city

ಟ್ರಾವೆಲ್ ಹಿಸ್ಟರಿ ಇಲ್ಲದೆ ವೃದ್ಧೆಗೆ ಸೋಂಕು: ಕೋಡಿಚಿಕ್ಕನಹಳ್ಳಿ ಕಂಟೈನ್ಮೆಂಟ್ ಝೋನ್​ಗೆ ತಯಾರಿ

ಬೆಂಗಳೂರಿನ ಬೊಮ್ಮನಹಳ್ಳಿಯ ಬಿಳೇಕಹಳ್ಳಿ ವಾರ್ಡ್ ನಂ. 188ರಲ್ಲಿ ನಿನ್ನೆ 64 ವರ್ಷದ ಪಿ- 565 ಎಂಬ ವೃದ್ಧೆಗೆ ಸೋಂಕು ಇರುವುದು ದೃಢಪಟ್ಟಿತು. ಬೊಮ್ಮನಹಳ್ಳಿಯ ವಿಶೇಷ ಅಧಿಕಾರಿ ಅನ್ಬು ಕುಮಾರ್ ಹಾಗೂ ಜಂಟಿ ಆಯುಕ್ತ ರಾಮಕೃಷ್ಣ ಭೇಟಿ ನೀಡಿದ್ದು, ಕಂಟೈನ್ಮೆಂಟ್ ಝೋನ್ ಆಗಿ ಪರಿವರ್ತಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ.

By

Published : May 1, 2020, 11:37 PM IST

BBMP prepares  Kodichikkanahalli Containment Zone
ಪಿ.565 ಮಹಿಳೆಗೆ ಕೊರೊನಾ ಪಾಸಿಟಿವ್, ಕೋಡಿಚಿಕ್ಕನಹಳ್ಳಿ ಕಂಟೈನ್ಮೆಂಟ್ ಜೋನ್ ಗೆ ಸೇರಿಸಲು ಬಿಬಿಎಂಪಿ ತಯಾರಿ..!

ಬೆಂಗಳೂರು: ರೋಗಿ ಸಂಖ್ಯೆ- 565 ವೃದ್ಧೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಕೋಡಿಚಿಕ್ಕನಹಳ್ಳಿ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಆಗಿಸಲು ಬಿಬಿಎಂಪಿ ತಯಾರಿ ನಡೆಸಿದೆ.

ಬಿಬಿಎಂಪಿ ಈಗಾಗಲೇ ಅಧಿಕೃತ ಆದೇಶ ಹೊರಡಿಸಿದೆ.‌ ಬೊಮ್ಮನಹಳ್ಳಿಯ ಬಿಳೇಕಹಳ್ಳಿ ವಾರ್ಡ್ ನಂ. 188ರಲ್ಲಿ ನಿನ್ನೆ 64 ವರ್ಷದ ಪಿ. 565 ವೃದ್ಧೆಗೆ ಸೋಂಕು ಇರುವುದು ದೃಢಪಟ್ಟಿತು. ಈ ಪ್ರದೇಶಕ್ಕೆ ಬೊಮ್ಮನಹಳ್ಳಿಯ ವಿಶೇಷ ಅಧಿಕಾರಿ ಅನ್ಬು ಕುಮಾರ್ ಹಾಗೂ ಜಂಟಿ ಆಯುಕ್ತ ರಾಮಕೃಷ್ಣ ಭೇಟಿ ನೀಡಿದ್ದಾರೆ.

ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿದ್ದಾರೆ. ಈ ಸೋಂಕಿತೆಯ ಟ್ರಾವೆಲ್​ ಹಿಸ್ಟರಿ ಇದುವರೆಗೂ ತಿಳಿದುಬಂದಿಲ್ಲ. ಕೇವಲ ಕೆಮ್ಮು. ಶೀತ ಎಂದು ಆಸ್ಪತ್ರೆಗೆ ಬಂದಿದ್ದ ವೃದ್ಧೆಗೆ ಸೋಂಕು ಪತ್ತೆಯಾಗಿದೆ.

ABOUT THE AUTHOR

...view details