ಕರ್ನಾಟಕ

karnataka

ETV Bharat / city

ಕೊರೊನಾ ರೋಗಿ ಸಾವು: ಆ್ಯಂಬುಲೆನ್ಸ್​ ಚಾಲಕನಿಗೆ ಥಳಿಸಿದ ವೃದ್ಧನ ಸಂಬಂಧಿಕರು!

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವೃದ್ಧನಿಗೆ ಆ್ಯಂಬುಲೆನ್ಸ್​​​ ನಲ್ಲಿ ಆಕ್ಸಿಜನ್​ ನೀಡಲಿಲ್ಲವೆಂದು ರೋಗಿಯ ಸಂಬಂಧಿಕರು 108 ವಾಹನ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯ ವಿಡಿಯೋ ವೈರಲ್​ ಆಗಿದ್ದು, ಚಾಲಕ ಹಲ್ಲೆ ಮಾಡಿದವರ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.

By

Published : Jul 30, 2020, 7:13 PM IST

assault-on-ambulance-driver-in-bangalore
ಆ್ಯಂಬುಲೆನ್ಸ್​ ಚಾಲಕನ ಮೇಲೆ ಹಲ್ಲೆ

ಬೆಂಗಳೂರು: ಆ್ಯಂಬುಲೆನ್ಸ್​​ನಲ್ಲಿ ಆಕ್ಸಿಜನ್ ಸಿಗಲಿಲ್ಲವೆಂದು ಅಸಮಾಧಾನಗೊಂಡು ಚಾಲಕನ ಮೇಲೆ ರೋಗಿಯ ಸಂಬಂಧಿಕರು ಮನಬಂದಂತೆ ಹಲ್ಲೆ ಮಾಡಿದ್ದಾರೆ.

ಯೋಗೇಶ್ವರ್ ಹಲ್ಲೆಗೊಳಗಾಗಿರುವ ಚಾಲಕ. ಭಾರತಿ ನಗರದ ತಿಮ್ಮಯ್ಯ ಬಡಾವಣೆ ವಾಸವಾಗಿದ್ದ 75 ವರ್ಷದ ಅನ್ಸರ್ ಎಂಬುವರು ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು. ಈತನ ಮನೆಯವರು ತುರ್ತು ಕರೆ ಮಾಡಿ ಆ್ಯಂಬುಲೆನ್ಸ್ ಗಾಗಿ ಸ್ಥಳಕ್ಕೆ ಕರೆಯಿಸಿಕೊಂಡಿದ್ದಾರೆ.

ಆ್ಯಂಬುಲೆನ್ಸ್​ ಚಾಲಕನ ಮೇಲೆ ಹಲ್ಲೆ

ಗಂಭೀರ ಸ್ಥಿತಿಯಲ್ಲಿದ್ದ ರೋಗಿಯನ್ನು ಕೂಡಲೇ ಆ್ಯಂಬುಲೆನ್ಸ್ ಮೂಲಕ ಎಂ. ಎಸ್. ರಾಮಯ್ಯ ಆಸ್ಪತ್ರೆಗೆ ಕರೆತರಲಾಯಿತು. ಆಸ್ಪತ್ರೆ ತಲುಪಿ ಸುಮಾರು 20 ನಿಮಿಷ ಕಳೆದರೂ ರೋಗಿಯನ್ನು ದಾಖಲಿಸಿಕೊಳ್ಳಲು ಆಸ್ಪತ್ರೆಯವರು ವಿಳಂಬ ಮಾಡಿದ್ದಾರೆ ಎನ್ನಲಾಗ್ತಿದೆ. ಅಷ್ಟೊತ್ತಿಗಾಗಲೇ ವೃದ್ಧನ ಉಸಿರು ನಿಂತಿತ್ತು.

ಇದರಿಂದ ಅಕ್ರೋಶಗೊಂಡ ರೋಗಿಯ ಸಂಬಂಧಿಕರು ಆ್ಯಂಬುಲೆನ್ಸ್ ನಲ್ಲಿ ರೋಗಿಗೆ ಆ್ಯಕ್ಸಿಜನ್ ನೀಡಲಿಲ್ಲ ಎಂದು ದೂರಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆ ಸಂಬಂಧ ಚಾಲಕ ಯೋಗೇಶ್ ಸದಾಶಿವ ನಗರ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.

ಸಚಿವ ಸುಧಾಕರ್ ಅಸಮಾಧಾನ

ಈ ಕುರಿತು ಟ್ವಿಟ್​​ ಮಾಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್​, ಕರ್ತವ್ಯ ನಿರ್ವಹಿಸಿದ ಚಾಲಕನ ಮೇಲೆ ಹಲ್ಲೆ ನಿಜಕ್ಕೂ ಅಮಾನವೀಯ ವರ್ತನೆ. ಚಾಲಕ ಆಸ್ಪತ್ರೆಗೆ ದಾಖಲಿಸಲು ರೋಗಿಯನ್ನು ಕರೆ ತಂದರೆ ಈ ರೀತಿ ಹಲ್ಲೆ ಮಾಡಿರುವುದು ಸರಿಯಲ್ಲ ಎಂದಿದ್ದಾರೆ.

ಎಂ. ಎಸ್​. ರಾಮಯ್ಯ ಆಸ್ಪತ್ರೆಯಲ್ಲಿ ರೋಗಿಯನ್ನು ಕಾಯಿಸಿದ್ದಕ್ಕೆ 75 ವರ್ಷದ ವ್ಯಕ್ತಿ ಆ್ಯಂಬುಲೆನ್ಸ್​ನಲ್ಲಿಯೇ ಮೃತಪಟ್ಟಿದ್ದಾರೆ. ಇದು ನಿಜಕ್ಕೂ ನೋವಿನ ಸಂಗತಿ. ಸರ್ಕಾರ ಸಾವಿನ ಸಂಖ್ಯೆ ಇಳಿಸಲು ಶತ ಪ್ರಯತ್ನ ಮಾಡುತ್ತಿದೆ. ಆದ್ರೆ ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯ ಅವರನ್ನು ಬಲಿ ಪಡೆದಿದೆ ಎಂದು ಆರೋಪಿಸಿದ್ದಾರೆ.

ABOUT THE AUTHOR

...view details