ಬೆಂಗಳೂರು: ಹೊರ ರಾಜ್ಯದಿಂದ ಬಂದವರನ್ನು ಸರ್ಕಾರ ಹೋಟೆಲ್ ಕ್ವಾರಂಟೈನ್ ಮಾಡುತ್ತಿದ್ದು ಕೆಲ ಕ್ವಾರಂಟೈನಿಗಳು ನಮ್ಮನ್ನು ಬಿಡುಗಡೆಗೊಳಿಸಿ ಎಂದು ವಿಡಿಯೋ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಪ್ಲೀಸ್ ನಮ್ಮನ್ನು ಬಿಟ್ಬಿಡಿ... ಮಲೇಷ್ಯಾದಿಂದ ಬಂದು ಹೋಟೆಲ್ ಕ್ವಾರಂಟೈನ್ ಆಗಿರುವ ಕನ್ನಡಿಗರ ಮನವಿ - ಮಲೇಷ್ಯಾದಿಂದ ಬೆಂಗಳೂರಿಗೆ ಕ್ವಾರಂಟೈನ್
ಹೋಟೆಲ್ ದರ ದುಬಾರಿಯಾಗಿದ್ದು ಇದನ್ನು ಭರಿಸುವುದು ಕಷ್ಟವಾಗಿದೆ, ವಿಮಾನ ಟಿಕೆಟ್ ದರವನ್ನು ಕೂಡ ಹೆಚ್ಚು ಪಡೆಯಲಾಗಿದೆ. ನಾವು ಹೋಮ್ ಕ್ವಾರಂಟೈನ್ನಲ್ಲಿ ಇರುತ್ತೆವೆ. ನಮಗೆ ಮನೆಗೆ ಹೋಗಲು ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಮಾರತ್ ಹಳ್ಳಿಯ ಫ್ಯಾಬ್ ಎಕ್ಸ್ಪ್ರೆಸ್ ಬಾಲಿ ಹೋಟೆಲ್ನಲ್ಲಿರುವ ಕ್ವಾರಂಟೈನಿಗಳು ಮನವಿ ಮಾಡಿದ್ದಾರೆ.
ಮಲೇಷ್ಯಾದಿಂದ ಬೆಂಗಳೂರಿಗೆ ಬಂದಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ. ಆದರೆ ನಾವು ಮಲೇಷ್ಯಾದಲ್ಲಿಯೇ ಎರಡು ತಿಂಗಳು ಕ್ವಾರಂಟೈನ್ನಲ್ಲಿದ್ದೆವು. ಅಲ್ಲಿ ನೆಗೆಟಿವ್ ಬಂದ ನಂತರ ಬೆಂಗಳೂರಿಗೆ ಬಂದಿದ್ದು, ಇಲ್ಲಿ ಏಳು ದಿನ ಕ್ವಾರಂಟೈನ್ ಮುಗಿಸಿದ್ದೇವೆ. ಉಳಿದ ಏಳು ದಿನ ಹೋಮ್ ಕ್ವಾರಂಟೈನ್ನಲ್ಲಿ ಇರುತ್ತೇವೆ, ಕೋವಿಡ್ ಟೆಸ್ಟ್ ಕೂಡ ನೆಗೆಟಿವ್ ಬಂದಿದೆ, ನಮ್ಮನ್ನು ಬಿಡುಗಡೆಗೊಳಿಸಿ ಎಂದು ವಿಡಿಯೋ ಮೂಲಕ ಸರ್ಕಾರಕ್ಕೆ, ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.