ಬೆಂಗಳೂರು :ಕಳೆದ ಎರಡು ತಿಂಗಳ ಹಿಂದೆ ಪುನೀತ್ ರಾಜ್‌ಕುಮಾರ್ ಅವರನ್ನು ಭೇಟಿಯಾಗಿದ್ದೆವು. ಪುನೀತ್ ಸರ್ ಸಿಕ್ಕಾಗಲೆಲ್ಲಾ ಸೈಕ್ಲಿಂಗ್ ಹೋಗೋಣ ಅಂತಾ ಹೇಳುತ್ತಿದ್ದರು. ನಾನು ಸಹ ಶೂಟಿಂಗ್ ಮುಗಿಸಿಕೊಂಡು ಹೋಗೋಣ ಎಂದು ಹೇಳುತ್ತಿದ್ದೆ. ಮೊನ್ನೆ ಸಿಗಬೇಕಾಗಿತ್ತು. ಆದ್ರೀಗ ಈ ಸುದ್ದಿ ಕೇಳಬೇಕಾಯಿತು ಎಂದು ನಟ ಗಣೇಶ್ ಹೇಳಿದ್ದಾರೆ.
ಕಂಠೀರವ ಕ್ರೀಡಾಂಗಣದ ಬಳಿ ಮಾತನಾಡಿದ ಅವರು, ಪುನೀತ್ ಸರ್ ಅವರ ಸಾವಿನ ಸುದ್ದಿ ಬಹಳ ನೋವಾಗುತ್ತಿದೆ. ಅವರ ಕುಟುಂಬದವರು, ಅಭಿಮಾನಿಗಳಿಗೆ ಪುನೀತ್ ರಾಜ್‌ಕುಮಾರ್ ಅವರ ಸಾವಿನ ನೋವು ಭರಿಸುವ ಶಕ್ತಿ ದೇವರು ನೀಡಲಿ. ಪವರ್ ಸ್ಟಾರ್ ಇಲ್ಲದಿರುವ ಚಿತ್ರರಂಗ, ಕರ್ನಾಟಕ, ಇಡೀ ದೇಶ ಪವರ್ ಲೆಸ್ ಆಗಿದೆ. ಅಪ್ಪು ಸರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ.