ಕರ್ನಾಟಕ

karnataka

ETV Bharat / city

ಲಂಚ ಪಡೆಯುತ್ತಿದ್ದ ಬೆಸ್ಕಾಂ ಸಹಾಯಕ ಅಭಿಯಂತರ ಎಸಿಬಿ ಬಲೆಗೆ

ಬೆಂಗಳೂರಿನ ಬೆನ್ಸನ್ಟೌನ್​​ ಬೆಸ್ಕಾಂ ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳು ಎಇ ಹನುಮಂತಪ್ಪ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ACB trap Bescom AE who was taking bribe
ಎಸಿಬಿ ಬಲೆಗೆ ಬಿದ್ದ ಬೆಸ್ಕಾಂ ಸಹಾಯಕ ಅಭಿಯಂತರ

By

Published : Aug 1, 2022, 9:04 AM IST

ಬೆಂಗಳೂರು: ಅಪಾರ್ಟ್‌ಮೆಂಟ್‌ಗೆ ವಿದ್ಯುತ್ ಸಂಪರ್ಕ ಪಡೆಯಲು ವಿದ್ಯುತ್ ಗುತ್ತಿಗೆದಾರನಿಂದ 1.30 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಬೆಸ್ಕಾಂ ಸಹಾಯಕ ಅಭಿಯಂತರ(ಎಇ) ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಬೆನ್ಸನ್ ಟೌನ್ ಕಚೇರಿ ಎಇ ಹನುಮಂತಪ್ಪ ಬಂಧಿತರು.

ಆರ್.ಟಿ ನಗರದ ವಿದ್ಯುತ್ ಗುತ್ತಿಗೆದಾರರೊಬ್ಬರು ತಮ್ಮ ಪರಿಚಿತ ವ್ಯಕ್ತಿ ಬೆನ್ಸ್‌ನ್ ಟೌನ್‌ನ ಮಾರಪ್ಪ ಗಾರ್ಡನ್‌ನಲ್ಲಿ ನಿರ್ಮಿಸುತ್ತಿರುವ ಅಪಾರ್ಟ್‌ಮೆಂಟ್‌ಗೆ ವಿದ್ಯುತ್ ಸಂಪರ್ಕ ಪಡೆಯಲು ಕಳೆದ ಅಕ್ಟೋಬರ್‌ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಬಳಿಕ ಬೆನ್ಸ್‌ನ್ ಟೌನ್ ಬೆಸ್ಕಾಂ ಕಚೇರಿ ಎ.ಇ. ಹನುಮಂತಪ್ಪ ಅವರನ್ನು ಭೇಟಿ ಮಾಡಿ ಅರ್ಜಿ ಬಗ್ಗೆ ವಿಚಾರಿಸಿದ್ದಾರೆ.

ಈ ವೇಳೆ ಹನುಮಂತಪ್ಪ 3 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ನಂತರ 1.60 ಲಕ್ಷಕ್ಕೆ ಡೀಲ್ ಕುದುರಿಸಿದ್ದರು. ಈ ಸಂಬಂಧ ವಿದ್ಯುತ್ ಗುತ್ತಿಗೆದಾರ ನೀಡಿದ ದೂರಿನ ಮೇರೆಗೆ ಭಾನುವಾರ ಎಸಿಬಿ ಪೊಲೀಸರು, ದೂರುದಾರನಿಂದ 1.30 ಲಕ್ಷ ರೂ. ಲಂಚ ಸ್ವೀಕರಿಸುತಿದ್ದ ಹನುಮಂತಪ್ಪನನ್ನು ಬಂಧಿಸಿದ್ದಾರೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಜನರೇಟರ್​ನಿಂದ ವಿದ್ಯುತ್​ ಪ್ರವಹಿಸಿ ವಾಹನದಲ್ಲೇ 10 ಭಕ್ತರ ಸಾವು

ABOUT THE AUTHOR

...view details