ಬೆಂಗಳೂರು:ಬಜೆಟ್‍ನ ಅಧಿವೇಶನದಲ್ಲಿ ಮಂಗಳವಾರ ಮತ್ತು ಬುಧವಾರ ಚುನಾವಣಾ ಸುಧಾರಣೆ ಕುರಿತ ವಿಷಯವನ್ನು ವಿಧಾನಸಭೆಯಲ್ಲಿ ಚರ್ಚೆಗೆ ತೆಗೆದುಕೊಳ್ಳಲಾಗುವುದು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. ಬಜೆಟ್‍ನ ಇಲಾಖಾವಾರು ಬೇಡಿಕೆ ಚರ್ಚೆಯಲ್ಲಿ ಈಗಾಗಲೇ ಅನೇಕ ಸದಸ್ಯರು ಮಾತನಾಡಿದ್ದಾರೆ. ಸೋಮವಾರ ಕೆಲವು ಸಚಿವರು ತಮ್ಮ ಇಲಾಖೆಯ ಮೇಲೆ ಉತ್ತರ ನೀಡಲಿದ್ದಾರೆ. ನಂತರ ಮುಖ್ಯಮಂತ್ರಿಗಳು ಉತ್ತರ ನೀಡುವರು ಎಂದರು.
ಸೋಮವಾರ ಬಜೆಟ್‍ಗೆ ಅಂಗೀಕಾರ ಪಡೆಯಬೇಕಾಗಿದೆ. ಇಲಾಖಾವಾರು ಚರ್ಚೆಯ ಮೇಲೆ ಇನ್ನೂ ಅನೇಕ ಸದಸ್ಯರು ಮಾತನಾಡಬೇಕು ಎಂದು ಹೇಳಿದ್ದಾರೆ. ಆದರೆ, ಹೆಚ್ಚಿನ ಸಮಯಾವಕಾಶ ಇರುವುದಿಲ್ಲ. ಇರುವ ಸಮಯದಲ್ಲೇ ಮಾತನಾಡಬೇಕು. ಇದು ಕೂಡ ಬಿಕ್ಕಟ್ಟಿನ ಪರಿಸ್ಥಿತಿ ಇದೆ. ಹಾಗಾಗಿ ಸದಸ್ಯರು ಸಹಕರಿಸಬೇಕೆಂದು ಸ್ಪೀಕರ್ ಕಾಗೇರಿ ಮನವಿ ಮಾಡಿದರು.
ಈಗಾಗಲೇ ನಿಗದಿಯಾಗಿರುವಂತೆ ಮಂಗಳವಾರ ಮತ್ತು ಬುಧವಾರ ಚುನಾವಣಾ ಸುಧಾರಣೆ ಕುರಿತು ಚರ್ಚೆ ನಡೆಯಲಿದೆ. ಸದಸ್ಯರು ಇರುವ ಸಮಯದಲ್ಲಿಯೇ ಅಗತ್ಯಕ್ಕೆ ತಕ್ಕಂತೆ ಮಾತನಾಡಬೇಕು. ಹೆಚ್ಚು ಸಮಯ ತೆಗೆದುಕೊಳ್ಳಬಾರದು ಎಂದು ಸಲಹೆ ನೀಡಿದರು. ಈ ವೇಳೆ ಕಾಂಗ್ರೆಸ್‍ನ ಎಚ್.ಕೆ.ಪಾಟೀಲ್ ಅವರು, ಬಹಳಷ್ಟು ಸದಸ್ಯರು ಮಾತನಾಡುವವರಿದ್ದಾರೆ. ಸಭಾಧ್ಯಕ್ಷರು ಒಬ್ಬೊಬ್ಬ ಸದಸ್ಯರಿಗೆ ಇಂತಿಷ್ಟು ಸಮಯ ನಿಗದಿಪಡಿಸಿ ಎಂದು ಸಲಹೆ ನೀಡಿದರು. ಅದಕ್ಕೆ ಸ್ಪೀಕರ್ ಸಹಮತ ವ್ಯಕ್ತಪಡಿಸಿದರು.