ಬಳ್ಳಾರಿ:ಗಣಿನಾಡಲ್ಲಿ ಬಿಸಿಲಿನ ಝಳ ಗಣನೀಯವಾಗಿ ಏರುತ್ತಿದೆ. ಬಿಸಿಲಿನಿಂದಾಗಿ ಮಕ್ಕಳಲ್ಲಿ ನಿರ್ಜಲೀಕರಣ ಸಮಸ್ಯೆ ಉಂಟಾಗುತ್ತಿದೆ.
ಏರುತ್ತಿರುವ ಬಿಸಿಲಿನ ಝಳ: ತಿಂಗಳೊಳಗೆ 77 ಶಿಶುಗಳಲ್ಲಿ ಕಾಣಿಸಿಕೊಂಡ ನಿರ್ಜಲೀಕರಣದ ಸಮಸ್ಯೆ ಪ್ರತಿ ಬೇಸಿಗೆಯಲ್ಲೂ ಕೂಡ ಈ ನಿರ್ಜಲೀಕರಣದ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಆರೈಕೆ ಕೇಂದ್ರವಾಗಿ ಹಾಗೂ ಜೀವ ಸಂಜೀವಿನಿಯಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆ ಕಾರ್ಯನಿರ್ವಹಿಸುತ್ತದೆ. ಈ ಬಾರಿಯೂ ಕೂಡ ತನ್ನ ಸೇವೆಯಿಂದ ಹೊರತಾಗಿಲ್ಲ. ವಿಮ್ಸ್ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ದುರುಗಪ್ಪ ನೇತೃತ್ವದ ತಂಡವು ನವಜಾತ ಶಿಶುಗಳಲ್ಲಿ ಎದುರಾಗುವ ನಿರ್ಜಲೀಕರಣದ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಲು ಸನ್ನದ್ಧವಾಗಿದೆ. ನಿತ್ಯ 3-4 ಮಕ್ಕಳಿ ನಿರ್ಜಲೀಕರಣದ ಸಮಸ್ಯೆಯಿಂದ ಬಳಲಿ ಆಸ್ಪತ್ರೆಗೆ ದಾಖಲಾಗುತ್ತಿವೆ.
ಕಳೆದೊಂದು ತಿಂಗಳೊಳಗೆ ಅಂದಾಜು 77 ಚಿಕ್ಕ ಮಕ್ಕಳು ನಿರ್ಜಲೀಕರಣದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿವೆ. ಆ ಮಕ್ಕಳಲ್ಲಿ ವಾಂತಿ, ಬೇಧಿ ಹಾಗೂ ವಿಪರೀತ ಜ್ವರ ಕಾಣಿಸಿಕೊಳ್ಳೋದು ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರೋದು ಕಂಡುಬಂದಿದೆ.
ಶಿಶುಗಳಿಗೆ ಆಗಾಗ್ಗೆ ತಣ್ಣನೆಯ ನೀರು ಕುಡಿಸದೆ ಇರುವುದು, ಎಳನೀರು ಸೇವನೆ ಮಾಡಿಸದಿರುವುದು ಹಾಗೂ ಫ್ಯಾನ್ ಕೆಳಗಡೆ ಮಲಗಿಸೋದೇ ಇರೋದರಿಂದ ಇಂತಹ ಆರೋಗ್ಯ ಸಮಸ್ಯೆ ಎದುರಾಗಲಿದೆ. ಹೀಗಾಗಿ, ಪೋಷಕರು ಈ ಮೇಲಿನ ಎಲ್ಲ ಅಂಶಗಳನ್ನ ಕಡ್ಡಾಯವಾಗಿ ಪಾಲಿಸಲೇಬೇಕು. ಈ ಮೂರು ತಿಂಗಳು ಬಹಳ ಮುತುವರ್ಜಿಯಿಂದ ತಮ್ಮ ಶಿಶುಗಳನ್ನ ಕಾಪಾಡಿಕೊಳ್ಳಬೇಕೆಂದು ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ದುರುಗಪ್ಪ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಸಿದ ಬಳ್ಳಾರಿ ವಿಮ್ಸ್ ನಿರ್ದೇಶಕ ಡಾ.ಟಿ.ಗಂಗಾಧರಗೌಡ, ಬಿರು ಬೇಸಿಗೆ ಹಿನ್ನೆಲೆಯಲ್ಲಿ ಶಿಶುಗಳಲ್ಲಿ ಈ ನಿರ್ಜಲೀಕರಣದ ಸಮಸ್ಯೆ ಎದುರಾಗೋದು ಸ್ವಾಭಾವಿಕ. ಆದರೆ, ಅದನ್ನ ನಿಯಂತ್ರಿಸಲು ಆ ಶಿಶುಗಳ ಪೋಷಕರ ಬಳಿಯೇ ರಾಮಬಾಣ ಇದೆ. ಶಿಶುಗಳ ಆರೈಕೆಯಲ್ಲೂ ಕೂಡ ಬಹಳ ಮುತುವರ್ಜಿವಹಿಸಿದರೆ ಸಾಕು. ಈ ನಿರ್ಜಲೀಕರಣ ಸಮಸ್ಯೆಯಿಂದ ವಿಮುಖರಾಗಬಹು ಎಂದರು.
ಓದಿ:ಬೇವು ಬೆಲ್ಲ ಖರೀದಿ ಮಧ್ಯೆ ಸಿಲಿಕಾನ್ ಸಿಟಿ ಮಾರ್ಕೆಟ್ಗಳಲ್ಲಿ ಸೋಂಕಿನ ಅಬ್ಬರ!