ಕರ್ನಾಟಕ

karnataka

ETV Bharat / city

ಇಳಕಲ್ ಸೀರೆ ಉಟ್ಕೊಂಡು, ಮೂಗುತ್ತಿ ತೊಟ್ಟು ಮಹಿಳಾ ದಿನಾಚರಣೆ ಆಚರಿಸಿದ ವಿದ್ಯಾರ್ಥಿನಿಯರು

ಅಥಣಿ ಸ್ಥಳೀಯ ಶ್ರೀ ಕೆ ಎ ಲೋಕಾಪೂರ ಪದವಿ ಮಹಾವಿದ್ಯಾಲಯ ವಿದ್ಯಾರ್ಥಿಗಳು ವಿಶೇಷ ಉಡುಗೆ-ತೊಡುಗೆ ತೊಟ್ಟು ವಿಭಿನ್ನ ರೀತಿಯಲ್ಲಿ ಮಹಿಳಾ ದಿನಾಚರಣೆ ಆಚರಿಸಿದ್ದಾರೆ.

By

Published : Mar 12, 2020, 4:42 AM IST

womens-day-celebration-in-athani
ಶ್ರೀ ಕೆ. ಎ. ಲೋಕಾಪೂರ ಪದವಿ ಮಹಾವಿದ್ಯಾಲಯ

ಅಥಣಿ:ನಾಡಿನ ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸುವ ನಿಟ್ಟಿನಲ್ಲಿ ಮಹಿಳಾ ದಿನಾಚರಣೆಯ ಪ್ರಯುಕ್ತ ನಗರದ ಶ್ರೀ ಕೆ. ಎ. ಲೋಕಾಪೂರ ಪದವಿ ಮಹಾವಿದ್ಯಾಲಯ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದರು.

ಸದಾ ಪಾಶ್ಚಿಮಾತ್ಯ ಉಡುಗೆ ತೊಟ್ಟು ಕಾಲೇಜಿಗೆ ಬರುತ್ತಿದ್ದ ನಾರಿಯರು ಇಳಕಲ್ ಸೀರೆ ತೊಟ್ಟು ಮಲ್ಲಿಗೆ ಮುಡಿದು, ಕುಂಕುಮ ಬೊಟ್ಟಿಟ್ಟು ಪಕ್ಕಾ ಉತ್ತರ ಕರ್ನಾಟಕ ಶೈಲಿಯಲ್ಲಿ ಸಿಂಗರಿಸಿಕೊಂಡು ಮಹಿಳಾ ದಿನಾಚರಣೆ ಆಚರಿಸಿ ಸಂಭ್ರಮಿಸಿದರು. ವಿದೇಶಿ ಸಂಸ್ಕೃತಿಯ ಪ್ರಭಾವಕ್ಕೆ ಕಾಣೆಯಾಗಿದ್ದ ನಾಡಿನ ಸಂಸ್ಕೃತಿಯ ಉಡುಪು ಧರಿಸಿದ್ದ ವಿದ್ಯಾರ್ಥಿನಿಯರು ಎಲ್ಲರ ಗಮನ ಸೆಳೆದರು.

ABOUT THE AUTHOR

...view details