ಕರ್ನಾಟಕ

karnataka

ETV Bharat / city

ಶಿವಸೇನೆ, ಎಂಇಎಸ್ ಪುಂಡಾಟಿಕೆಗೆ ಮಹಾರಾಷ್ಟ್ರ ಸರ್ಕಾರ ಕುಮ್ಮಕ್ಕು : ಶಾಸಕ ಅನ್ನದಾನಿ - ಬೆಳಗಾವಿಯಲ್ಲಿ ಅಧಿವೇಶನ

ಡಿ.31 ರಂದು ಕರ್ನಾಟಕ ಬಂದ್ ಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಈ ರೀತಿ ಕುಮ್ಮಕ್ಕು ಕೊಡ್ತಿದೆ. ಸೂಕ್ತ ಕ್ರಮ‌ಕೈಗೊಂಡಿದ್ರೆ ಈ ರೀತಿ ನೀಚ ಕೃತ್ಯ ನಡೆಯುತ್ತಿರಲಿಲ್ಲ ಎಂದು ಜೆಡಿಎಸ್‍ ಶಾಸಕ ಡಾ.ಕೆ. ಅನ್ನದಾನಿ ಹೇಳಿದ್ದಾರೆ..

mla-annadani
ಶಾಸಕ ಅನ್ನದಾನಿ

By

Published : Dec 24, 2021, 1:25 PM IST

ಬೆಂಗಳೂರು : ಶಿವಸೇನೆ, ಎಂಇಎಸ್ ಪುಂಡಾಟ ಮತ್ತೆ ನಡೆದಿದೆ. ಗೋಕಾಕ್ ಚೆಕ್ ಪೋಸ್ಟ್​ನಲ್ಲಿ ನಮ್ಮ ಸಿಎಂ ಬಸವರಾಜ ಬೊಮ್ಮಾಯಿ ಅವರ ಪ್ರತಿಕೃತಿ ದಹನ ಮಾಡಿದ್ದಾರೆ‌. ಮಹಾರಾಷ್ಟ್ರ ಸರ್ಕಾರವೇ ಕುಮ್ಮಕ್ಕು ಕೊಡುತ್ತಿದೆ ಎಂಬ ಅನುಮಾನ ಮೂಡುತ್ತಿದೆ ಎಂದು ಜೆಡಿಎಸ್‍ ಶಾಸಕ ಡಾ.ಕೆ. ಅನ್ನದಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿವಸೇನೆ, ಎಂಇಎಸ್ ಪುಂಡಾಟಿಕೆ ಕುರಿತು ಶಾಸಕ ಅನ್ನದಾನಿ ಮಾತನಾಡಿರುವುದು..

ವಿಧಾನಸಭೆಯಲ್ಲಿ ಇಂದು ಶೂನ್ಯವೇಳೆಯಲ್ಲಿ ವಿಷಯ ಪ್ರಸ್ರಾಪ ಮಾಡಿದ ಅವರು, ಡಿ.31ರಂದು ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಈ ರೀತಿ ಕುಮ್ಮಕ್ಕು ಕೊಡ್ತಿದೆ. ಸೂಕ್ತ ಕ್ರಮ‌ಕೈಗೊಂಡಿದ್ರೆ ಈ ರೀತಿ ನೀಚ ಕೃತ್ಯ ನಡೆಯುತ್ತಿರಲಿಲ್ಲ ಎಂದು ಹೇಳಿದರು.

ಈ ಮನೆಯ ಸದಸ್ಯರೊಬ್ಬರು ಮರಾಠಿ ಧ್ವಜ ಹಿಡಿಯುತ್ತೇನೆ ಅಂತಾ ಹೇಳಿರೋದು ಮಾಧ್ಯಮಗಳಲ್ಲಿ ಬಂದಿದೆ. ಕನ್ನಡ ಕಾಯಿರಿ ಎಂದು ವೋಟ್ ಹಾಕಿದರೆ ಹೀಗೆ ಮಾಡುವುದು ಸರಿಯೇ? ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಕನ್ನಡಿಗರನ್ನು ರಕ್ಷಿಸುವ ಕೆಲಸ ಸರ್ಕಾರ ಮಾಡಬೇಕು.ನಮ್ಮ‌ ಅಸ್ಮಿತೆಯಾದ ಧ್ವಜವನ್ನು ಸುಟ್ಟಿದ್ದಾರೆ. ಸರಿಯಾದ ಕಠಿಣ ಕ್ರಮ ಸರ್ಕಾರ ತೆಗೆದುಕೊಳ್ಳುತ್ತಿಲ್ಲ. ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಶಾಸಕ ಅನ್ನದಾನಿ ಆಗ್ರಹಿಸಿದರು.

ಕಟ್ಟುನಿಟ್ಟಿನ ಕ್ರಮ :ಸರ್ಕಾರದ ಪರವಾಗಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಉತ್ತರ ನೀಡಿ, ಬೆಳಗಾವಿಯಲ್ಲಿ ಅಧಿವೇಶನ ಆರಂಭವಾದಾಗಿನಿಂದ ದೊಂಬಿ ಹುಟ್ಟಿಸುವ ಕೆಲಸ ನಡೆದಿದೆ. ನಮ್ಮ‌ ಭಾಷೆ, ಜಲದ ಬಗ್ಗೆ ಸರ್ಕಾರ ಬದ್ಧವಾಗಿದೆ.

ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಅಲ್ಲದೆ ಕನ್ನಡ, ನೆಲ ಜಲದ ವಿಚಾರದಲ್ಲಿ ಸರ್ಕಾರ ರಾಜಿ ಆಗಲ್ಲ, ಸೂಕ್ತ ಕ್ರಮಕೈಗೊಳ್ಳಲಿದೆ. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ಈಗಾಗಲೇ ಸರ್ಕಾರ ಕೆಲವರನ್ನು ಬಂಧಿಸಿ, ಕ್ರಮಕೈಗೊಂಡಿದೆ ಎಂದು ಸದನಕ್ಕೆ ತಿಳಿಸಿದರು.

ABOUT THE AUTHOR

...view details