ಕರ್ನಾಟಕ

karnataka

ಅನರ್ಹರ ತೀರ್ಪಿನ ಬಗ್ಗೆ ಯಾವುದೇ ಆತಂಕವಿಲ್ಲ: ಸಚಿವ ಮಾಧುಸ್ವಾಮಿ

By

Published : Nov 13, 2019, 12:12 PM IST

ಅನರ್ಹ ಶಾಸಕರ ಕುರಿತು ಸುಪ್ರೀಂಕೋರ್ಟ್ ಪ್ರಕಟಿಸಲಿರುವ ತೀರ್ಪಿನ ಬಗ್ಗೆ ನಮಗೆ ಯಾವುದೇ ರೀತಿಯ ಆತಂಕ ಇಲ್ಲ ಎಂದು ಕಾನೂನು ಸಚಿವ ಮಾಧುಸ್ವಾಮಿ ತೀರ್ಪು ಪ್ರಕಟಣೆಗೂ ಮುನ್ನ ಅಭಿಪ್ರಾಯಪಟ್ಟರು.

ಸುಪ್ರೀಂ ತೀರ್ಪಿನ ಬಗ್ಗೆ ಯಾವುದೇ ಆತಂಕವಿಲ್ಲ: ಸಚಿವ ಮಾಧುಸ್ವಾಮಿ ಹೇಳಿಕೆ

ಬೆಳಗಾವಿ: ಅನರ್ಹ ಶಾಸಕರ ಕುರಿತು ಸುಪ್ರೀಂಕೋರ್ಟ್ ಪ್ರಕಟಿಸಿರುವ ತೀರ್ಪಿನ ಬಗ್ಗೆ ನಮಗೆ ಯಾವುದೇ ಆತಂಕವಿಲ್ಲ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

ಸುಪ್ರೀಂ ತೀರ್ಪಿನ ಬಗ್ಗೆ ಯಾವುದೇ ಆತಂಕವಿಲ್ಲ: ಸಚಿವ ಮಾಧುಸ್ವಾಮಿ ಹೇಳಿಕೆ

ಅನರ್ಹ ಶಾಸಕರನ್ನು ಚುನಾವಣೆಗೆ ನಿಲ್ಲಬೇಡಿ‌ ಅಂತ ಹೇಳಲು ಸಾಧ್ಯವಿಲ್ಲ. ಜನಪ್ರತಿನಿಧಿ ಎರಡು ವರ್ಷ ಶಿಕ್ಷೆ ಅನುಭವಿಸಿ ಅನರ್ಹರಾದ್ರೆ ಅಂತವರು ಚುನಾವಣೆಗೆ ಸ್ಪರ್ಧಿಸಲು ಬರುವುದಿಲ್ಲ. ಈ ಕಾರಣಕ್ಕೆ ಅನರ್ಹರ ಕೇಸ್‌ನಲ್ಲಿ ಅಂತಹ ಸಂದಿಗ್ಧ ಪರಿಸ್ಥಿತಿ ಉದ್ಭವಿಸುವುದಿಲ್ಲ ಎಂದು ಹೇಳಿದರು. ಸುಪ್ರೀಂಕೋರ್ಟ್ ನಡೆ ನೋಡಿದ್ರೆ ಚುನಾವಣೆ ನಡೆಯುವುದು ಖಚಿತ ಅಂತ ಗೊತ್ತಾಗುತ್ತಿದೆ. ಮೈತ್ರಿ ಸರ್ಕಾರ ಮುಂದುವರೆದರೆ ಕೆಲಸ ಕಾರ್ಯ ಮಾಡಲು ಆಗುವುದಿಲ್ಲ ಅಂತ ಶಾಸಕರು ಹೊರ ಬಂದಿದ್ದಾರೆ. ಅವರು ಆಚೆ ಬಂದಿದ್ದರಿಂದ ಹೊಸ ಸರ್ಕಾರ ರಚನೆ ಆಗಿದೆ. ಅನರ್ಹ ಶಾಸಕರಿಗೆ ಒಳ್ಳೆಯದಾಗಲಿ, ಗೆದ್ದು ಬರಲಿ ಅಂತಾ ಆಶಿಸುತ್ತೇವೆ ಎಂದರು.

ABOUT THE AUTHOR

...view details