ಕರ್ನಾಟಕ

karnataka

ETV Bharat / city

ಅಂತರ ಕಾಯ್ದುಕೊಳ್ಳುವಿಕೆ ಅಂದರೆ ಹೀಗಿರಬೇಕು? ನೀವೇ ನೋಡಿ...

ಜನರು ಭೀತಿಗೊಳ್ಳದಿರಲೆಂದು ದಿನದ 24 ಗಂಟೆಗಳ ಕಾಲ ದಿನಸಿ ಅಂಗಡಿಗಳು ‌ತೆರದಿರಲಿವೆ. ತರಕಾರಿ ಮಾರಾಟಗಾರರು ಮನೆಮನೆಗೆ ಹೋಗಿ ಮಾರಾಟ ಮಾಡಲು ಅವಕಾಶವಿದೆ. ಹೀಗಿದ್ದರೂ ಜನರ ಮಾತ್ರ ದಿವ್ಯ ನಿರ್ಲಕ್ಷ್ಯವಹಿಸುತ್ತಿದ್ದಾರೆ.

By

Published : Mar 26, 2020, 12:36 PM IST

Lockdown order violation in belagavi
ಲಾಕ್​ಡೌನ್​ ಆದೇಶ ಉಲ್ಲಂಘಿಸಿದ ಜನ

ಬೆಳಗಾವಿ: ಕೊರೊನಾ ಭೀಕರತೆ ಅರ್ಥ ಮಾಡಿಕೊಳ್ಳದ ಬೆಳಗಾವಿ ಜನರಿಗೆ ಇನ್ನೇನು ಹೇಳೋದು. ಜನರ ಸಂಪರ್ಕದಿಂದಲೇ ಸೋಂಕು ಹರಡಲಿದೆ ಎಂದು‌ ಬಾಯಿ ಬಾಯಿ‌ ಬಡಿದುಕೊಂಡು ತಜ್ಞ ವೈದ್ಯರೇ ಹೇಳುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ವೈರಾಣು ಹರಡುವಿಕೆ ತಡಗಟ್ಟಲು ಒಬ್ಬರಿಂದೊಬ್ಬರು ಅಂತರ ಕಾಯ್ದುಕೊಳ್ಳಬೇಕು. ಆದರೆ, ಜನತೆ ಸರ್ಕಾರದ ಆದೇಶವನ್ನೇ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

ಲಾಕ್​ಡೌನ್​ ಆದೇಶ ಉಲ್ಲಂಘಿಸಿದ ಜನ

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಠಿಣ ಕ್ರಮ ತೆಗೆದುಕೊಳ್ಳುವಲ್ಲಿ‌ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಸಂಪೂರ್ಣ ವಿಫಲಾವಾಗಿದೆ. ಇನ್ನಾದರೂ ನಾಡಿನ ಸಮಾಜದ ರಕ್ಷಣೆಗಾಗಿ ಕಠಿಣ ಕ್ರಮಕೈಗೊಳ್ಳಬೇಕಿದೆ.

ABOUT THE AUTHOR

...view details