ಕರ್ನಾಟಕ

karnataka

ಅಮೆರಿಕ ವಿವಿಯಿಂದ ಡಾ. ಪ್ರಭಾಕರ ಕೋರೆಗೆ ಗೌರವ ಡಾಕ್ಟರೇಟ್: ಕುಲಪತಿ ಪ್ರೊ. ವಿವೇಕ ಸಾವೋಜಿ

ಅಮೆರಿಕದ ಥಾಮಸ್ ಜೆಫರ್ಸನ್ ವಿಶ್ವವಿದ್ಯಾಲಯವು ಪ್ರಸಕ್ತ ವರ್ಷ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಿದೆ ಎಂದು ವಿವಿಯ ಕುಲಪತಿ ಪ್ರೊ. ವಿವೇಕ ಸಾವೋಜಿ ತಿಳಿಸಿದರು‌.

By

Published : Jan 21, 2020, 1:46 PM IST

Published : Jan 21, 2020, 1:46 PM IST

KN_BGM_02_21_American_University_Honour_to_Kore_7201786
ಅಮೆರಿಕ ವಿವಿಯಿಂದ ಡಾ. ಪ್ರಭಾಕರ ಕೋರೆಗೆ ಗೌರವ ಡಾಕ್ಟರೇಟ್: ಕುಲಪತಿ ಪ್ರೊ. ವಿವೇಕ ಸಾವೋಜಿ

ಬೆಳಗಾವಿ:ಅಮೆರಿಕದ ಥಾಮಸ್ ಜೆಫರ್ಸನ್ ವಿಶ್ವವಿದ್ಯಾಲಯವು ಪ್ರಸಕ್ತ ವರ್ಷ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಿದೆ ಎಂದು ವಿವಿಯ ಕುಲಪತಿ ಪ್ರೊ. ವಿವೇಕ ಸಾವೋಜಿ ತಿಳಿಸಿದರು‌.

ಅಮೆರಿಕ ವಿವಿಯಿಂದ ಡಾ. ಪ್ರಭಾಕರ ಕೋರೆಗೆ ಗೌರವ ಡಾಕ್ಟರೇಟ್: ಕುಲಪತಿ ಪ್ರೊ. ವಿವೇಕ ಸಾವೋಜಿ

ಬೆಳಗಾವಿಯ ಕೆಎಲ್ಇ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಅಮೆರಿಕದ ಫಿಲಡೆಲ್ಫಿಯಾದಲ್ಲಿರುವ ಥಾಮಸ್ ಜೆಫರ್ಸನ್ ‌ವಿವಿಯ ಘಟಿಕೋತ್ಸವ ಮೇ 30 ರಂದು ನಡೆಯಲಿದೆ‌. ಆ ಕಾರ್ಯಕ್ರಮದಲ್ಲಿ ಡಾ. ಪ್ರಭಾಕರ ಕೋರೆ ಅವರಿಗೆ ಗೌರವ ಡಾಕ್ಟರೇಟ್ ‌ಪದವಿ ಪ್ರದಾನ ಆಗಲಿದೆ. ಅಮೆರಿಕದ ಪ್ರತಿಷ್ಠಿತ ವಿವಿಯು ಕೋರೆ ಅವರಿಗೆ ಗೌರವ ಡಾಕ್ಟರೇಟ್ ನೀಡುತ್ತಿರುವುದು ಕೆಎಲ್ಇ ಸಂಸ್ಥೆಗೆ ಹೆಮ್ಮೆಯ ವಿಷಯ ಎಂದು ಸಂತಸ ವ್ಯಕ್ತಪಡಿಸಿದರು. ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆ್ಯಂಡ್ ರಿಸರ್ಚ್ ನ ಕುಲಾಧಿಪತಿ ಆಗಿರುವ ಡಾ. ಪ್ರಭಾಕರ ಕೋರೆ ಅವರು, ವೈದ್ಯಕೀಯ ಶಿಕ್ಷಣ, ಆರೋಗ್ಯ ಸೇವೆ ಹಾಗೂ ಸಂಶೋಧನೆಗಳಲ್ಲಿ ಅಂತಾರಾಷ್ಟ್ರೀಯ ಸಹಯೋಗ ಸಾಧಿಸಿದ್ದಾರೆ.

ಕೋರೆ ಅವರ ಈ ಕಾರ್ಯ ಪರಿಗಣಿಸಿ ಜಫರ್ಸನ್ ವಿವಿ ಗೌರವ ಡಾಕ್ಟರೇಟ್ ಪದವಿ ಘೋಷಿಸಿದೆ. ಕೆಎಲ್ಇ ವಿವಿ ಹಾಗೂ ಅಮೇರಿಕದ ಜೆಫರ್ಸನ್ ವಿವಿ ನಡುವೆ ಶಿಕ್ಷಣ ಹಾಗೂ ಸಂಶೋಧನೆಗೆ ಉಭಯ ವಿವಿಗಳು ಒಡಂಬಡಿಕೆ ಮಾಡಿಕೊಂಡಿವೆ. ತಾಯಿ- ನವಜಾತ ಶಿಶು ಆರೋಗ್ಯ ಕ್ಷೇತ್ರದಲ್ಲಿ ಎರಡೂ ವಿವಿಗಳು ವಿಶ್ವದರ್ಜೆಯ ಸಂಶೋಧನೆ ನಡೆಸುತ್ತಿವೆ ಎಂದರು.

ABOUT THE AUTHOR

...view details