ಕರ್ನಾಟಕ

karnataka

ನೆರೆ ಪರಿಹಾರ ನೀಡುವಂತೆ ಒತ್ತಾಯಿಸಿ ದಿವ್ಯಾಂಗ ಸಂತ್ರಸ್ತನ ಏಕಾಂಗಿ ಹೋರಾಟ

By

Published : Feb 11, 2020, 7:44 PM IST

ದರೂರ ಗ್ರಾಮದ 258 ಮನೆಗಳಿಗೆ ನೆರೆ ಪರಿಹಾರ ನೀಡುವಂತೆ ಒತ್ತಾಯಿಸಿ ದಿವ್ಯಾಂಗ ಸಂತ್ರಸ್ತರೊಬ್ಬರು ಉಪವಾಸ ಸತ್ಯಾಗ್ರಹ ನಡೆಸಿದ್ದು, ಸರ್ಕಾರ ತಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಆಮರಣಾಂತಿಕ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದ್ದಾರೆ.

disabled-victims-solo-fight-flood-relief-fund
ದಿವ್ಯಾಂಗ ಸಂತ್ರಸ್ತನ ಏಕಾಂಗಿ ಹೋರಾಟ

ಅಥಣಿ : ಪ್ರವಾಹಕ್ಕೆ ತುತ್ತಾದ ತಾಲೂಕಿನ ದರೂರ ಗ್ರಾಮದ 258 ಮನೆಗಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ದಿವ್ಯಾಂಗ ಸಂತ್ರಸ್ತರೊಬ್ಬರು ಆಮರಣಾಂತಿಕ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.

ಅಥಣಿ ತಹಶಿಲ್ದಾರರ ಕಚೇರಿ ಎದಿರು ಏಕಾಂಗಿಯಾಗಿ ಸತ್ಯಾಗ್ರಹ ನಡೆಸುತ್ತಿರುವ ದರೂರು ಗ್ರಾಮದ ರವಿಂದ್ರ ಅವ್ವಣ್ಣಾ ಕಲ್ಲೋಳ್ಳಿ, ಕಳೆದ ವರ್ಷ ಕೃಷ್ಣಾ ನದಿ ಪ್ರವಾಹಕ್ಕೆ ಗ್ರಾಮದ 258 ಮನೆಗಳು ನೆಲಸಮಗಾಗಿದೆ. ಸ್ವತಃ ಸಿಎಂ ಆಗಮಿಸಿ ಪರಿಹಾರ ನೀಡುವ ಭರವಸೆ ಕೊಟ್ಟಿದ್ದರು. ಆದ್ರೆ, ಆರು ತಿಂಗಳು ಕಳೆದರೂ ಸಹ ಇನ್ನೂ ಅದು ಭರವಸೆಯಾಗಿಯೇ ಉಳಿದಿದೆ ಎಂದು ಬೆಸತ್ತು ಧರಣಿ ನಡೆಸಿದ್ದಾರೆ.

ನೆರೆ ಪರಿಹಾರ ನೀಡುವಂತೆ ದಿವ್ಯಾಂಗ ಸಂತ್ರಸ್ತನ ಏಕಾಂಗಿ ಹೋರಾಟ

2005 - 06 ರಲ್ಲಿ ದರೂರು ಗ್ರಾಮ ಕೃಷ್ಣಾ ನದಿ ಪ್ರವಾಹಕ್ಕೆ ತುತ್ತಾದಾಗ ಮುಳುಗಡೆ ಗ್ರಾಮ ಎಂದು ಸರ್ಕಾರ ಘೋಷಣೆ ಮಾಡಿ ಪರಿಹಾರ ಕೊಟ್ಟಿತ್ತು. ನೆರೆ ಸಂತ್ರಸ್ಥ ದರೂರು ಗ್ರಾಮಕ್ಕೆ ಆರ್‌.ಸಿ.ಸೆಂಟರ್‌ನ್ನು ಮಾತ್ರ ತೆರೆದಿರಲಿಲ್ಲ. ಇದರ ಪರಿಣಾಮ ಗ್ರಾಮದ ಜನ ಪರಿಹಾರ ಪಡೆದು ಮತ್ತೆ ಅಲ್ಲಿಯೇ ಜೀವನ ನಡೆಸಿದ್ದಾರೆ.

ಆದರೆ 14 ವರ್ಷಗಳ ಬಳಿಕ ಮತ್ತೆ ಪ್ರವಾಹ ಬಂದು ಗ್ರಾಮದ ಮನೆಗಳನ್ನ ನೆಲ ಸಮ ಮಾಡಿದೆ. ಸದ್ಯ ದರೂರು ಗ್ರಾಮಕ್ಕೆ ನೆರೆ ಪರಿಹಾರ ಕೊಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಆಮರಣ ಉಪವಾಸ ನಡೆಸುವುದಾಗಿ ವಿಕಲಚೇತನ ರವೀಂದ್ರ ಅವ್ವಣ್ಣಾ ಕಲ್ಲೋಳ್ಳಿ ಎಚ್ಚರಿಸಿದ್ದಾರೆ.

ABOUT THE AUTHOR

...view details