ಕರ್ನಾಟಕ

karnataka

ETV Bharat / business

Stock markets: ಸೆನ್ಸೆಕ್ಸ್​ 199 & ನಿಫ್ಟಿ 65 ಅಂಕ ಇಳಿಕೆ - ಷೇರು

ಮಂಗಳವಾರದ ವಹಿವಾಟಿನಲ್ಲಿ ಭಾರತದ ಷೇರು ಮಾರುಕಟ್ಟೆಯಲ್ಲಿ ಇಳಿಕೆಯೊಂದಿಗೆ ಕೊನೆಗೊಂಡಿದೆ.

Stock markets end 5-day winning run on profit-taking in IT stocks, weak global cues
Stock markets end 5-day winning run on profit-taking in IT stocks, weak global cues

By ETV Bharat Karnataka Team

Published : Jan 16, 2024, 8:10 PM IST

ಮುಂಬೈ : ಐಟಿ ಮತ್ತು ತೈಲ ಷೇರುಗಳಲ್ಲಿ ಲಾಭ ಗಳಿಕೆ ಮತ್ತು ದುರ್ಬಲ ಜಾಗತಿಕ ಪ್ರವೃತ್ತಿಗಳಿಂದಾಗಿ ಬೆಂಚ್ ಮಾರ್ಕ್ ಸೆನ್ಸೆಕ್ಸ್ ಮಂಗಳವಾರ 199 ಪಾಯಿಂಟ್ ಗಳಷ್ಟು ಕುಸಿದಿದೆ. ಬಿಎಸ್ಇ ಸೆನ್ಸೆಕ್ಸ್ 199.17 ಪಾಯಿಂಟ್ಸ್ ಅಥವಾ ಶೇಕಡಾ 0.27 ರಷ್ಟು ಕುಸಿದು 73,128.77 ಕ್ಕೆ ತಲುಪಿದೆ.

ದಿನದ ಆರಂಭದಲ್ಲಿ ಸೂಚ್ಯಂಕ ಕೆಳಮಟ್ಟದಲ್ಲಿ ಪ್ರಾರಂಭವಾಗಿತ್ತು. ನಂತರದ ವಹಿವಾಟಿನಲ್ಲಿ ಚೇತರಿಕೆಯನ್ನು ಪ್ರದರ್ಶಿಸಿ ಸಾರ್ವಕಾಲಿಕ ಗರಿಷ್ಠ 73,427.59 ಕ್ಕೆ ತಲುಪಿತ್ತು. ವಿಶಾಲ ಮಾರುಕಟ್ಟೆಯಲ್ಲಿ ಲಾಭ ಗಳಿಕೆಯಿಂದಾಗಿ ಅದೇ ಓಘವನ್ನು ಉಳಿಸಿಕೊಳ್ಳಲು ವಿಫಲವಾದ ಸೆನ್ಸೆಕ್ಸ್​ 367.65 ಪಾಯಿಂಟ್ ಅಥವಾ ಶೇಕಡಾ 0.50 ರಷ್ಟು ಇಳಿದು 72,960.29 ಕ್ಕೆ ಇಳಿದಿತ್ತು. ನಿಫ್ಟಿ ದಿನದ ವಹಿವಾಟಿನಲ್ಲಿ ತನ್ನ ಸಾರ್ವಕಾಲಿಕ ಗರಿಷ್ಠ 22,124.15 ಕ್ಕೆ ತಲುಪಿ 65.15 ಪಾಯಿಂಟ್ ಅಥವಾ ಶೇಕಡಾ 0.29 ರಷ್ಟು ಕುಸಿದು 22,032.30 ರಲ್ಲಿ ಕೊನೆಗೊಂಡಿತು.

ಏರಿಕೆಯಾದ ಪ್ರಮುಖ ಷೇರುಗಳು : ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (4.12%), ಟೈಟಾನ್ ಕಂಪನಿ ಲಿಮಿಟೆಡ್ (2.02%), ಹೀರೋ ಮೋಟೊಕಾರ್ಪ್ ಲಿಮಿಟೆಡ್ (1.61%), ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ (1.50%), ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (1.17%).

ನಷ್ಟ ಅನುಭವಿಸಿದ ಷೇರುಗಳು: ಎಚ್​ಸಿಎಲ್ ಟೆಕ್ನಾಲಜೀಸ್ ಲಿಮಿಟೆಡ್ (-1.88%), ದಿವಿಸ್ ಲ್ಯಾಬ್ ಲಿಮಿಟೆಡ್ (-1.80%), ವಿಪ್ರೋ ಲಿಮಿಟೆಡ್ (-1.53%), ಟೆಕ್ ಮಹೀಂದ್ರಾ ಲಿಮಿಟೆಡ್ (-1.51%), ಎನ್​ಟಿಪಿಸಿ ಲಿಮಿಟೆಡ್ (-1.47%).

ಸಾಗರೋತ್ತರ ಪ್ರಮುಖ ಪ್ರತಿಸ್ಪರ್ಧಿಗಳ ವಿರುದ್ಧ ಬಲವಾದ ಡಾಲರ್ ಮತ್ತು ನಕಾರಾತ್ಮಕ ಈಕ್ವಿಟಿ ಮಾರುಕಟ್ಟೆಯು ಹೂಡಿಕೆದಾರರ ಭಾವನೆಯನ್ನು ದುರ್ಬಲಗೊಳಿಸಿದ್ದರಿಂದ ರೂಪಾಯಿ ಮಂಗಳವಾರ ಯುಎಸ್ ಡಾಲರ್ ವಿರುದ್ಧ 23 ಪೈಸೆ ಕುಸಿದು 83.09 ಕ್ಕೆ (ತಾತ್ಕಾಲಿಕ) ತಲುಪಿದೆ. ಇದಲ್ಲದೆ, ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ಕಚ್ಚಾ ತೈಲ ಬೆಲೆಗಳು ದೇಶೀಯ ಕರೆನ್ಸಿಯ ಮೇಲೆ ಪ್ರಭಾವ ಬೀರಿವೆ ಎಂದು ವಿದೇಶಿ ವಿನಿಮಯ ವ್ಯಾಪಾರಿಗಳು ತಿಳಿಸಿದ್ದಾರೆ.

ಇಂಟರ್​ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ರೂಪಾಯಿ 82.95 ಕ್ಕೆ ಪ್ರಾರಂಭವಾಯಿತು ಮತ್ತು ಇಂಟ್ರಾ - ಡೇನಲ್ಲಿ ಡಾಲರ್ ವಿರುದ್ಧ 82.92 ರಿಂದ 83.09 ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು. ಹೌತಿ ಉಗ್ರಗಾಮಿಗಳ ಕ್ಷಿಪಣಿ ದಾಳಿಯ ನಂತರ ಕೆಂಪು ಸಮುದ್ರದಲ್ಲಿ ಉದ್ವಿಗ್ನತೆ ಹೆಚ್ಚಾಗಿರುವ ಮಧ್ಯೆ ಕಚ್ಚಾ ತೈಲ ಬೆಲೆಗಳು ಹೆಚ್ಚಾಗಿವೆ.

ಇದನ್ನೂ ಓದಿ : ಕಾಕಂಬಿಗೆ ಶೇ 50ರಷ್ಟು ರಫ್ತು ಸುಂಕ; ಜ.18 ರಿಂದ ಜಾರಿ

ABOUT THE AUTHOR

...view details