ಕರ್ನಾಟಕ

karnataka

ETV Bharat / business

ದೀಪಾವಳಿ ಸಂಭ್ರಮಾಚರಣೆಯ 'ಅರ್ಥ'.. ಹಬ್ಬ ತಿಳಿಸುವ ಆರ್ಥಿಕ ದೂರದೃಷ್ಟಿಯ ಪಾಠವಿದು - ಹಣತೆಗಳ ಹಬ್ಬ ದೀಪಾವಳಿ

ದೀಪಾವಳಿ ಹಬ್ಬದ ಹಣತೆಗಳ ಬೆಳಕು ಜೀವನ ಬೆಳಗಿದಂತೆ. ನಮ್ಮ ಹೂಡಿಕೆಯೂ ಭವಿಷ್ಯವನ್ನು ಬೆಳಗಬೇಕು. ದೀಪಾವಳಿ ಹಬ್ಬದ ಆಚರಣೆಯು ನಮ್ಮ ಆರ್ಥಿಕ ದೂರದೃಷ್ಟಿಯ ಬಗ್ಗೆಯೂ ಹೇಳುತ್ತದೆ. ಹಬ್ಬದ ಆಚರಣೆಯ 'ಅರ್ಥ'ಗಳು ಏನೆಂಬುದನ್ನು ನಾವಿಲ್ಲಿ ಅರಿಯೋಣ.

follow-these-diwali-lessons
ಹಬ್ಬ ಹೇಳುವ ಆರ್ಥಿಕ ದೂರದೃಷ್ಟಿಯ ಪಾಠ

By

Published : Oct 22, 2022, 10:22 PM IST

Updated : Oct 22, 2022, 10:54 PM IST

ಹೈದರಾಬಾದ್:ಕತ್ತಲೆಯನ್ನು ಓಡಿಸುವ ಬೆಳಕಿನ ಹಬ್ಬ ದೀಪಾವಳಿ. ಬಾಳಲ್ಲಿ ಬೆಳಕು ಮೂಡಿಸಲಿ ಎಂದು ಹಬ್ಬವನ್ನು ಆಚರಿಸುತ್ತೇವೆ. ಅದೇ ರೀತಿ ಸುಖಕರ ಜೀವನಕ್ಕಾಗಿ ಬಂಡವಾಳ ಹೂಡಿಕೆಯೂ ಅಷ್ಟೇ ಮುಖ್ಯ. ಹಬ್ಬಕ್ಕೆ ಮನೆ ಸ್ವಚ್ಛತೆ, ಹೊಸ ಬಟ್ಟೆ ಖರೀದಿಸುತ್ತೇವೆಯೋ, ಹಾಗೆಯೇ ನಮ್ಮ ಬಂಡವಾಳದ ನಿರ್ವಹಣೆಗೆ ಹೊಸ ರೂಪ, ಹಳೆಯ ಯೋಜನೆಗಳನ್ನು ಕೈಬಿಡುವುದು, ಹೊಸ ಹೂಡಿಕೆಯ ಬಗ್ಗೆ ಯೋಜನೆ ರೂಪಿಸಬೇಕು.

ಹಬ್ಬದ ಆಚರಣೆಯ ನಡುವೆ ಹಣಕಾಸಿನ ವಿಷಯಗಳ ಬಗ್ಗೆ ಯೋಚಿಸಲು ಸ್ವಲ್ಪ ಸಮಯವನ್ನು ನಿಗದಿ ಮಾಡಬೇಕು. ದೀಪಾವಳಿ ವೇಳೆ ಹಚ್ಚುವ ಪಟಾಕಿಗಳ ಬಗ್ಗೆ ಎಚ್ಚರಿಕೆ ಅಗತ್ಯ. ಭವಿಷ್ಯದ ಚಿಂತೆಗಳನ್ನು ದೂರ ಮಾಡಲು ಮೊದಲೇ ನಾವು ಉತ್ತಮ ಹಣಕಾಸಿನ ಮಾರ್ಗಗಳನ್ನು ಕಂಡುಕೊಳ್ಳಬೇಕು.

ದೀಪಾವಳಿ ಕಲಿಸುವ 'ಅರ್ಥ'ವೇನು?:ದೀಪಾವಳಿ ಹಬ್ಬ ನಮಗೆ ಬೆಳಕು ನೀಡುವುದಲ್ಲದೇ ಹಣಕಾಸಿನ ಪಾಠಗಳನ್ನೂ ಹೇಳಿಕೊಡುತ್ತದೆ. ಹಣಕಾಸಿನ ಭದ್ರತೆ ನಮಗೆ ಅತಿ ಮುಖ್ಯ. ಅನೇಕ ಆಕರ್ಷಕ ಯೋಜನೆಗಳು ನಮ್ಮ ಮನೆ ಬಾಗಿಲಿಗೆ ಬರುತ್ತವೆ. ಆದರೆ, ಅವುಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಕಷ್ಟಪಟ್ಟು ದುಡಿದ ಹಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ಷೇರುಪೇಟೆಯಲ್ಲಿ ಹೂಡಿಕೆ ಮಾಡುವವರು ಒಂದಷ್ಟು ಹೆಚ್ಚಿನ ಜಾಗರೂಕತೆಯನ್ನು ವಹಿಸಬೇಕು. ಹೂಡಿಕೆಗಳು ನಷ್ಟಕ್ಕೆ ಕಾರಣವಾಗದ ರೀತಿ ಪ್ಲಾನ್​ ಮಾಡಬೇಕು. ಸಾಧ್ಯವಾದಷ್ಟು ವ್ಯಾಪಾರದಲ್ಲಿ ನಷ್ಟವನ್ನು ತಪ್ಪಿಸಿಕೊಳ್ಳುವ ಬಗ್ಗೆ ಎಚ್ಚರ ವಹಿಸಬೇಕು.

ವಿಮೆ, ದೀರ್ಘಾವಧಿ ಹೂಡಿಕೆ ಉತ್ತಮ:ಷೇರುಪೇಟೆ ಸೇರಿದಂತೆ ಇತರೆಡೆಗಳಲ್ಲಿ ನಮ್ಮ ಹೂಡಿಕೆಯು ದೀರ್ಘಾವಧಿಯಾಗಿದ್ದರೆ, ಅದು ಆರ್ಥಿಕ ಸ್ಥಿರತೆಯನ್ನು ಸಾಧಿಸುತ್ತದೆ. ಯಾವುದೇ ಹೂಡಿಕೆ ಮಾಡುವ ಮುನ್ನ ಅದರ ಬಗ್ಗೆ ಸಾಕಷ್ಟು ಅರಿವು ಪಡೆದ ನಂತರವೇ ಮುಂದಡಿ ಇಡಬೇಕು. ಮಕ್ಕಳು ಪಟಾಕಿ ಸಿಡಿಸುವಾಗ ಹಿರಿಯರು ನಿಗಾ ಇಡುವಂತೆ, ಹಣಕಾಸಿನ ಯೋಜನೆ ರೂಪಿಸುವಾಗ ತಜ್ಞರ ಸಲಹೆ ಪಡೆಯುವುದು ಅತ್ಯಗತ್ಯವಾಗಿರುತ್ತದೆ. ಇರುವ ಮೊತ್ತದಲ್ಲಿ ಇಡೀ ಕುಟುಂಬಕ್ಕೆ ಜೀವ ಮತ್ತು ಆರೋಗ್ಯ ವಿಮೆಯನ್ನು ಮಾಡಿಸುವುದನ್ನು ಮರೆಯಬಾರದು.

ಹೂಡಿಕೆ ಮರುಪರಿಶೀಲಿಸಿ:ಹಬ್ಬಕ್ಕೆ ಮನೆಯನ್ನು ಅಂದಗಾಣಿಸಿದಂತೆ, ನಾವು ಮಾಡಿದ ಹೂಡಿಕೆಯ ಯೋಜನೆಗಳನ್ನೂ ಸಹ ಆಗಾಗ ಪರಿಶೀಲಿಸಿ ಅವುಗಳಿಂದ ಉತ್ತಮ ಲಾಭ ಬರುತ್ತಿದ್ದರೆ ಮಾತ್ರ ಮುಂದುವರಿಸಬೇಕು. ಇಲ್ಲವಾದಲ್ಲಿ ಅವುಗಳನ್ನು ಕೈಬಿಡುವುದು ಉತ್ತಮ. ನಾವು ಹಾಕಿದ ಬಂಡವಾಳ ಉತ್ತಮ ಲಾಭ ಗಳಿಸುತ್ತಿದೆಯೇ ಇಲ್ಲವೇ ಎಂಬುದನ್ನು ಕಾಲಕಾಲಕ್ಕೆ ನಿಷ್ಕರ್ಷೆಗೆ ಒಳಪಡಿಸಬೇಕು. ಅನುತ್ಪಾದಕ ಹೂಡಿಕೆಗಳನ್ನು ಎರಡನೇ ಆಲೋಚನೆ ಇಲ್ಲದೇ ತೊಡೆದು ಹಾಕಬೇಕು.

ಮುಂಚೆಯೇ ಯೋಚಿಸಿ:ಪ್ರತಿ ಹಬ್ಬಕ್ಕೆ ಹೊಸ ಬಟ್ಟೆ ಮತ್ತು ಅಲಂಕಾರಿಕ ವಸ್ತುಗಳನ್ನು ಖರೀದಿಸಲು ನಾವು ಹೆಚ್ಚು ಮುಂಚಿತವಾಗಿ ಹೇಗೆ ಯೋಜಿಸುತ್ತೇವೆಯೋ, ಹಾಗೆಯೇ ಹೂಡಿಕೆ ಮಾಡುವಲ್ಲಿಯೂ ಅದೇ ಚಾಣಕ್ಯತನ ಪ್ರದರ್ಶಿಸಬೇಕು. ಉಳಿತಾಯ ಮತ್ತು ಹೂಡಿಕೆಗಾಗಿ ಎಷ್ಟರಮಟ್ಟಿಗೆ ಮುಂಚಿತವಾಗಿ ಯೋಜಿಸುತ್ತೇವೆಯೋ, ಅವು ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ಹಣದುಬ್ಬರದಿಂದ ಪಾರಾಗಲು ಸಾಕಷ್ಟು ಆದಾಯವನ್ನು ಹೊಂದಿರಬೇಕು.

ಹೂಡಿಕೆಯಲ್ಲಿ ವೈವಿಧ್ಯತೆ ಇರಲಿ:ದೀಪಾವಳಿ ಹಬ್ಬಕ್ಕೆ ತರಹೇವಾರಿ ಪಟಾಕಿ ಮತ್ತು ಸಿಹಿತಿಂಡಿ ತರುತ್ತೇವೆ. ಉತ್ಪಾದಿತ ಹೂಡಿಕೆ ಕೂಡ ಸಿಹಿಗೆ ಸಮವಾಗಿರುತ್ತದೆ. ವಿಭಿನ್ನ ಯೋಜನೆಗಳ ಲಾಭ, ನಷ್ಟನನ್ನು ಲೆಕ್ಕ ಹಾಕಿ ನಂತರ ಹೂಡಿಕೆ ಮಾಡಬೇಕು. ಕೆಲ ಪಟಾಕಿಗಳು ನಮಗೆ ಮಾರಕವಾಗಿರುತ್ತವೆ. ಅದರಂತೆ ಯೋಜನೆಗಳು ಕೂಡ ನಮ್ಮ ಕೈ ಮೀರಬಹುದು. ಅವುಗಳನ್ನು ಬುದ್ಧಿವಂತಿಕೆಯಿಂದ ನಿಭಾಯಿಸಿ.

ಉಳಿತಾಯ ಯೋಜನೆ ಇರಲೇಬೇಕು:ಪಟಾಕಿ ಹಚ್ಚುವಾಗ ಅಪಾಯಗಳು ಸಹಜ. ಅವುಗಳ ತಡೆಗೆ ಸುರಕ್ಷತಾ ಸಾಧನಗಳನ್ನು ಬಳಸುತ್ತೇವೆ. ಅಂತೆಯೇ, ಜೀವನದಲ್ಲಿ ಯಾವುದೇ ಸಮಯದಲ್ಲಿ ಘಟಿಸುವ ಸಮಸ್ಯೆಗಳನ್ನು ಎದುರಿಸಲು ನಮ್ಮಲ್ಲಿ 6 ತಿಂಗಳಿಗೆ ಆಗುವಷ್ಟು ಇಎಂಐ ಹಣ, ಅದಕ್ಕೆ ಸಮಾನವಾದ ತುರ್ತು ನಿಧಿಯನ್ನು ನಮ್ಮಲ್ಲಿರಬೇಕು. ದಸರಾ ಮತ್ತು ದೀಪಾವಳಿಗೆ ಬೋನಸ್ ಸಿಗುವಂತೆ, ತುರ್ತು ನಿಧಿಯನ್ನೂ ಕೂಡ ಬೋನಸ್​ ಮಾದರಿಯಲ್ಲಿ ರೀಚಾರ್ಜ್ ಮಾಡಬೇಕು. ಉಳಿತಾಯ ಯೋಜನೆಗಳಲ್ಲಿ ಅಥವಾ ಇಕ್ವಿಟಿ ಲಿಂಕ್ಡ್ ಉಳಿತಾಯ ಯೋಜನೆಗಳಲ್ಲಿ (ELSS) ಹೂಡಿಕೆ ಮಾಡಲು ಹಣವನ್ನು ಬಳಸಬೇಕು.

ಓದಿ:1747 ಕೋಟಿ ರೂ. ಹೂಡಿಕೆಗೆ ಅನುಮೋದನೆ : 4904 ಉದ್ಯೋಗ ಸೃಷ್ಟಿ ಸಾಧ್ಯತೆ

Last Updated : Oct 22, 2022, 10:54 PM IST

ABOUT THE AUTHOR

...view details