ಕರ್ನಾಟಕ

karnataka

ETV Bharat / business

ಏರ್‌ಟೆಲ್‌ನ ಎಲ್ಲಾ ಪ್ಲ್ಯಾನ್​ಗಳ ದರ ಹೆಚ್ಚಾಗಲಿದೆ: ಸುನಿಲ್ ಭಾರ್ತಿ ಮಿತ್ತಲ್

ಭಾರ್ತಿ ಏರ್‌ಟೆಲ್​ನ ಎಲ್ಲಾ ಪ್ಲ್ಯಾನ್​ಗಳ ದರ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ ಎಂದು ಏರ್‌ಟೆಲ್‌ ಮುಖ್ಯಸ್ಥರು ತಿಳಿಸಿದ್ದಾರೆ.

By

Published : Feb 28, 2023, 8:00 PM IST

Bharti Airtel
ಭಾರ್ತಿ ಏರ್‌ಟೆಲ್

ಬಾರ್ಸಿಲೋನಾ: ಎಲ್ಲಾ ಪ್ಲ್ಯಾನ್​ಗಳ ಕರೆ ಹಾಗೂ ಡೇಟಾ ದರ ಹೆಚ್ಚಿಸಲಾಗುವುದು ಎಂದು ಭಾರ್ತಿ ಏರ್‌ಟೆಲ್‌ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಹೇಳಿದ್ದಾರೆ. ಕಂಪನಿಯು ಕಳೆದ ತಿಂಗಳು ತನ್ನ ಕನಿಷ್ಠ ರೀಚಾರ್ಜ್‌ ಬೆಲೆಯನ್ನು ಅಂದ್ರೆ, 28 ದಿನಗಳ ಮೊಬೈಲ್ ಸೇವಾ ಪ್ಲ್ಯಾನ್‌ ಮೇಲೆ ಶೇ.57 ರಷ್ಟು ಬೆಲೆ ಹೆಚ್ಚಿಸಿದ್ದು, ಒಟ್ಟು ಎಂಟು ಪ್ಲ್ಯಾನ್​ಗಳಲ್ಲಿ 155 ರೂ ಏರಿಕೆ ಮಾಡಿತ್ತು.

ಏರ್‌ಟೆಲ್ ಬ್ಯಾಲೆನ್ಸ್ ಶೀಟ್: ಕಂಪನಿಯ ಬ್ಯಾಲೆನ್ಸ್ ಶೀಟ್ ಆರೋಗ್ಯಕರವಾಗಿರುವಾಗ ತೆರಿಗೆ ಹೆಚ್ಚಳದ ಅಗತ್ಯತೆಯ ಕುರಿತು ಮಾಧ್ಯಮವೊಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಿತ್ತಲ್, ''ಟೆಲಿಕಾಂ ವ್ಯವಹಾರದಲ್ಲಿ ಬಂಡವಾಳದ ಮೇಲಿನ ಆದಾಯ ತುಂಬಾ ಕಡಿಮೆಯಾಗಿದೆ'' ಎಂದರು.

ಬಾರ್ಸಿಲೋನಾದಲ್ಲಿ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (ಎಂಡಬ್ಲ್ಯೂಸಿ)ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ತೆರಿಗೆ ಹೆಚ್ಚಳವಾಗಿದ್ದು ಕಂಪನಿಯಿಂದ ಈ ನಿರ್ಧಾರ ಕೈಗೊಳ್ಳಲಾಗುವುದು. ಕಂಪನಿಯ ಬಂಡವಾಳಕ್ಕೆ ಹೊಡೆತ ಬಿದ್ದಿದೆ. ಇದರಿಂದ ಬ್ಯಾಲೆನ್ಸ್‌ ಶೀಟ್ ಮೇಲೆ ಪ್ರಭಾವ ಬೀರಲಿದೆ. ಉದ್ಯಮದಲ್ಲಿ ಬಂಡವಾಳದ ಮೇಲಿನ ಲಾಭ ಕೂಡಾ ಕಡಿಮೆಯಾಗಿದೆ. ಈ ವ್ಯತ್ಯಾಸಗಳು ಬದಲಾಗಬೇಕು. ಹೀಗಾಗಿ ನಾವು ಕಂಪನಿಯ ತೆರಿಗೆ ಪರಿಸ್ಥಿತಿ ಸುಧಾರಿಸಲು ಈ ರೀತಿಯ ಸಣ್ಣ ದರ ಏರಿಕೆ ಬಗ್ಗೆ ಮಾತನಾಡುತ್ತಿದ್ದೇವೆ. ಈ ವರ್ಷ ಅದು ಅನ್ವಯವಾಗುವ ಸಾಧ್ಯತೆ ಹೆಚ್ಚಿದೆ'' ಎಂದಿದ್ದಾರೆ.

ಸಮಾಜದ ಕೆಳಸ್ತರದಲ್ಲಿರುವ ಜನರ ಮೇಲೆ ಬೆಲೆ ಏರಿಕೆ ಪರಿಣಾಮ ಬೀರಲಿದೆ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ''ಜನರು ಇತರ ವಸ್ತುಗಳ ಮೇಲೆ ಮಾಡುವ ವೆಚ್ಚಕ್ಕೆ ಹೋಲಿಸಿದರೆ, ಮೊಬೈಲ್​ ಸೇವೆ ಪ್ಲ್ಯಾನ್​ಗಳ ದರ ಹೆಚ್ಚಳ ತೀರಾ ಕಡಿಮೆ. ಸದ್ಯ ಜನರ ಸಂಬಳ ಹಾಗೂ ಮನೆ ಬಾಡಿಗೆ ಕೂಡಾ ಹೆಚ್ಚಾಗಿದೆ. ಈ ಬಗ್ಗೆ ಯಾರೂ ದೂರು ನೀಡುತ್ತಿಲ್ಲ. ಜನರು ಬಹುತೇಕ ಏನನ್ನೂ ಪಾವತಿಸದೇ 30 ಜಿಬಿಯನ್ನು ಬಳಸುತ್ತಿದ್ದಾರೆ. ವೊಡಾಫೋನ್ (ಐಡಿಯಾ) ರೀತಿಯ ಸನ್ನಿವೇಶಗಳನ್ನು ನಮ್ಮ ಏರ್​ಟೆಲ್​ ಕಂಪನಿಗಿಲ್ಲ. ದೇಶದಲ್ಲಿ ನಮ್ಮ ಕಂಪನಿಯು ದೃಢ ಟೆಲಿಕಾಂ ಕಂಪನಿಯಾಗಿದೆ" ಎಂದು ಮಿತ್ತಲ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ:ಅಮೆರಿಕದಲ್ಲಿ ಟಿಕ್​ಟಾಕ್​ ಬ್ಯಾನ್​: ಎಲ್ಲ ಸರ್ಕಾರಿ ಜಾಲತಾಣದಿಂದ ಅಳಿಸಿಹಾಕಲು 30 ದಿನಗಳ ಡೆಡ್​ಲೈನ್​

ABOUT THE AUTHOR

...view details