ಕರ್ನಾಟಕ

karnataka

ETV Bharat / business

ಓಪನ್​ ಸೆಲ್​ ಬೆಲೆ ಏರಿಕೆ.. ದುಬಾರಿಯಾಗಲಿವೆ ಎಲ್​ಇಡಿ ಟಿವಿ

ಪ್ಯಾನಸೋನಿಕ್, ಹೈಯರ್ ಮತ್ತು ಥಾಮ್ಸನ್ ಸೇರಿದಂತೆ ಬ್ರಾಂಡೆಡ್​ ಉತ್ಪನ್ನಗಳ ಬೆಲೆ ಈ ವರ್ಷದ ಏಪ್ರಿಲ್‌ನಿಂದ ಹೆಚ್ಚಿಸಲು ಯೋಜಿಸಿವೆ. ಎಲ್‌ಜಿ ಸೇರಿದಂತೆ ಇತರ ಕಂಪನಿಗಳು ಈಗಾಗಲೇ ಓಪನ್​ ಸೆಲ್​ಗಳ ಬೆಲೆ ಏರಿಕೆಯಿಂದಾಗಿ ದರಗಳನ್ನು ಏರಿಕೆ ಮಾಡಿವೆ.

By

Published : Mar 11, 2021, 4:20 PM IST

TV prices
TV prices

ನವದೆಹಲಿ:ಪೆಟ್ರೋಲ್, ಡೀಸೆಲ್​, ಸಿಲಿಂಡರ್ ಸೇರಿದಂತೆ ಹಲವು ನಿತ್ಯದ ಸರಕುಗಳ ದರ ಏರಿಕೆಯ ನಡುವೆ ಎಲ್​ಇಡಿ ಟಿವಿಗಳ ದರ ಸಹ ಹೆಚ್ಚಳವಾಗಲಿವೆ.

ಜಾಗತಿಕ ಮಾರುಕಟ್ಟೆಗಳಲ್ಲಿ ಓಪನ್​ ಸೆಲ್ ಪ್ಯಾನೆಲ್‌ಗಳ ಬೆಲೆ ಕಳೆದ ಒಂದು ತಿಂಗಳಲ್ಲಿ ಶೇ 35ರಷ್ಟು ಏರಿಕೆಯಾಗಿದ್ದು, ಎಲ್‌ಇಡಿ ಟಿವಿಗಳ ಬೆಲೆ ಏಪ್ರಿಲ್‌ನಿಂದ ಮತ್ತಷ್ಟು ದುಬಾರಿಯಾಗಲಿದೆ.

ಪ್ಯಾನಸೋನಿಕ್, ಹೈಯರ್ ಮತ್ತು ಥಾಮ್ಸನ್ ಸೇರಿದಂತೆ ಬ್ರಾಂಡೆಡ್​ ಉತ್ಪನ್ನಗಳ ಬೆಲೆಗಳನ್ನು ಈ ವರ್ಷದ ಏಪ್ರಿಲ್‌ನಿಂದ ಹೆಚ್ಚಿಸಲು ಕಂಪನಿಗಳು ಯೋಜಿಸಿವೆ. ಎಲ್‌ಜಿ ಸೇರಿದಂತೆ ಇತರ ಕಂಪನಿಗಳು ಈಗಾಗಲೇ ಓಪನ್​ ಸೆಲ್​ಗಳ ಬೆಲೆ ಏರಿಕೆಯಿಂದಾಗಿ ದರಗಳನ್ನು ಏರಿಕೆ ಮಾಡಿವೆ.

ಪ್ಯಾನಲ್ ಬೆಲೆಗಳು ನಿರಂತರವಾಗಿ ಏರುತ್ತಿವೆ. ಟಿವಿಗಳ ಬೆಲೆಯೂ ಸಹ ಇದೇ ವೇಗದಲ್ಲಿ ಹೆಚ್ಚಳವಾಗುತ್ತಿದೆ. ಏಪ್ರಿಲ್ ವೇಳೆಗೆ ಟಿವಿ ಬೆಲೆಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪ್ಯಾನಸೋನಿಕ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾ ಅಧ್ಯಕ್ಷ ಮತ್ತು ಸಿಇಒ ಮನೀಶ್ ಶರ್ಮಾ ಹೇಳಿದರು.

ಇದನ್ನೂ ಓದಿ: 43 ಕೋಟಿ ರೂ. ತೆರಿಗೆ ವಂಚಿಸಿ GST ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಭೂಪ ಅಂದರ್!

ಈಗಿನ ಮಾರುಕಟ್ಟೆ ಪ್ರವೃತ್ತಿಗಳನ್ನು ನೋಡಿದಾಗ, ಏಪ್ರಿಲ್ ವೇಳೆಗೆ ಶೇ 5-7ರಷ್ಟು ಹೆಚ್ಚಾಗಬಹುದು ಎಂದರು.

ಹೈಯರ್​ ಅಪ್ಲೈಯನ್ಸ್ ಇಂಡಿಯಾ ಅಧ್ಯಕ್ಷ ಎರಿಕ್ ಬ್ರಾಗಾಂಜಾ ಅವರು ಸಹ ಬೆಲೆಗಳನ್ನು ಹೆಚ್ಚಿಸುವುದು ಬಿಟ್ಟರೆ ಬೇರೆ ಯಾವುದೇ ದಾರಿಯಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಓಪನ್​ ಸೆಲ್​ಗಳ ಬೆಲೆಗಳು ಮಹತ್ತರವಾಗಿ ಏರಿವೆ. ಬೆಲೆಗಳ ಪ್ರವೃತ್ತಿಗಳು ಸಹ ಹೆಚ್ಚುತ್ತಲೇ ಇರುತ್ತವೆ. ಅದು ಮುಂದುವರಿದರೆ, ನಾವು ನಿರಂತರವಾಗಿ ಬೆಲೆಗಳನ್ನು ಹೆಚ್ಚಿಸಬೇಕಾಗುತ್ತದೆ ಎಂದರು.

ಓಪನ್-ಸೆಲ್ ಪ್ಯಾನಲ್ ಟಿವಿ ತಯಾರಿಕೆಯ ಒಂದು ಪ್ರಮುಖ ಭಾಗವಾಗಿದ್ದು, ಇದು ಶೇ 60ರಷ್ಟು ಘಟಕ ಒಳಗೊಂಡಿದೆ. ಕಂಪನಿಗಳು ಟೆಲಿವಿಷನ್ ಪ್ಯಾನೆಲ್‌ಗಳನ್ನು ಒಪನ್ ಸೆಲ್​ನ ಸ್ಥಿತಿಯಲ್ಲಿ ಆಮದು ಮಾಡಿಕೊಳ್ಳುತ್ತವೆ. ಇವುಗಳನ್ನು ಮಾರುಕಟ್ಟೆಗೆ ಮಾರಾಟಕ್ಕೆ ಸಾಗಿಸುವ ಮೊದಲು ಮೌಲ್ಯವರ್ಧನೆಯೊಂದಿಗೆ ಜೋಡಿಸುವ ಅಗತ್ಯವಿರುತ್ತದೆ.

ಮಾರುಕಟ್ಟೆಯಲ್ಲಿ ಓಪನ್ ಸೆಲ್​ಗಳ ಕೋಶದ ಕೊರತೆ ಕಾಡುತ್ತಿದೆ. ಕಳೆದ ಎಂಟು ತಿಂಗಳಲ್ಲಿ ಬೆಲೆಗಳು ಮೂರು ಪಟ್ಟು ಹೆಚ್ಚಾಗಿದೆ ಎಂದು ಫ್ರೆಂಚ್ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಥಾಮ್ಸನ್ ಮತ್ತು ಯುಎಸ್ ಮೂಲದ ಬ್ರಾಂಡ್ ಕೊಡಾಕ್ನ ಬ್ರಾಂಡ್ ಪರವಾನಗಿ ಪಡೆದ ಸೂಪರ್ ಪ್ಲ್ಯಾಸ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ (ಎಸ್‌ಪಿಪಿಎಲ್) ಹೇಳಿದೆ.

ಕಳೆದ ಎಂಟು ತಿಂಗಳಿಂದ ಪ್ಯಾನಲ್ ಬೆಲೆಗಳಲ್ಲಿ ತಿಂಗಳಿಗೊಮ್ಮೆ ಹೆಚ್ಚಳವಾಗಿದೆ. ಎಲ್ಇಡಿ ಟಿವಿ ಪ್ಯಾನೆಲ್‌ಗಳಲ್ಲಿ ನಾವು ಶೇ 350ಕ್ಕಿಂತ ಹೆಚ್ಚು ಏರಿಕೆಯನ್ನೂ ಕಂಡಿದ್ದೇವೆ. ಜಾಗತಿಕವಾಗಿ ಪ್ಯಾನಲ್ ಮಾರುಕಟ್ಟೆ ನಿಧಾನವಾಗಿ ಸಾಗುತ್ತಿದೆ. ಇದರ ಹೊರತಾಗಿಯೂ ಕಳೆದ 30 ದಿನಗಳಲ್ಲಿ ಶೇ 35ರಷ್ಟು ಹೆಚ್ಚಳವಾಗಿದೆ ಎಂದು ಎಸ್‌ಪಿಪಿಎಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವ್ನೀತ್ ಸಿಂಗ್ ಮಾರ್ವಾ ಹೇಳಿದ್ದಾರೆ.

ABOUT THE AUTHOR

...view details