ನವದಹಲಿ:ಸೌದಿ ಅರೇಬಿಯಾದ ಅತಿದೊಡ್ಡ ತೈಲ ಘಟಕಗಳ ಮೇಲೆ ಡ್ರೋಣ್ ದಾಳಿ ನಡೆದ ಬಳಿಕ ಕಳೆದ 6 ದಿನಗಳಲ್ಲಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕ್ರಮವಾಗಿ ₹ 2.59 ಹಾಗೂ ₹ 1.31 ಏರಿಕೆಯಾಗಿದೆ.
6 ದಿನದಲ್ಲಿ 1.59 ರೂ. ಜಿಗಿದ ಪೆಟ್ರೋಲ್ ದರ: ಡೀಸೆಲ್ ಬೆಲೆಯಷ್ಟು? - ಪೆಟ್ರೋಲ್
ಕೊಲ್ಲಿ ರಾಷ್ಟ್ರಗಳಲ್ಲಿನ ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳು ತೈಲ ದರ ಏರಿಕೆಗೆ ಪ್ರಮುಖ ಕಾರಣ. ಸೌದಿಯ ತೈಲ ಘಟಕಗಳ ಮೇಲೆ ಡ್ರೋಣ್ ದಾಳಿ ನಡೆದ ಬಳಿಕ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹಾಗಾಗಿ ಭಾರತ, ಚೀನಾ ಸೇರಿದಂತೆ ವಿದೇಶಿ ಅವಲಂಬಿತ ರಾಷ್ಟ್ರಗಳ ಇಂಧನ ದರ ಚಿಲ್ಲರೆ ಮಾರುಕಟ್ಟೆಯಲ್ಲಿ ಏರಿಕೆ ಕಂಡಿದೆ.
ಸಾಂದರ್ಭಿಕ ಚಿತ್ರ
ದೆಹಲಿಯಲ್ಲಿ ಭಾನುವಾರ ಏಕಾಏಕಿ ಪೆಟ್ರೋಲ್ನಲ್ಲಿ 27 ಪೈಸೆ ಏರಿಕೆಯಾಗಿ ₹ 73.62 ರಲ್ಲಿ ಮಾರಾಟವಾಗುತ್ತಿದ್ದರೆ ಡೀಸೆಲ್ ಕೂಡ 18 ಪೈಸೆ ಹೆಚ್ಚಳವಾಗಿ ₹ 66.74ಗೆ ಖರೀದಿಯಾಗುತ್ತಿದೆ.
ಸೆಪ್ಟೆಂಬರ್ 17ರಿಂದ ತೈಲ ದರದಲ್ಲಿ ಏರಿಕೆಯಾಗುತ್ತಲೇ ಸಾಗಿದ್ದು, ಈ ಆರು ದಿನಗಳಲ್ಲಿ ಪೆಟ್ರೋಲ್ನಲ್ಲಿ ₹ 1.59 ಹಾಗೂ ₹ ಡೀಸೆಲ್ನಲ್ಲಿ ₹ 1.31ರಷ್ಟು ಹೆಚ್ಚಳವಾಗಿದೆ. ಇಂದು ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಮೇಲೆ 28 ಪೈಸೆ ಹಾಗೂ ಡೀಸೆಲ್ ಮೇಲೆ 21 ಪೈಸೆ ಏರಿಕೆಯಾಗಿ ಅನುಕ್ರಮವಾಗಿ ಪ್ರತಿ ಲೀಟರ್‌ಗೆ ₹ 76.14 ಮತ್ತು ₹ 69.01ರಲ್ಲಿ ವಹಿವಾಟು ನಡೆಸುತ್ತಿವೆ.