ಕರ್ನಾಟಕ

karnataka

By

Published : Oct 16, 2020, 5:58 PM IST

ETV Bharat / business

ಮಹಾ ಕುಸಿತದ ಬಳಿಕ ಗೂಳಿ ಅಬ್ಬರ: ಸೆನ್ಸೆಕ್ಸ್​ 254 ಅಂಕ ಜಿಗಿತ!

ಶುಕ್ರವಾರದ ವಹಿವಾಟಿನಂದು ಬಿಎಸ್‌ಇ ಸೆನ್ಸೆಕ್ಸ್ ಸೂಚ್ಯಂಕ ಶೇ 1ರಷ್ಟು ಅಥವಾ 254.57 ಅಂಕ ಜಿಗಿದು 39,982.98 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ-50 ಮಾನದಂಡವು 82.10 ಅಂಕ ಹೆಚ್ಚಳವಾಗಿ 11,762.45 ಅಂಕಗಳಿಗೆ ಏರಿಕೆಯಾಯಿತು.

Sensex
ಸೆನ್ಸೆಕ್ಸ್​

ಮುಂಬೈ:ಸುಮಾರು ಆರು ವರ್ಷಗಳಲ್ಲಿ ಬೆಂಚ್‌ಮಾರ್ಕ್ ಸೂಚ್ಯಂಕಗಳು ತಮ್ಮ ಸುದೀರ್ಘ ಗೆಲುವಿನ ಹಾದಿ ಏಕಾಏಕಿ ನಿಲ್ಲಿಸಿದ ಒಂದು ದಿನದ ಬಳಿಕ ದೇಶೀಯ ಷೇರು ಮಾರುಕಟ್ಟೆ ಹಣಕಾಸು ಮತ್ತು ಲೋಹದ ಷೇರುಗಳ ನೇತೃತ್ವದಲ್ಲಿ ಮತ್ತೆ ಪುಟಿದೆದ್ದವು.

ಶುಕ್ರವಾರದ ವಹಿವಾಟಿನಂದು ಬಿಎಸ್‌ಇ ಸೆನ್ಸೆಕ್ಸ್ ಸೂಚ್ಯಂಕ ಶೇ 1ರಷ್ಟು ಅಥವಾ 254.57 ಅಂಕ ಜಿಗಿದು 39,982.98 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ-50 ಮಾನದಂಡವು 82.10 ಅಂಕ ಹೆಚ್ಚಳವಾಗಿ 11,762.45 ಅಂಕಗಳಿಗೆ ಏರಿಕೆಯಾಯಿತು.

ಗುರುವಾರದ ವಹಿವಾಟಿನಂದು ಎರಡೂ ಮಾನದಂಡಗಳು ಶೇ 2.5ರಷ್ಟು ಕುಸಿದವು. ಸೆಪ್ಟೆಂಬರ್ 24ರ ಬಳಿಕದ ಅತಿದೊಡ್ಡ ನಷ್ಟವಾಗಿತ್ತು. ಜಾಗತಿಕ ಮಾರುಕಟ್ಟೆಗಳಲ್ಲಿನ ಮಾರಾಟದ ಒತ್ತಡದ ನಡುವೆ ಕೋವಿಡ್​ -19 ಸೋಂಕಿನ ಎರಡನೇ ಅಲೆಯು ಹೂಡಿಕೆದಾರರಲ್ಲಿ ಭೀತಿ ಸೃಷ್ಟಿಸಿತ್ತು.

ಜೆಎಸ್‌ಡಬ್ಲ್ಯು ಸ್ಟೀಲ್, ಟಾಟಾ ಸ್ಟೀಲ್, ಭಾರತ್ ಪೆಟ್ರೋಲಿಯಂ, ಹಿಂಡಾಲ್ಕೊ, ಡಿವಿಸ್ ಲ್ಯಾಬೊರೇಟರೀಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 2.84 ರಿಂದ ಶೇ 6.69ರಷ್ಟು ಏರಿಕೆ ಕಂಡವು.

ಮತ್ತೊಂದೆಡೆ, ಯುಪಿಎಲ್, ಎಚ್‌ಸಿಎಲ್ ಟೆಕ್, ಮಹೀಂದ್ರಾ & ಮಹೀಂದ್ರಾ, ಏಷ್ಯಾನ್ ಪೇಂಟ್ಸ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ತಲಾ ಶೇ 1.26 ರಿಂದ ಶೇ 7.73ರಷ್ಟರ ಮಧ್ಯೆ ಕೊನೆ ಗೊಂಡವು.

ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್ ಮತ್ತು ಕೊಟಕ್ ಮಹೀಂದ್ರಾ ಬ್ಯಾಂಕ್ ಸೆನ್ಸೆಕ್ಸ್‌ನ ಏರಿಕೆಗೆ ಹೆಚ್ಚಿನ ಕೊಡುಗೆ ನೀಡಿವೆ.

ABOUT THE AUTHOR

...view details