ಮುಂಬೈ:ದೇಶಾದ್ಯಂತ ಮಾರ್ಚ್ 25ರಿಂದ ಹೇರಿಕೆ ಮಾಡಲಾಗಿರುವ ಲಾಕ್ಡೌನ್ ಸದ್ಯ ಕೂಡ ದೇಶದಲ್ಲಿ ಮುಂದುವರೆದಿದೆ. ಹೀಗಾಗಿ ಕೆಲವೊಂದು ಕಂಪನಿಗಳು ಲಾಭಗಳಿಸಲಾಗದೇ ತೊಂದರೆ ಅನುಭವಿಸುತ್ತಿದ್ದು, ಇದರಿಂದ ಭಾರತದ ಅತಿದೊಡ್ಡ ಕಂಪನಿ ರಿಲಯನ್ಸ್ ಇಂಡಸ್ಟ್ರೀ ಕೂಡ ಹೊರತಾಗಿಲ್ಲ.
ರಿಲಯನ್ಸ್ ಸಿಬ್ಬಂದಿ ಸಂಬಳದಲ್ಲಿ ಶೇ10 - 50ರಷ್ಟು ಕಡಿತ - ರಿಲಯನ್ಸ್ ಸಿಬ್ಬಂದಿ
ದೇಶದಲ್ಲಿ ಹೇರಲಾಗಿರುವ ಲಾಕ್ಡೌನ್ ಅನೇಕ ಸಂಕಷ್ಟ ತಂದಿಟ್ಟಿದ್ದು, ಇದರಿಂದ ದೊಡ್ಡ ದೊಡ್ಡ ಸಂಸ್ಥೆಗಳು ಲಾಭವಿಲ್ಲದೇ ತೊಂದರೆ ಅನುಭವಿಸುವಂತಾಗಿದೆ. ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀ ಕೂಡ ಇದೀಗ ತೊಂದರೆಗೊಳಗಾಗಿದೆ.
ರಿಲಯನ್ಸ್ ಇಂಡಸ್ಟ್ರೀಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಸಂಬಳದಲ್ಲಿ ಶೇ.10 - 50ರಷ್ಟು ಕಡಿತಗೊಳಿಸಲು ಇದೀಗ ಮುಖೇಶ್ ಅಂಬಾನಿ ನಿರ್ಧರಿಸಿದ್ದಾರೆ. ರಿಲಯನ್ಸ್ ಬೋರ್ಡ್ ಡೈರೆಕ್ಟರ್, ಕಾರ್ಯನಿರ್ವಾಹಕ ನಿರ್ದೇಶಕರು, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಹಿರಿಯ ಸದಸ್ಯರು ತಮ್ಮ ಸ್ಯಾಲರಿಯಲ್ಲಿ ಶೇ. 30 ರಿಂದ 50 ರಷ್ಟು ಭಾಗ ಬಿಡಲು ನಿರ್ಧರಿಸಿದ್ದಾರೆ.
15 ಲಕ್ಷ ರೂ. ಸ್ಯಾಲರಿ ಪ್ಯಾಕೇಜ್ ಹೊಂದಿರುವ ಸಿಬ್ಬಂದಿಗೆ ರಜೆ ನೀಡಲಾಗಿದ್ದು, ವರ್ಷ ಪೂರ್ತಿ ಸಂಬಳ ಪಡೆದುಕೊಳ್ಳದಿರಲು ಮುಕೇಶ್ ಅಂಬಾನಿ ನಿರ್ಧರಿಸಿದ್ದಾರೆ. ಇದರ ಜತೆಗೆ ಸಿಬ್ಬಂದಿಗೆ ಪ್ರತಿ ವರ್ಷ ನೀಡುವ ಬೋನಸ್ ನೀಡದಿರಲು ಸಂಸ್ಥೆ ನಿರ್ಧಾರ ಕೈಗೊಂಡಿದೆ.