ನವದೆಹಲಿ: ಹೊಸ ಕೃಷಿ ಮೂಲಸೌಕರ್ಯ ಮತ್ತು ಇತರೆ ಅಭಿವೃದ್ಧಿ ಕಾರ್ಯಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಏರಿಕೆ ಮಾಡಿದ್ದನ್ನು ಅರಿತ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು), ಮಂಗಳವಾರ ಎರಡೂ ಉತ್ಪನ್ನಗಳ ಚಿಲ್ಲರೆ ಬೆಲೆಗಳನ್ನು ಯಥಾವತ್ತಾಗಿ ಇರಿಸಿಕೊಂಡಿವೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯು ನೀಡಿದ ಸಂಕೇತಗಳನ್ನು ಒಎಂಸಿಗಳು ನಿರ್ಲಕ್ಷಿಸಿವೆ. ತೈಲ ಬೆಲೆಗಳು ಶೇ.1ರಷ್ಟು ತೀವ್ರವಾಗಿ ಏರಿಕೆಯಾಗಿ ಬ್ಯಾರೆಲ್‌ಗೆ 57 ಡಾಲರ್‌ಗೆ ತಲುಪಿದೆ. ಇದು ಸಾಮಾನ್ಯವಾಗಿ ಒಎಂಸಿಗಳನ್ನು ಚೇತರಿಸಿಕೊಳ್ಳುವುದನ್ನು ಕಡಿಮೆ ಮಾಡಲು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಲು ತಳ್ಳಲಿದೆ.
ಮಂಗಳವಾರ ಬೆಲೆಗಳು ಸ್ಥಗಿತಗೊಂಡಿದ್ದರಿಂದ ದೆಹಲಿಯಲ್ಲಿ ಪೆಟ್ರೋಲ್ ಹೊಸ ದಾಖಲೆಯ ಗರಿಷ್ಠ 86.30 ರೂ.ಗಳಲ್ಲಿ ಲಭ್ಯವಾಗಿದ್ದರೆ, ಡೀಸೆಲ್ ಲೀಟರ್ 76.48 ರೂಗಳಲ್ಲಿ ಮಾರಾಟವಾಗುತ್ತಿದೆ. ಇಂಧನ ಬೆಲೆಗಳು ಸತತನ 6ನೇ ದಿನವೂ ಸ್ಥಿರವಾಗಿ ಸಾಗುತ್ತಿವೆ.
ಇದನ್ನೂ ಓದಿ: ಬಜೆಟ್ನಲ್ಲಿ ಸ್ವಯಂಪ್ರೇರಿತ ವಾಹನ ಸ್ಕ್ರ್ಯಾಪಿಂಗ್ ನೀತಿ ಪ್ರಕಟ: ಪರಿಸರ ಸ್ನೇಹಿ ವಾಹನಗಳಿಗೆ ಉತ್ತೇಜನ
ಮುಂಬೈಯಲ್ಲಿ ಪೆಟ್ರೋಲ್ ಲೀಟರ್‌ಗೆ 92.86 ರೂ., ಚೆನ್ನೈನಲ್ಲಿ 88.82 ರೂ. ಮತ್ತು ಕೋಲ್ಕತ್ತಾದಲ್ಲಿ 87.69 ರೂ.ರಷ್ಟಿದೆ. ಮತ್ತೊಂದೆಡೆ ಡೀಸೆಲ್ ಮುಂಬೈಯಲ್ಲಿ 83.30 ರೂ., ಚೆನ್ನೈನಲ್ಲಿ 81.71 ರೂ. ಮತ್ತು ಕೋಲ್ಕತ್ತಾದಲ್ಲಿ 80.08 ರೂ.ಯಲ್ಲಿ ಮಾರಾಟ ಆಗುತ್ತಿದೆ. ಬೆಂಗಳೂರಲ್ಲಿ ಪೆಟ್ರೋಲ್ 89.21 ಹಾಗೂ ಡೀಸೆಲ್ 81.20 ರೂ.ರಲ್ಲಿ ಖರೀದಿ ಆಗುತ್ತಿದೆ.